ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಿಸಲು ಪೊಲೀಸರ ನಕಾರ

ಧಾರವಾಡ – ನಗರದ ಕೆಲಗೇರಿಯಲ್ಲಿ ವಾಸಿಸುತ್ತಿದ್ದ 22 ವರ್ಷದ ತಂಗಮ್ಮ ಎಂಬ ವಿವಾಹಿತ ಯುವತಿ ಮೂರು ವರ್ಷಗಳ ಹಿಂದೆ ಮನೆಯ ಮುಂಭಾಗದ ಬಂಗಲೆಯಲ್ಲಿ ಕಾರು ಚಾಲಕನಾಗಿದ್ದ ಮುನ್ನಾ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು. ಈ ಬಗ್ಗೆ ತಂಗಮ್ಮಳ ತಾಯಿ ಮಂಜುಳಾ ಅವರು ಧಾರವಾಡದ ಉಪನಗರ (ಸಬ್-ಅರ್ಬನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು; ಆದರೆ ಆಗ ಪೊಲೀಸರು ಮುನ್ನಾ ವಿರುದ್ಧ ದೂರು ದಾಖಲಿಸಿಕೊಳ್ಳದೆ, ತಂಗಮ್ಮ ನಾಪತ್ತೆಯಾಗಿರುವ ಬಗ್ಗೆ ಮಾತ್ರ ದೂರು ದಾಖಲಿಸಿಕೊಂಡರು. ‘ಇಂದಿನವರೆಗೂ ಮುನ್ನಾ ಮತ್ತು ನನ್ನ ಮಗಳು ತಂಗಮ್ಮ ನಿಖರವಾಗಿ ಎಲ್ಲಿದ್ದಾರೆ?’ ಎಂಬುದರ ಕುರಿತು ಪೊಲೀಸರು ಯಾವುದೇ ಹುಡುಕಾಟ ನಡೆಸಿಲ್ಲ ಎಂದು ಮಂಜುಳಾ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಂಜುಳಾ ಅವರು,
1. ನನ್ನ ಮಗಳ ವಿವಾಹವು ಪರಿಚಯಸ್ಥ ಯುವಕನೊಂದಿಗೆ ನಡೆದಿತ್ತು; ಆದರೆ ಮಗಳು ನಮ್ಮೊಂದಿಗೇ (ತವರು ಮನೆಯಲ್ಲಿ) ವಾಸಿಸುತ್ತಿದ್ದಳು ಮತ್ತು ಆಕೆಯ ಪತಿ ಆಗಾಗ್ಗೆ ಅವಳನ್ನು ಭೇಟಿಯಾಗಲು ಬರುತ್ತಿದ್ದನು.
2. ನಾವು ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾಗ ನಮಗೆ ಓರ್ವ ವಕೀಲರ ಪರಿಚಯವಾಗಿತ್ತು. ಅಲ್ಲಿ ಮುನ್ನಾ ಎಂಬ ಮುಸ್ಲಿಂ ವ್ಯಕ್ತಿ ಕಾರು ಓಡಿಸುವ ಕೆಲಸ ಮಾಡುತ್ತಿದ್ದನು.
3. ನಾವು ಸ್ವಂತ ಮನೆ ಖರೀದಿಸಬೇಕಿತ್ತು. ಹಾಗಾಗಿ, ‘ಮನೆ ಹುಡುಕಿಕೊಡಿ’ ಎಂದು ಹೇಳಿ ನಾವು ಮುನ್ನಾ ಮತ್ತು ಆ ವಕೀಲರಿಗೆ 10 ಲಕ್ಷ ರೂಪಾಯಿ ನೀಡಿದ್ದೆವು.
4. 2023 ರಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮುನ್ನಾ ನನ್ನ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋದನು. ಈಗ ನನ್ನ ಬಳಿ ಹಣವೂ ಇಲ್ಲ, ಮಗಳೂ ಇಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!