ಯುದ್ಧದ ಪರಿಸ್ಥಿತಿಯಲ್ಲಿ ಯುವಕರಿಂದ ವಿಜಯದ ಸಂಕಲ್ಪ !
ಹನುಮಾನ ಜಯಂತಿಯ ನಿಮಿತ್ತ ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ !

ಬೆಂಗಳೂರು – ಪ್ರಸ್ತುತ ದೇಶ ಮತ್ತು ಧರ್ಮ ಸಂಕಟದಲ್ಲಿದ್ದು, ಎಲ್ಲೆಡೆ ಭಯದ ವಾತಾವರಣವಿದೆ. ಇಂತಹ ಕಾಲದಲ್ಲಿ ಪ್ರತಿಯೊಬ್ಬ ಹಿಂದೂವಿನಲ್ಲಿ ಮಾರುತಿಯಲ್ಲಿರುವಂತೆ ಶೌರ್ಯ, ಶಕ್ತಿ ಮತ್ತು ಭಕ್ತಿ ಜಾಗೃತವಾಗಲಿ ಹಾಗೂ ಮುಂಬರುವ ಭೀಕರ ಆಪತ್ಕಾಲದಲ್ಲಿ ಮಾರುತಿಯ ಆಶೀರ್ವಾದದಿಂದ ಹಿಂದೂಗಳ ವಿಜಯವು ಸುನಿಶ್ಚಿತವಾಗಲಿ, ಇದೇ ಸಂಕಲ್ಪನೆಯಿಂದ ಶ್ರೀ ಹನುಮಾನ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ೮೫೦ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು, ಹಾಸನ ಸೇರಿದಂತೆ ೨೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ‘ಸಾಮೂಹಿಕ ಗದಾಪೂಜೆ’ ಮಾಡಲಾಯಿತು. ವಿವಿಧ ರಾಜ್ಯಗಳಲ್ಲಿ ನಡೆದ ಸಾಮೂಹಿಕ ಗದಾಪೂಜೆಯಲ್ಲಿ ಸಾವಿರಾರು ಯುವಕರು ಮತ್ತು ಧರ್ಮಪ್ರೇಮಿಗಳು ಸಹಭಾಗಿಯಾದರು.

೧. ‘ಗದಾಪೂಜೆ’ ವಿಧಿ, ಶ್ರೀ ಹನುಮಂತನ ಆರತಿ, ಮಾರುತಿ ಸ್ತೋತ್ರಪಠಣ, ಶಂಖನಾದ ಮತ್ತು ಸಾಮೂಹಿಕ ಪ್ರಾರ್ಥನೆಯ ನಂತರ ‘ಶ್ರೀ ಹನುಮತೇ ನಮಃ |’ ಎಂಬ ಸಾಮೂಹಿಕ ನಾಮಜಪವನ್ನು ಈ ಸಮಯದಲ್ಲಿ ಮಾಡಲಾಯಿತು. ‘ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ನಮ್ಮಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ?’ ಎಂಬ ಬಗ್ಗೆ ಮಾರ್ಗದರ್ಶನವನ್ನೂ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ ತೆಗೆದುಕೊಳ್ಳಲಾಯಿತು.
೨. ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ೪ ವರ್ಷಗಳಿಂದ ಸಾಮೂಹಿಕ ‘ಗದಾಪೂಜೆ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಈ ವರ್ಷವೂ ಹಿಂದುತ್ವನಿಷ್ಠರು ಮತ್ತು ಭಕ್ತರ ಉತ್ತಮ ಸಹಭಾಗಿತ್ವ ಇದರಲ್ಲಿ ಕಂಡುಬಂದಿತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!