ತಪ್ಪು ತಿದ್ದಿಕೊಳ್ಳಲು ‘ಟ್ರಾಯ್’ನಿಂದ ಅಂತಿಮ ಗಡುವು ನಿಗದಿ

ನವ ದೆಹಲಿ – ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಅಂದರೆ ‘ಟ್ರಾಯ್’ ಸಂಸ್ಥೆಯು ‘ರಿಲಯನ್ಸ್ ಜಿಯೋ’ದ ಕೆಲವು ಅಸ್ತಿತ್ವದಲ್ಲಿರುವ ರಿಚಾರ್ಜ್ ಪದ್ಧತಿಗಳನ್ನು ‘ಅಸ್ಪಷ್ಟ’ ಮತ್ತು ‘ತಾರತಮ್ಯದಿಂದ ಕೂಡಿದೆ’ ಎಂದು ಕರೆದಿದೆ. ನಿಯಂತ್ರಕ ಸಂಸ್ಥೆಯ ಪ್ರಕಾರ, ಈ ಸಂಸ್ಥೆಯು ಎಲ್ಲಾ ರಿಚಾರ್ಜ್ ಆಯ್ಕೆಗಳನ್ನು ಎಲ್ಲಾ ಗ್ರಾಹಕರಿಗೆ ಸಮಾನವಾಗಿ ಲಭ್ಯವಾಗುವಂತೆ ಮಾಡುತ್ತಿಲ್ಲ. ಇದರಿಂದಾಗಿ ಗ್ರಾಹಕರ ಮುಂದೆ ಸೀಮಿತ ಆಯ್ಕೆಗಳು ಉಳಿಯುತ್ತವೆ ಮತ್ತು ಅನೇಕ ಬಾರಿ ಗೊಂದಲ ನಿರ್ಮಾಣವಾಗುತ್ತದೆ.
ಮರೆ ಮಾಡಿರುವ ಯೋಜನೆಗಳ ವಾಸ್ತವ ಸ್ಥಿತಿ
೨೦೨೫ ರಲ್ಲಿ ಜಿಯೋ ಸಂಸ್ಥೆಯು ತನ್ನ ಕೆಲವು ಅತ್ಯಂತ ಅಗ್ಗದ ‘ಪ್ರತಿದಿನ ೧ ಜಿಬಿ ಡೇಟಾ’ ಯೋಜನೆಗಳನ್ನು ಮುಖ್ಯ ವೇದಿಕೆಯಿಂದ ತೆಗೆದುಹಾಕಿತ್ತು. ಆ ಸಮಯದಲ್ಲಿ ಈ ಯೋಜನೆಗಳು ಕೇವಲ ಚಿಲ್ಲರೆ ಅಂಗಡಿಗಳಲ್ಲಿ (ರಿಟೇಲ್ ಶಾಪ್) ಲಭ್ಯವಿರುತ್ತವೆ ಎಂದು ಸಂಸ್ಥೆಯು ಹೇಳಿತ್ತು; ಆದರೆ ‘ಟ್ರಾಯ್’ ನಡೆಸಿದ ಸವಿಸ್ತಾರವಾದ ತನಿಖೆಯಲ್ಲಿ ಬೇರೆಯದೇ ಮಾಹಿತಿ ಹೊರಬಿದ್ದಿದೆ. ತನಿಖೆಯಲ್ಲಿ ೧೯೯ ಮತ್ತು ೨೪೯ ರೂಪಾಯಿ ಬೆಲೆಯ ಯೋಜನೆಗಳು ಕೇವಲ ಆಫ್ ಲೈನ್ ಅಂಗಡಿಗಳಿಗೆ ಸೀಮಿತವಾಗಿದ್ದವು, ಆದರೆ ೨೦೯ ರೂಪಾಯಿಯ ಒಂದು ಜನಪ್ರಿಯ ಯೋಜನೆಯು ಕೇವಲ ‘ಮೈ ಜಿಯೋ’ ಆಪ್‌ನಲ್ಲಿ ಲಭ್ಯವಿತ್ತು ಎಂಬುದು ಕಂಡುಬಂದಿದೆ. ಇದರ ಹೊರತಾಗಿ ಸಂಸ್ಥೆಯು ಕೆಲವು ವಿಶೇಷ ಯೋಜನೆಗಳನ್ನು ಕೇವಲ ಜಿಯೋ ಫೋನ್ ಮತ್ತು ಜಿಯೋ ಭಾರತ್ ಬಳಕೆದಾರರಿಗಾಗಿ ಮೀಸಲಿರಿಸಿತ್ತು.
ಟ್ರಾಯ್ ನೀಡಿದ ಅಂತಿಮ ಗಡುವು
ದೂರಸಂಪರ್ಕ ಸೇವೆಗಳಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಅನುಮತಿಸಲಾಗುವುದಿಲ್ಲ ಎಂದು ನಿಯಂತ್ರಕ ಸಂಸ್ಥೆಯು ಸ್ಪಷ್ಟಪಡಿಸಿದೆ. ಟ್ರಾಯ್ ಪ್ರಕಾರ, ಪ್ರತಿಯೊಬ್ಬ ಗ್ರಾಹಕನಿಗೆ ಸಂಸ್ಥೆಯ ಲಭ್ಯವಿರುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ನೋಡುವ ಮತ್ತು ತನಗಿಷ್ಟವಾದ ಯೋಜನೆಯನ್ನು ಆಯ್ಕೆ ಮಾಡುವ ಅಧಿಕಾರವಿದೆ, ಅವರು ಯಾವುದೇ ಸಾಧನವನ್ನು ಬಳಸುತ್ತಿದ್ದರೂ ಸಹ. ಇದೇ ಹಿನ್ನೆಲೆಯಲ್ಲಿ ಜಿಯೋ ಸಂಸ್ಥೆಗೆ ಏಪ್ರಿಲ್ ೧೪, ೨೦೨೬ ರವರೆಗೆ ಅಂತಿಮ ಗಡುವು ನೀಡಲಾಗಿದೆ. ಈ ಕಾಲಾವಧಿಯಲ್ಲಿ ಜಿಯೋ ತನ್ನ ಜಾಲತಾಣ (ವೆಬ್‌ಸೈಟ್), ಮೊಬೈಲ್ ಆಪ್, ಗ್ರಾಹಕ ಸೇವೆ ಮತ್ತು ಚಿಲ್ಲರೆ ಅಂಗಡಿಗಳಂತಹ ಎಲ್ಲಾ ಮಾಧ್ಯಮಗಳಲ್ಲಿ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಮಾನವಾಗಿ ಸಾರ್ವಜನಿಕಗೊಳಿಸುವುದು ಅವಶ್ಯಕವಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!