ಮೊರೆನಾ (ಮಧ್ಯಪ್ರದೇಶ) ದಲ್ಲಿ ಅರಣ್ಯ ರಕ್ಷಕನನ್ನು ಮರಳು ಮಾಫಿಯಾಗಳು ಟ್ರ್ಯಾಕ್ಟರ್ ಹರಿಸಿ ಕೊಲೆ !

ಮೊರೆನಾ (ಮಧ್ಯಪ್ರದೇಶ) – ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟದ ಮೇಲೆ ಕ್ರಮ ಕೈಗೊಳ್ಳಲು ತೆರಳಿದ್ದ ಅರಣ್ಯ ಇಲಾಖೆ ತಂಡದ ಮೇಲೆ ಮರಳು ಮಾಫಿಯಾಗಳು ದಾಳಿ ಮಾಡಿದ್ದಾರೆ. ಮರಳು ಮಾಫಿಯಾ ಅರಣ್ಯ ರಕ್ಷಕ ಹರಕೇಶ್ ಗುರ್ಜರ್ ಅವರ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾನೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೊಲೀಸರು ತಿಳಿಸಿದಂತೆ, ಅಕ್ರಮ ಮರಳು ಸಾಗಾಟದ ಬಗ್ಗೆ கிடைத்த ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ೬ ಸದಸ್ಯರ ತಂಡವು ಕ್ರಮ ಕೈಗೊಳ್ಳಲು ತಲುಪಿತ್ತು. ಈ ವೇಳೆ ಮರಳು ಮಾಫಿಯಾ ವಿನೋದ್ ಕೋರಿ ಮರಳು ತುಂಬಿದ ಟ್ರ್ಯಾಕ್ಟರ್-ಟ್ರಾಲಿ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ. ಅರಣ್ಯ ರಕ್ಷಕ ಹರಕೇಶ್ ಗುರ್ಜರ್ ಆತನನ್ನು ತಡೆಯಲು ಮುಂದೆ ಬಂದಾಗ ವಿನೋದ್ ಅವರ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾನೆ. ಆ ಬಳಿಕ ಆತ ಟ್ರ್ಯಾಕ್ಟರ್-ಟ್ರಾಲಿ ಸಮೇತ ಪರಾರಿಯಾಗಿದ್ದಾನೆ.

ಜಿಲ್ಲಾಧಿಕಾರಿ ಲೋಕೇಶ ಕುಮಾರ ಜಂಗೀಡ್, ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರಿಶ್ಚಂದ್ರ ಬಘೇಲ್ ಘಟನಾ ಸ್ಥಳಕ್ಕೆ ತಲುಪಿದರು. ಪೊಲೀಸರು ಅಪರಿಚಿತ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಸರಕಾರಿ ಅಧಿಕಾರಿಗಳ ಮೇಲೆ ವಾಹನ ಹರಿಸಿ ಕೊಲ್ಲುವಷ್ಟರ ಮಟ್ಟಿಗೆ ಉದ್ಧಟರಾಗಿರುವ ಮರಳು ಮಾಫಿಯಾ ! ಇಂಥವರನ್ನು ಮಟ್ಟಹಾಕಲು ಆಡಳಿತ ಏನು ಮಾಡಲಿದೆ ?