
ಕಾಠಮಂಡು (ನೇಪಾಳ) – ಭಾರತೀಯ ನೋಂದಣಿ ಸಂಖ್ಯೆ ಹೊಂದಿರುವ ದ್ವಿಚಕ್ರ ವಾಹನಗಳು ನೇಪಾಳ ಪ್ರವೇಶಿಸುವಾಗ ಪ್ರವೇಶ ಪರವಾನಗಿ ಪಡೆಯುವುದು ಕಡ್ಡಾಯ ಎಂದು ನೇಪಾಳ ಸರ್ಕಾರ ಘೋಷಿಸಿದೆ. ಇದರೊಂದಿಗೆ ನಿಗದಿತ ಅವಧಿಗೆ ಪಾಸ್ ಕೂಡ ನೀಡಲಾಗುವುದು. ಈ ಆಧಾರದ ಮೇಲೆ ಕೇವಲ ಕೇಂದ್ರ ಕಾರ್ಯಾಲಯದ ವ್ಯಾಪ್ತಿಯವರೆಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗುವುದು, ಆದರೆ ಒಳಭಾಗಕ್ಕೆ ಪ್ರವೇಶಿಸುವಾಗ ಗಡಿ ಸುಂಕವನ್ನು ಪಾವತಿಸುವುದು ಅನಿವಾರ್ಯವಾಗಿದೆ.
ಭಾರತೀಯರಲ್ಲಿ ಆಕ್ರೋಶ
ಈ ನಿಯಮದಿಂದಾಗಿ ಕೆಲವು ಭಾರತೀಯ ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ‘ಭಾರತೀಯ ವಾಹನಗಳ ಮೇಲೆ ಹೆಚ್ಚು ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತಿದೆ, ಆದರೆ ನೇಪಾಳಿ ವಾಹನಗಳು ಭಾರತದಲ್ಲಿ ಮುಕ್ತವಾಗಿ ಸಂಚರಿಸುತ್ತಿವೆ. ನೇಪಾಳಿ ವಾಹನಗಳ ಭಾರತ ಪ್ರವೇಶಕ್ಕೂ ಇಂತಹದೇ ನಿಯಮಗಳನ್ನು ಜಾರಿಗೆ ತರಬೇಕು’, ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ‘ಗಡಿ ಭಾಗದವರೆಗೆ ಸಂಚಾರಕ್ಕೆ ಅನುಮತಿ ನೀಡಲಿ; ಆದರೆ ಪ್ರವೇಶದ ಸಮಯದಲ್ಲಿ ತೆರಿಗೆ ಅಥವಾ ಪ್ರವೇಶ ಶುಲ್ಕವನ್ನು ಕಡ್ಡಾಯಗೊಳಿಸಬೇಕು’, ಎಂಬುದು ಭಾರತೀಯರ ಅಭಿಪ್ರಾಯವಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು