ಸಮುದ್ರದಲ್ಲಿಯೂ ನಿಮ್ಮನ್ನು ಉಳಿಯಲು ಬಿಡುವುದಿಲ್ಲ ! - ಪಾಕಿಸ್ತಾನಕ್ಕೆ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ಸವಾಲು

ಕ್ವೆಟ್ಟಾ (ಬಲೂಚಿಸ್ತಾನ) – ಕುತಂತ್ರಿ ಪಾಕಿಸ್ತಾನದಿಂದ ತನ್ನದೇ ಆದ ಪ್ರತ್ಯೇಕ ಅಸ್ತಿತ್ವವನ್ನು ನಿರ್ಮಿಸಲು ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ‘ಬಲೂಚ್ ಲಿಬರೇಷನ್ ಆರ್ಮಿ’, ಅಂದರೆ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಈಗ ತಮ್ಮದೇ ಆದ ನೌಕಾದಳವನ್ನು ಸ್ಥಾಪಿಸಿದ್ದಾರೆ. ಈ ಸಂಘಟನೆಯು ತನ್ನ ಮೊದಲ ಸಮುದ್ರ ಕಾರ್ಯಾಚರಣೆಯಲ್ಲಿ ೩ ಪಾಕಿಸ್ತಾನಿ ನೌಕಾಪಡೆ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ದಾವೆ ಮಾಡಿದೆ.
Balochistan Liberation Army (BLA) has now established a Navy to checkmate Pakistan!
"We won't let you survive even in the sea!" – Freedom fighters of BLA challenge Pakistan.#Baloch #BLA pic.twitter.com/vbQIDuRa4r
— Sanatan Prabhat (@SanatanPrabhat) April 14, 2026
ಸಂಘಟನೆಯ ‘ಹಕ್ಕಾಲ್’ ಎಂಬ ಮಾಧ್ಯಮ ವಿಭಾಗವು ಒಂದು ವಿಡಿಯೋವನ್ನು ಪ್ರಸಾರ ಮಾಡಿದ್ದು, ಅದರಲ್ಲಿ ಮುಖವಾಡ ಧರಿಸಿದ ೪ ಸ್ವಾತಂತ್ರ್ಯ ಹೋರಾಟಗಾರರು ಸಮುದ್ರದ ಕಡೆಗೆ ಹೋಗುತ್ತಿರುವುದು ಮತ್ತು ನಂತರ ‘ಸ್ಪೀಡ್ ಬೋಟ್’ನಲ್ಲಿ ಕುಳಿತುಕೊಳ್ಳುವುದು ಕಂಡುಬರುತ್ತಿದೆ. ತದನಂತರ ಅವರು ಸಮುದ್ರದಲ್ಲಿರುವ ‘ಪಾಕಿಸ್ತಾನ್ ಕೋಸ್ಟ್ ಗಾರ್ಡ್’ನ ನೌಕೆಯ ದಿಕ್ಕಿನಲ್ಲಿ ತೆರಳುತ್ತಿರುವುದು ಕಾಣಿಸುತ್ತಿದೆ. ಅಲ್ಲಿ ಅವರು ಮನಸೋಇಚ್ಛೆ ಗುಂಡಿನ ದಾಳಿ ನಡೆಸುತ್ತಿದ್ದು, ಅದರಲ್ಲಿ ಪಾಕಿಸ್ತಾನ ನೌಕಾಪಡೆಯ ೩ ಸೈನಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯು ಏಪ್ರಿಲ್ ೧೨ ರಂದು ಬೆಳಿಗ್ಗೆ ನಡೆದಿದ್ದು, ಗ್ವಾದರ್ ಜಿಲ್ಲೆಯ ಜಿವಾನಿ ಪರಿಸರದ ‘ಮಿಲ್ ತಿಯಾಬ್’ ಎಂಬ ಭಾಗದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ದಾಳಿಗೂ ಮುನ್ನ, ಅಂದರೆ ವಿಡಿಯೋದ ಆರಂಭದಲ್ಲಿ ಅವರು, ಈ ಭೂಮಿಯ ಮೇಲೆ ಬಲೂಚರು ಜೀವಂತವಾಗಿರುವವರೆಗೂ, ನಾವು ನಿಮ್ಮನ್ನು ಈ ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿಯೂ ಉಳಿಯಲು ಬಿಡುವುದಿಲ್ಲ. ನಾವು ಇಂದೂ ಸಿದ್ಧರಿದ್ದೇವೆ, ನಿನ್ನೆಯೂ ಸಿದ್ಧರಿದ್ದೆವು ಮತ್ತು ಮುಂದೆಯೂ ಸಿದ್ಧರಿರುತ್ತೇವೆ. ನಿಮ್ಮನ್ನು ಎಲ್ಲೆಡೆ ಗುರಿ ಮಾಡಲಾಗುವುದು, ಎಂದು ಹೇಳುತ್ತಿದ್ದಾರೆ.
‘ಹಮಾಲ್ ಮೆರಿಟೈಮ್ ಡಿಫೆನ್ಸ್ ಫೋರ್ಸ್’ ಹೆಸರಿನಲ್ಲಿ ಅಧಿಕೃತ ನೌಕಾಪಡೆ ಶಾಖೆಯ ಸ್ಥಾಪನೆ !ಬಲೂಚಿಸ್ತಾನ ಲಿಬರೇಷನ್ ಆರ್ಮಿಯ ವಕ್ತಾರ ಜಿಯಂದ್ ಬಲೂಚ್ ಅವರು, ಸಂಘಟನೆಯು ‘ಹಮಾಲ್ ಮೆರಿಟೈಮ್ ಡಿಫೆನ್ಸ್ ಫೋರ್ಸ್’ ಹೆಸರಿನಲ್ಲಿ ಅಧಿಕೃತ ನೌಕಾಪಡೆಯ ಶಾಖೆಯನ್ನು ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ. ಬಲೂಚಿ ಸಮುದ್ರವನ್ನು ಸಂರಕ್ಷಿಸುವುದು ಈ ಶಾಖೆಯ ಉದ್ದೇಶವಾಗಿದೆ. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation