ಇರಾನ್ ನಿಂದ ಬಹರೇನ್, ಸೌದಿ ಅರೇಬಿಯಾ, ಕತಾರ್, ಸಂಯುಕ್ತ ಅರಬ್ ಅಮಿರೇಟ್ಸ್ ಮತ್ತು ಜೋರ್ಡಾನ್ ಗೆ ಬೇಡಿಕೆ

ತೆಹರಾನ್ (ಇರಾನ್) – ಇರಾನ್ ಮೇಲೆ ದಾಳಿ ಮಾಡಲು ಅಮೇರಿಕಾ ಮತ್ತು ಇಸ್ರೇಲ್ ಗೆ ತಮ್ಮ ಭೂಭಾಗವನ್ನು ಬಳಸಲು ಅವಕಾಶ ಮಾಡಿಕೊಟ್ಟ ಬಹರೇನ್, ಸೌದಿ ಅರೇಬಿಯಾ, ಕತಾರ್, ಸಂಯುಕ್ತ ಅರಬ್ ಅಮಿರೇಟ್ಸ್ ಮತ್ತು ಜೋರ್ಡಾನ್ ದೇಶಗಳು ಹಾನಿಪರಿಹಾರ ನೀಡಬೇಕು ಎಂದು ಇರಾನ್ ವಿಶ್ವಸಂಸ್ಥೆಯ ಬಳಿ ಬೇಡಿಕೆಯನ್ನಿಟ್ಟಿದೆ. ಈ ಸಂಘರ್ಷದಲ್ಲಿ ಅಮೇರಿಕಾವನ್ನು ಬೆಂಬಲಿಸುವ ಮೂಲಕ ಅರಬ್ ದೇಶಗಳು ತಪ್ಪು ಮಾಡಿವೆ ಎಂದು ಇರಾನ್ ಹೇಳಿದೆ.
೧. ಬಹರೇನ್, ಸೌದಿ ಅರೇಬಿಯಾ, ಕತಾರ್, ಸಂಯುಕ್ತ ಅರಬ್ ಅಮಿರೇಟ್ಸ್ ಮತ್ತು ಜೋರ್ಡಾನ್ ದೇಶಗಳು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಜಮಾಲ್ ಫಾರೇಸ್ ಅಲ್ರೋವಾಯಿ ಅವರಿಗೆ ಪತ್ರ ಬರೆದಿದ್ದವು.
೨. ಇದರಲ್ಲಿ ಈ ದೇಶಗಳು ಇರಾನ್ ನಡೆಸಿದ ಆಕ್ರಮಣದಿಂದ ತಮಗಾದ ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದವು; ಆದರೆ ವಿಶ್ವಸಂಸ್ಥೆಯಲ್ಲಿನ ಇರಾನ್ ನ ಕಾಯಂ ಪ್ರತಿನಿಧಿ ಅಮಿರ್-ಸಯೀದ್ ಇರವಾನಿ ಅವರು ಈ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ.
೩. ‘ಈ ಎಲ್ಲಾ ದೇಶಗಳು ಇರಾನ್ ವಿರುದ್ಧ ವಿಶ್ವಸಂಸ್ಥೆಯ ಕಲಂ ೫೧ (ಸ್ವರಕ್ಷಣೆ ಹಕ್ಕು) ಅನ್ನು ಕಾನೂನುಬದ್ಧವಾಗಿ ಅನ್ವಯಿಸಲು ಸಾಧ್ಯವಿಲ್ಲ. ಏಕೆಂದರೆ ಈ ದೇಶಗಳು ಅಮೇರಿಕಾ-ಇಸ್ರೇಲ್ ನ ಆಕ್ರಮಣಕ್ಕೆ ಸಹಾಯ ಮಾಡಿದ್ದವು’, ಎಂದು ಇರಾನ್ ಸ್ಪಷ್ಟಪಡಿಸಿದೆ.
೪. ಇರಾನ್ ಗೆ ಸ್ವರಕ್ಷಣೆಯ ಹಕ್ಕಿದೆ. ಇರಾನ್ ನ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಲಾದ ಕೆಲವು ಆಕ್ರಮಣಗಳು ಇದೇ ದೇಶಗಳ ಮೂಲಕ ನಡೆದಿವೆ.
೫. ಸಂಯುಕ್ತ ಅರಬ್ ಅಮಿರೇಟ್ಸ್, ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್ ದೇಶಗಳ ಭೂಭಾಗ ಹಾಗೂ ವೈಮಾನಿಕ ಪ್ರದೇಶವನ್ನು ಇರಾನ್ ಮೇಲೆ ದಾಳಿ ಮಾಡಲು ಬಳಸಿಕೊಳ್ಳಲಾಗಿದೆ. ಈ ೫ ಅರಬ್ ದೇಶಗಳು ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಭೂಭಾಗದ ಬಳಕೆಯನ್ನು ನಿರ್ಬಂಧಿಸಬೇಕು ಎಂದು ಇರಾನ್ ಒತ್ತಾಯಿಸಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation