ಸಂತ್ರಸ್ತ ವ್ಯಕ್ತಿಯಿಂದ 17 ಲಕ್ಷ ರೂಪಾಯಿ ಸುಲಿಗೆ
ಆರೋಪಿ ಮಹಿಳೆಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್

ಬಾಗಪತ್ (ಉತ್ತರ ಪ್ರದೇಶ) – ದೆಹಲಿಯ 30 ವರ್ಷದ ಹಿನಾ ಅಲಿಯಾಸ್ ಮುಬ್ಬಾಸರೀನ್ ಎಂಬ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಪೊಲೀಸ್ ಕಾನ್‌ಸ್ಟೇಬಲ್ ಅನ್ನು ಪ್ರೇಮಪಾಶದಲ್ಲಿ ಸಿಲುಕಿಸಿದ್ದಾಳೆ. ಬಳಿಕ ಆರೋಪಿ ಮಹಿಳೆಯು ಸಂತ್ರಸ್ತ ಹಿಂದೂ ಪುರುಷನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿ, ಆತನಿಗೆ ಬೆದರಿಕೆ ಹಾಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮಾಡಿದ್ದಾಳೆ. ಅಲ್ಲದೆ, ಸಂತ್ರಸ್ತ ಹಿಂದೂ ಪುರುಷನಿಂದ 17 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾಳೆ. ಉತ್ತರ ಪ್ರದೇಶದ ಬಾಗಪತ್ ಪೊಲೀಸರು ದೆಹಲಿಯಲ್ಲಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
🚨 Baghpath, Uttar Pradesh: “Love Trap” Case Involving Police Constable
A Hindu police constable was trapped in a relationship, threatened, and coerced into religious conversion.
💰 ₹17 lakh extorted
⚖️ Accused filed a rape complaint to exert pressure
🧾 Victim converted… pic.twitter.com/niIc7qrAzE
— Sanatan Prabhat (@SanatanPrabhat) April 13, 2026
1. ಬಾಗಪತ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 35 ವರ್ಷದ ಪೊಲೀಸ್ ಕಾನ್‌ಸ್ಟೇಬಲ್ ಶ್ರೀಕಾಂತ್ ಅವರು ತಮ್ಮ ದೂರಿನಲ್ಲಿ, ತಾವು ಗಾಜಿಯಾಬಾದ್‌ಗೆ ವರ್ಗಾವಣೆಯಾದಾಗ ದೆಹಲಿಯ ಹಿನಾ ಪರಿಚಯವಾಗಿತ್ತು ಎಂದು ತಿಳಿಸಿದ್ದಾರೆ. ಶ್ರೀಕಾಂತ್ ಅವರ ಪತ್ನಿ ತೀರಿಕೊಂಡಿರುವುದರ ಲಾಭ ಪಡೆದ ಹಿನಾ, ಅವರನ್ನು ತನ್ನ ಪ್ರೇಮಪಾಶದಲ್ಲಿ ಸಿಲುಕಿಸಿದ್ದಳು.
2. ಮುಂದೆ, ಶ್ರೀಕಾಂತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ವಿಚಾರವಾಗಿ ಇಬ್ಬರ ನಡುವೆ ಜಗಳವಾಯಿತು. ಆ ನಂತರ ಹಿನಾ ದೆಹಲಿಯಲ್ಲಿ ಶ್ರೀಕಾಂತ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದಳು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಬಿಡುಗಡೆಯಾದ ಬಳಿಕ ಶ್ರೀಕಾಂತ್ ಹಿನಾಳನ್ನು ಸಂಪರ್ಕಿಸಿದರು. ಆಗ ಅವಳು, ಇಸ್ಲಾಂ ಧರ್ಮ ಸ್ವೀಕರಿಸಿದರೆ ಆತನ ಪರವಾಗಿ ಸಾಕ್ಷಿ ಹೇಳುವುದಾಗಿ ಮತ್ತು ತನ್ನ ಗಂಡನನ್ನು ಬಿಟ್ಟು ಅವನನ್ನು ಮದುವೆಯಾಗುವುದಾಗಿ ಹೇಳಿದಳು.
3. ಮಹಿಳೆಯ ಮಾತಿನಂತೆ ಪೊಲೀಸ್ ಕಾನ್‌ಸ್ಟೇಬಲ್ ಮತಾಂತರಗೊಂಡರು; ಆದರೆ ಆರೋಪಿ ಮಹಿಳೆ ಮತ್ತು ಆಕೆಯ ಸಹಚರರು ವಿವಿಧ ಕಾರಣಗಳನ್ನು ನೀಡಿ ಅವರನ್ನು ವಂಚಿಸಲು ಪ್ರಾರಂಭಿಸಿದರು. ಆರೋಪಿ ಮಹಿಳೆ ಪ್ರಕರಣವನ್ನು ಹಿಂಪಡೆಯಲಿಲ್ಲ ಮತ್ತು ಶ್ರೀಕಾಂತ್‌ಗೆ ಬೆದರಿಕೆ ಹಾಕಿ ಅವರಿಂದ 17 ಲಕ್ಷ ರೂಪಾಯಿ ಸುಲಿಗೆ ಮಾಡಿದಳು.
4. ಕೊನೆಗೆ ಶ್ರೀಕಾಂತ್ ಅವರು ಬಾಗಪತ್‌ನಲ್ಲಿ ಮಹಿಳೆಯ ವಿರುದ್ಧ ದೂರು ದಾಖಲಿಸಿದರು. ಬಾಗಪತ್ ಪೊಲೀಸರು ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!