ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ ಅವರ ಕರೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಜನಗಣತಿಯ ಅರ್ಜಿಯನ್ನು ನೀಡುವಾಗ ಧರ್ಮದ ಜಾಗದಲ್ಲಿ ಕೇವಲ ‘ಇಸ್ಲಾಂ’ ಎಂದೇ ಬರೆಯಬೇಕು. ಹಾಗೆಯೇ ಮಾತೃಭಾಷೆಯ ಕಾಲಂನಲ್ಲಿ ಹಿಂದಿ ಬದಲಾಗಿ ‘ಉರ್ದು’ ಎಂದು ಬರೆಯಬೇಕೆಂದು ಇಲ್ಲಿನ ಪ್ರಸಿದ್ಧ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
Maulana Khalid Rasheed Firangi Mahali has urged Muslims to mark “Islam” as religion and “Urdu” as mother tongue in census forms.
If such appeals are being made, is it unreasonable to expect Hindus to assert their identity too, by writing “Hindu” as religion and “Sanskrit” as… pic.twitter.com/OI1jGPr108
— Sanatan Prabhat (@SanatanPrabhat) April 13, 2026
ಮೌಲಾನಾ ಮಹಲಿ ಅವರ ಪ್ರಕಾರ, ಹಲವು ಬಾರಿ ಜನರು ಸಾಮಾನ್ಯವಾಗಿ ಹಿಂದಿ ಎಂದು ಬರೆಯುತ್ತಾರೆ; ಆದರೆ ತಮ್ಮ ನಿಖರವಾದ ಗುರುತನ್ನು ದಾಖಲಿಸುವುದು ಅತ್ಯಗತ್ಯವಾಗಿದೆ. ಸರಕಾರವು ಸರಕಾರಿ ಯೋಜನೆಗಳನ್ನು ಸಿದ್ಧಪಡಿಸುವಾಗ ಇದೇ ಮಾಹಿತಿಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ, ಆದ್ದರಿಂದ ಸ್ಪಷ್ಟ ಮಾಹಿತಿ ಇದ್ದರೆ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸುಲಭವಾಗುತ್ತದೆ.
ಇದಕ್ಕಾಗಿ ಜನಗಣತಿಯ ಅರ್ಜಿಯಲ್ಲಿ ಎಲ್ಲಾ ಹಿಂದೂಗಳು ‘ಸಂಸ್ಕೃತ’ ಎಂದು ಉಲ್ಲೇಖಿಸಬೇಕು!
ಪ್ರತಿಯೊಬ್ಬರ ಮಾತೃಭಾಷೆ ಬೇರೆ ಬೇರೆಯಾಗಿದ್ದರೂ, ಭಾರತದ ಮೂಲ ಭಾಷೆ ದೇವಭಾಷೆಯಾದ ಸಂಸ್ಕೃತವಾಗಿದೆ. ಹಿಂದೂಗಳು ಪ್ರತಿದಿನದ ಪ್ರಾರ್ಥನೆ, ಮಂತ್ರ, ಶ್ಲೋಕ ಹಾಗೂ ಪೂಜಾ ವಿಧಿ-ವಿಧಾನಗಳಲ್ಲಿ ಸಂಸ್ಕೃತವನ್ನೇ ಬಳಸುತ್ತಾರೆ. ಸಂಸ್ಕೃತವು ಎಲ್ಲಾ ಭಾಷೆಗಳ ಜನನಿಯಾಗಿದೆ. ಈ ಭಾಷೆಯನ್ನು ಜೀವಂತವಾಗಿಡುವುದು ಎಲ್ಲರ ಜವಾಬ್ದಾರಿಯಾಗಿದೆ. ೨೦೧೧ ರ ಜನಗಣತಿಯ ಪ್ರಕಾರ ಇಡೀ ದೇಶದಲ್ಲಿ ಸಂಸ್ಕೃತ ಭಾಷಿಕರ ಸಂಖ್ಯೆ ಕೇವಲ ೨ ಲಕ್ಷವಾಗಿತ್ತು, ಆದರೆ ಅರೇಬಿಕ್, ಪರ್ಶಿಯನ್ ಅಥವಾ ಉರ್ದುವಿನಂತಹ ಪರಕೀಯ ಮತ್ತು ಭಾರತದೊಂದಿಗೆ ದೂರದ ಸಂಬಂಧವೂ ಇಲ್ಲದ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿತ್ತು ಮತ್ತು ವಿದೇಶಿ ಭಾಷೆ ಮಾತನಾಡುವವರಿಗೆ ಸರಕಾರಿ ಅನುದಾನ ಹಾಗೂ ಬೆಂಬಲವೂ ಸಿಗುತ್ತಿತ್ತು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ