ಏಪ್ರಿಲ್ ೨೧ ರಂದು 'ಆದಿ ಶಂಕರಾಚಾರ್ಯರ ಜಯಂತಿ’ ಇದೆ. ಅದರ ಪ್ರಯುಕ್ತ...

ತಮ್ಮ ವೃದ್ಧ ತಾಯಿಯ ಜವಾಬ್ದಾರಿಯನ್ನು ಯೋಗ್ಯ ವ್ಯಕ್ತಿಯೊಬ್ಬರಿಗೆ ಒಪ್ಪಿಸಿ, ಶಂಕರರ ಪಯಣವು ಮೂರ್ತದಿಂದ ಅಮೂರ್ತದ ಕಡೆಗೆ, ಸೀಮಿತ ಸ್ಥಳದಿಂದ ವಿರಾಟ ಸೃಷ್ಟಿಯ ಕಡೆಗೆ ಅಂದರೆ ‘ಶಂಕರ’ನಿಂದ ‘ಶಂಕರಾಚಾರ್ಯ’ರಾಗುವ ಕಡೆಗೆ ಆರಂಭವಾಯಿತು. ಭಗವಾನ್ ನಾರಾಯಣನ ಪುತ್ರ ಬ್ರಹ್ಮದೇವ, ಅವನ ಪುತ್ರ ವಸಿಷ್ಠ, ಅವನ ಪುತ್ರ ಶಕ್ತಿ, ಅವನ ಪುತ್ರ ಪರಾಶರ, ಅವನ ಪುತ್ರ ವ್ಯಾಸ, ಅವನ ಪುತ್ರ ಶುಕ ಮತ್ತು ಶುಕರ ಪುತ್ರರಾದ ಗೌಡಪಾದಾಚಾರ್ಯರು ಸನ್ಯಾಸ ದೀಕ್ಷೆ ಪಡೆದು ನರ್ಮದಾ ತೀರದ ಓಂಕಾರೇಶ್ವರದಲ್ಲಿ ಸಮಾಧಿಸ್ಥ ರಾಗಿದ್ದಾಗ ಅವರಿಗೆ ಶ್ರೀಕೃಷ್ಣನ ದರ್ಶನವಾಯಿತು. ಭಗವಂತನು ಅವರಿಗೆ ಹೀಗೆಂದನು, ‘೮ ವರ್ಷದ ಸನ್ಯಾಸಿಯೊಬ್ಬನು ನಿನ್ನ ಬಳಿಗೆ ಬರಲಿದ್ದಾನೆ, ಅವನು ಸಾಕ್ಷಾತ್ ಶಿವನ ಅವತಾರವೇ ಆಗಿದ್ದಾನೆ. ಅವನಿಗೆ ಸಕಲ ಜ್ಞಾನವನ್ನು ನೀಡಿ ಲೌಕಿಕವಾಗಿ ಆಚಾರ್ಯನನ್ನಾಗಿ ಮಾಡು. ಇದೇ ನಿನ್ನ ಜೀವನದ ಅಂತಿಮ ಕಾರ್ಯ. ಈ ಸನ್ಯಾಸಿ ಕೇರಳದಿಂದ ಬರುತ್ತಿದ್ದಾನೆ.’ ಆ ಸನ್ಯಾಸಿಯೇ ಶಂಕರ !

ಗೌಡಪಾದಾಚಾರ್ಯರು ಮತ್ತು ಶಂಕರರ ಭೇಟಿಯ ಪ್ರಸಂಗವು ಬಹಳ ರೋಚಕವಾಗಿದೆ. ಆಚಾರ್ಯರ ಗುಹೆಯನ್ನು ತಲುಪುವಷ್ಟರಲ್ಲಿ ಶಂಕರರ ಬಾಲ್ಯದ ಅಸಾಧಾರಣ ಪ್ರತಿಭೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿತ್ತು. ಬ್ರಹ್ಮಜ್ಞಾನದ ಪ್ರಾಪ್ತಿಗಾಗಿ ಆಚಾರ್ಯರ ಬಳಿಗೆ ಹೋದಾಗ, ಅವರು ‘ಹೇ ವತ್ಸ, ನೀನು ಯಾರು ?’ ಎಂದು ಪ್ರಶ್ನಿಸಿದರು. ಆಗ ಶಂಕರರು ‘ಆತ್ಮಪಂಚಕ’ ಮತ್ತು ‘ದಶಶ್ಲೋಕ’ಗಳ ಮೂಲಕ ಉತ್ತರಿಸಿದರು. ಶಂಕರರ ಈ ಶೀಘ್ರ ಕವಿತ್ವವನ್ನು ಕಂಡು ಗುರುಗಳಿಗೂ ಆಶ್ಚರ್ಯ ವಾಯಿತು. ಒಂದು ಶುಭ ದಿನದಂದು ಅನುಷ್ಠಾನ ಪೂರ್ವಕವಾಗಿ ಸನ್ಯಾಸವನ್ನು ಸ್ವೀಕರಿಸಿದ ನಂತರ ಅವರಿಗೆ ‘ಶಂಕರ ಭಗವತ್ಪಾದಾಚಾರ್ಯ’ ಎಂಬ ಹೆಸರನ್ನು ನೀಡಲಾಯಿತು, ಅವರೇ ಮುಂದೆ ಶಂಕರಾಚಾರ್ಯರಾದರು ! ಹಠಯೋಗ, ರಾಜ ಯೋಗ, ಜ್ಞಾನಯೋಗ ಇವೆಲ್ಲವನ್ನೂ ಕಲಿಯಲು ಸಾಮಾನ್ಯ ಜನರಿಗೆ ಇಡೀ ಆಯುಷ್ಯವೇ ಬೇಕಾಗುತ್ತದೆ; ಆದರೆ ಅಸಾಮಾನ್ಯ ಮೇಧಾಶಕ್ತಿ ಮತ್ತು ಸ್ಮರಣಶಕ್ತಿಯಿಂದಾಗಿ ಶಂಕರಾಚಾರ್ಯರು ಈ ಜ್ಞಾನವನ್ನು ಕೇವಲ ೩ ವರ್ಷಗಳಲ್ಲಿ ಕರಗತ ಮಾಡಿಕೊಂಡರು. ಆಕಾಶಮಾರ್ಗದಲ್ಲಿ ಸಂಚಾರ, ಪರಕಾಯ ಪ್ರವೇಶ, ಇಚ್ಛಾಮರಣ, ದೂರದ ಶಬ್ದಗಳನ್ನು ಕೇಳುವುದು ಮತ್ತು ನೋಡುವುದು, ಧ್ಯಾನಧಾರಣೆಯಂತಹ ಸಕಲ ಸಿದ್ಧಿಗಳು ಮತ್ತು ಶಾಸ್ತ್ರಗಳಲ್ಲಿ ಅವರು ಪಾರಂಗತರಾದರು. ಅವರ ಮುಂದಿನ ಜೀವನವು ಅನೇಕರ ವಿರೋಧದ ನಡುವೆಯೂ ಜ್ಞಾನಾರ್ಜನೆ, ಜ್ಞಾನದಾನ ಮತ್ತು ಲೋಕಕಲ್ಯಾಣದ ಹಿತದೃಷ್ಟಿಯಿಂದಲೇ ಮುಂದುವರಿಯಿತು. ೧೨ ರಿಂದ ೩೨ ವಯಸ್ಸಿನ ವರೆಗೆ ಅವರು ಧರ್ಮಪ್ರಸಾರ ಮತ್ತು ಜಾಗೃತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು.
– ಡಾ. ಸಚ್ಚಿದಾನಂದ ಶೆವಡೆ ಅವರ ‘ಪುನರುತ್ಥಾನ’ ಕಾದಂಬರಿಯಿಂದ
ಭಕ್ತಿಯ ಪ್ರಸಾರ ಮಾಡಿದ ರಾಮಾನುಜಾಚಾರ್ಯರು !
ಪರಶುರಾಮ ಜಯಂತಿ (ಏಪ್ರಿಲ್ ೧೯)
ಶ್ರೀ ಬಸವೇಶ್ವರ ಜಯಂತಿ (ಏಪ್ರಿಲ್ ೧೯)
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯಂದು ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !