(ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಅಂದರೆ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಮೇಲೆ ಪ್ರಭಾವ ಬೀರುವ ವ್ಯಕ್ತಿ)

ನ್ಯೂಯಾರ್ಕ್ – ಟೆಕ್ಸಾಸ್‌ನ ಬಲಪಂಥೀಯ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎಲಿಜಾ ಶೇಫರರವರ ವಿಡಿಯೋವೊಂದು ವ್ಯಾಪಕವಾಗಿ ಪ್ರಸಾರವಾಗಿದೆ. ಇದರಲ್ಲಿ ಆತನು ಭಾರತೀಯ ಹೆಸರುಗಳನ್ನು ಅಪಹಾಸ್ಯ ಮಾಡಿದ್ದಾನೆ ಮತ್ತು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಗತಿಗಳ ಮೇಲೆ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದಾನೆ.
೧. ವಿಡಿಯೋದಲ್ಲಿ ಶೇಫರ್ ಸ್ಥಳೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹೆಸರುಗಳ ಅಪಹಾಸ್ಯ ಮಾಡುತ್ತಿರುವುದು ಕಂಡುಬರುತ್ತದೆ. ಅವನು ಸಾಯಿ ಕೃಷ್ಣ, ಶ್ರೀಕಾಂತ ರೆಡ್ಡಿ, ವಿಜಯ ಕಾರ್ತಿಕ ಮತ್ತು ಬಾಬು ವೆಂಕಟ ಮುಂತಾದ ಹೆಸರುಗಳನ್ನು ‘ನಾಟ್ ಅಮೇರಿಕನ್ ಎನಫ್’, ಅಂದರೆ ‘ಸಾಕಷ್ಟು ಅಮೇರಿಕನ್ ಅನಿಸುತ್ತಿಲ್ಲ’, ಎಂದು ಕರೆಯುತ್ತಾ ಅವರನ್ನು ಅಪಹಾಸ್ಯ ಮಾಡಿದ್ದಾನೆ.
೨. ಚುನಾವಣೆಯಲ್ಲಿ ಯಹೂದಿ, ಭಾರತೀಯ ಮತ್ತು ಮುಸ್ಲಿಂ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ, ಆದರೆ ಕ್ರೈಸ್ತ ಅಭ್ಯರ್ಥಿಗಳು ಕಡಿಮೆಯಿದ್ದಾರೆ ಎಂದೂ ಆತ ಹೇಳಿದ್ದಾನೆ. ಇದರೊಂದಿಗೆ ಆತನು ನಗರದಲ್ಲಿ ದೇವಾಲಯಗಳು ಮತ್ತು ಮಸೀದಿಗಳ ಅಸ್ತಿತ್ವದ ಬಗ್ಗೆಯೂ ಪ್ರಶ್ನಿಸಿದ್ದಾನೆ.
೩. ವಿಡಿಯೋ ಪ್ರಸಾರವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಇದನ್ನು ‘ಜನಾಂಗೀಯ ನಿಂದನೆ’ ಮತ್ತು ‘ಪ್ರಚೋದನಕಾರಿ’ ಎಂದು ಕರೆದಿದ್ದಾರೆ. ಭಾರತೀಯ ಸಮುದಾಯವು ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆದು ಕಠಿಣ ಪರಿಶ್ರಮ ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಳ್ಳುತ್ತಿದೆ, ಆದ್ದರಿಂದ ಇಂತಹ ಟೀಕೆಗಳು ತಪ್ಪು ಮತ್ತು ಆಕ್ಷೇಪಾರ್ಹವಾಗಿವೆ ಎಂದು ಜನರು ಹೇಳುತ್ತಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation