ಮುಂಬಯಿನಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಕ್ರಮ!
(ಗಡಿಪಾರು ಅಂದರೆ ಅಪರಾಧಿಯನ್ನು ನಿರ್ದಿಷ್ಟ ಅವಧಿಯವರೆಗೆ ನಿರ್ದಿಷ್ಟ ಪ್ರದೇಶ, ನಗರ ಅಥವಾ ಜಿಲ್ಲೆಯಿಂದ ಹೊರಹಾಕುವುದು ಮತ್ತು ಮತ್ತೆ ಆ ವ್ಯಾಪ್ತಿಗೆ ಬರದಂತೆ ಪ್ರತಿಬಂಧಿಸುವುದು)

ಮುಂಬಯಿ – ಸ್ಥಳೀಯ ಗುಂಡಾಗಳ ವಿರುದ್ಧ ಮುಂಬಯಿ ಪೊಲೀಸ್ ಆಯುಕ್ತ ದೇವೇನ್ ಭಾರತಿ ಅವರು ‘ಶೂನ್ಯ ಸಹನೆ’ (ಝೀರೋ ಟಾಲರೆನ್ಸ್) ನೀತಿಯನ್ನು ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವ ಉಪನಗರದ ೫೦ ಗುಂಡಾಗಳನ್ನು ಗಡಿಪಾರು ಮಾಡಲಾಗಿದೆ. (ಗಡಿಪಾರು ಮಾಡಿದ ಗುಂಡಾಗಳು ಬೇರೆಡೆ ಅಪರಾಧ ಎಸಗಿದರೆ ಸಾರ್ವಜನಿಕರು ಏನು ಮಾಡಬೇಕು? ವ್ಯವಸ್ಥೆಯು ಇದಕ್ಕೂ ಉತ್ತರ ನೀಡುವುದು ಅವಶ್ಯಕ! – ಸಂಪಾದಕರು) ಇಷ್ಟು ದೊಡ್ಡ ಮಟ್ಟದಲ್ಲಿ ಪೊಲೀಸರು ಮೊದಲ ಬಾರಿಗೆ ಇಂತಹ ಕ್ರಮ ಕೈಗೊಂಡಿದ್ದಾರೆ. ಗುಂಡಾಗಳ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಕರೆ ನೀಡಿದ್ದಾರೆ. ‘ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನೇರವಾಗಿ ನನ್ನ ಬಳಿಯೇ ದೂರು ನೀಡಬೇಕು’ ಎಂದೂ ಅವರು ಹೇಳಿದ್ದಾರೆ.
ಕೊಲೆ, ದರೋಡೆ ಅಥವಾ ಇತರ ಗಂಭೀರ ಅಪರಾಧಗಳ ಆರೋಪಿಗಳು ಅಥವಾ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿರುವವರು, ಹಾಗೆಯೇ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವ ಮತ್ತು ಪದೇ ಪದೇ ಅಪರಾಧ ಎಸಗುವ ಗುಂಡಾಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಡಿಪಾರು ಮಾಡಿದ ಗುಂಡಾಗಳ ಚಿತ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಅಂಟಿಸಲಾಗಿದೆ. ‘ಗಡಿಪಾರು ಮಾಡಿದ ಗುಂಡಾಗಳು ಈ ಪ್ರದೇಶದಲ್ಲಿ ಮತ್ತೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆ ಅಥವಾ ಉಪ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬೇಕು’ ಎಂದು ಮನವಿ ಮಾಡಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!