
(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ವಾಷಿಂಗ್ಟನ್ (ಅಮೇರಿಕಾ) – ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಲಿಯೋ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಉಂಟಾದ ನಂತರ, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರವನ್ನು ಪ್ರಸಾರ ಮಾಡಿದ್ದರು. ಈ ಚಿತ್ರದಲ್ಲಿ ತಮ್ಮನ್ನು ಯೇಸು ಕ್ರಿಸ್ತನ ರೂಪದಲ್ಲಿ ತೋರಿಸಿಕೊಂಡಿದ್ದರು. ಧಾರ್ಮಿಕ ಮುಖಂಡರು ಈ ಚಿತ್ರವು ‘ದೈವನಿಂದನೆ’ಯಾಗಿದೆ ಎಂದು ಹೇಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ, ಟ್ರಂಪ್ ಅವರು ಸಾಮಾಜಿಕ ಜಾಲತಾಣದಿಂದ ಆ ಚಿತ್ರವನ್ನು ತೆಗೆದುಹಾಕಿದ್ದಾರೆ.
ತಮ್ಮನ್ನು ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಟ್ರಂಪ್ ಅವರು ತಳ್ಳಿಹಾಕಿದ್ದಾರೆ. ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಚಿತ್ರವನ್ನು ಪ್ರಸಾರ ಮಾಡಿದಾಗ ನಾನು ಒಬ್ಬ ‘ವೈದ್ಯ’ನಾಗಿದ್ದೇನೆ ಮತ್ತು ನಾನು ‘ರೆಡ್ ಕ್ರಾಸ್’ (ಯುದ್ಧ ಮತ್ತು ವಿಪತ್ತಿನ ಸಮಯದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವ ಸಂಸ್ಥೆ) ಗೆ ಸಂಬಂಧಿಸಿದ್ದೇನೆ ಎಂದು ನನಗೆ ಅನಿಸಿತು. ನಾನು ಜನರನ್ನು ಗುಣಪಡಿಸುವ ಕೆಲಸವನ್ನು ಮಾಡುತ್ತಲೇ ಇರುತ್ತೇನೆ ಎಂದು ಹೇಳಿದರು.
ಚಿತ್ರದಲ್ಲಿ ಏನಿತ್ತು?
ಟ್ರಂಪ್ ಅವರು ಪ್ರಸಾರ ಮಾಡಿದ ಚಿತ್ರವು ‘ಎಐ’ (ಕೃತಕ ಬುದ್ಧಿಮತ್ತೆ) ನಿರ್ಮಿತವಾಗಿತ್ತು. ಈ ಚಿತ್ರದಲ್ಲಿ ಅವರು ಕೆಂಪು ಮತ್ತು ಬಿಳಿ ಬಣ್ಣದ ನಿಲುವಂಗಿಯನ್ನು ಧರಿಸಿದ್ದರು. ಟ್ರಂಪ್ ಓರ್ವ ಅನಾರೋಗ್ಯ ಪೀಡಿತ ವ್ಯಕ್ತಿಯ ಹಣೆಯನ್ನು ಸ್ಪರ್ಶಿಸುತ್ತಿದ್ದು, ಅವರ ಎರಡೂ ಕೈಗಳು ಮತ್ತು ತಲೆಯಿಂದ ಬೆಳಕು ಹೊರಹೊಮ್ಮುತ್ತಿರುವುದನ್ನು ತೋರಿಸಲಾಗಿತ್ತು. ಅವರ ಹಿಂದೆ ಅಮೇರಿಕಾದ ಧ್ವಜವನ್ನು ತೋರಿಸಲಾಗಿತ್ತು, ಹಾಗೆಯೇ ಕೆಲವು ಜನರು ಅವರನ್ನು ಗೌರವದಿಂದ ನೋಡುತ್ತಿರುವುದು ಕಂಡುಬರುತ್ತಿತ್ತು.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಮುಂಬಯಿ ಲೋಕಲ್ ನಲ್ಲಿನ ಮತಾಂತರ ಮತ್ತು ಢೋಂಗಿತನದ ಹಿಂದೆ ಅಡಗಿರುವ ಗಂಡಾಂತರವನ್ನು ನಿಯಂತ್ರಿಸಲು ವಿಶೇಷ ನಿಯಮಾವಳಿ ಸಿದ್ಧಪಡಿಸಲಾಗುವುದು !
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!