ಹಿಂದೂ ಜನಜಾಗೃತಿ ಸಮಿತಿಯ ‘ರಣರಾಗಿಣಿ’ ನಿಯೋಗದಿಂದ ‘ಲವ್ ಜಿಹಾದ್’ ಸಂತ್ರಸ್ತ ಹಿಂದೂ ಕುಟುಂಬದ ಭೇಟಿ!

ಹುಬ್ಬಳ್ಳಿ – ಇಲ್ಲಿನ ‘ಫಿಟ್ನೆಸ್ ಜಿಮ್’ನಲ್ಲಿ ನಡೆದ ಲೈಂಗಿಕ ಶೋಷಣೆ ಮತ್ತು ‘ಲವ್ ಜಿಹಾದ್’ ಪ್ರಕರಣವು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ‘ಲವ್ ಜಿಹಾದ್’ ಪ್ರಕರಣದಲ್ಲಿ ಸಮೀರ್ ಮುಲ್ಲಾ ಮತ್ತು ಆತನ ಸಹೋದರಿ ತೈಸೆಮ್ ಮುಲ್ಲಾ ಪ್ರಮುಖ ಸೂತ್ರಧಾರಿಗಳಾಗಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಇದನ್ನು ‘ರಾಷ್ಟ್ರೀಯ ತನಿಖಾ ಸಂಸ್ಥೆ’ಗೆ (NIA) ವಹಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಘಟಕವಾದ ‘ರಣರಾಗಿಣಿ’ಯ ಪರವಾಗಿ ಸೌ. ಭವ್ಯಾ ಗೌಡ ಅವರು ಇಲ್ಲಿ ಒತ್ತಾಯಿಸಿದರು. ಅವರು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಬಳಿಕ ಈ ನಿಯೋಗವು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು. ಹಾಗೆಯೇ ರಣರಾಗಿಣಿ ನಿಯೋಗವು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಆಕೆಯ ಪೋಷಕರಿಂದ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲೆ ಶಕುಂತಲಾ ಶೆಟ್ಟಿ, ‘ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ’ದ ಮುಖಂಡೆ ಸೌ. ನೀತಾ ಮೇತ್ರಾಣಿ, ರಣರಾಗಿಣಿ ಗದಗ ಸಂಯೋಜಕಿ ಸೌ. ರಾಣಿ ಚಂದಾವರಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಯೋಜಕ ಶ್ರೀ. ಗುರುಪ್ರಸಾದ ಗೌಡ ಹಾಗೂ ಹಿಂದೂ ಮುಖಂಡ ಶ್ರೀ. ತೇಜಸ ಗೌಡ ಉಪಸ್ಥಿತರಿದ್ದರು.
ಘಟನೆಯ ಹಿನ್ನೆಲೆ ಮತ್ತು ಆರೋಪಗಳು,
ಶ್ರೀಮತಿ ಭವ್ಯಾ ಗೌಡ ಮಾತು ಮುಂದುವರೆಸುತ್ತಾ, ಜಿಮ್ ನಡೆಸುವ ಸಮೀರ್ ಮುಲ್ಲಾ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಅವರಿಗೆ ಮಂಪರು ಬರಿಸುವ ಔಷಧ ಬೆರೆಸಿದ ಪಾನೀಯ ಕುಡಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದನು, ಅವರ ನಗ್ನ ಚಿತ್ರಗಳನ್ನು ತೆಗೆದು ಮತ್ತು ವಿಡಿಯೋಗಳನ್ನು ಮಾಡಿ ಅವರನ್ನು ‘ಬ್ಲ್ಯಾಕ್‌ಮೇಲ್’ ಮಾಡುತ್ತಿದ್ದನು ಮತ್ತು ಮತಾಂತರಗೊಳ್ಳುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದನು. ಸಮೀರ್ ಮುಲ್ಲಾನ ಸಹೋದರಿ ತೈಸೆಮ್ ಮುಲ್ಲಾ ಹಿಂದೂ ಯುವತಿಯರನ್ನು ಆತನಿಗೆ ಪರಿಚಯಿಸಿ, ಮೋಸದಿಂದ ಪ್ರಭಾವ ಬೀರಿ ಅವರನ್ನು ‘ಲವ್ ಜಿಹಾದ್’ ಜಾಲದಲ್ಲಿ ಸಿಲುಕಿಸುತ್ತಿದ್ದಳು. ಇದೇ ಜಿಮ್‌ನಲ್ಲಿ ಮತ್ತೊಬ್ಬ ಜಿಹಾದಿ ಯುವಕನನ್ನೂ ಇದೇ ರೀತಿಯ ವಿಧಾನವನ್ನು ಅನುಸರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರಿಂದಾಗಿ ಈ ಘಟನೆಗಳ ಗಂಭೀರತೆ ಹೆಚ್ಚಾಗಿದೆ ಎಂದು ಹೇಳಿದರು. ವಕೀಲೆ ಶಕುಂತಲಾ ಶೆಟ್ಟಿ ಅವರು ಸಮೀರ್ ಮುಲ್ಲಾ, ತೈಸೆಮ್ ಮುಲ್ಲಾ ಮತ್ತು ಸಂಬಂಧಪಟ್ಟ ಜಿಮ್ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!