ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠದಿಂದ ಮಹತ್ವದ ತೀರ್ಪು

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ೨೦೨೦ ರ ಸಥಾನಕುಲಂ ಕಸ್ಟಡಿ ಮರಣ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ತಮಿಳುನಾಡಿನ ೯ ಪೊಲೀಸರಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದೆ. ನ್ಯಾಯಾಲಯವು ಈ ಘಟನೆಯನ್ನು ‘ಅತ್ಯಂತ ಅಪರೂಪದಲ್ಲಿ ಅಪರೂಪದ’ ಮತ್ತು ಗಂಭೀರ ಸ್ವರೂಪದ ಅಪರಾಧವೆಂದು ಪರಿಗಣಿಸಿ ಈ ಕಠಿಣ ಶಿಕ್ಷೆಯನ್ನು ನೀಡಿದೆ.
೧. ಈ ತೀರ್ಪು ೬ ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಹೊರಬಿದ್ದಿದೆ. ಈ ಪ್ರಕರಣದ ವಿಚಾರಣೆಯು ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಮುಥುಕುಮಾರನ್ ಅವರ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಾಲಯವು ಎಲ್ಲಾ ೯ ಆರೋಪಿಗಳನ್ನು ಕೊಲೆ ಮತ್ತು ಇತರ ಸಂಬಂಧಿತ ನಿಯಮಗಳ ಅಡಿಯಲ್ಲಿ ದೋಷಿಗಳೆಂದು ಘೋಷಿಸಿತು. ಈ ತೀರ್ಪಿನಲ್ಲಿ ನ್ಯಾಯಾಲಯವು, ಈ ಕೃತ್ಯವು ಅತ್ಯಂತ ಕ್ರೂರವಾಗಿದೆ ಮತ್ತು ಅಧಿಕಾರದ ದುರುಪಯೋಗಕ್ಕೆ ಒಂದು ಉದಾಹರಣೆಯಾಗಿದೆ ಎಂದು ಉಲ್ಲೇಖಿಸಿದೆ.
೨. ಕೇಂದ್ರೀಯ ತನಿಖಾ ದಳವು ನಡೆಸಿದ ತನಿಖೆಯಲ್ಲಿ, ಪೊಲೀಸರು ನಡೆಸಿದ ದೌರ್ಜನ್ಯವು ಪೂರ್ವಯೋಜಿತವಾಗಿತ್ತು ಮತ್ತು ಅದು ಇಡೀ ರಾತ್ರಿ ನಡೆದಿತ್ತು ಎಂಬುದು ಪತ್ತೆಯಾಗಿದೆ. ಆರೋಪಿಗಳು ಉದ್ದೇಶಪೂರ್ವಕವಾಗಿಯೇ ಇಂತಹ ಅಮಾನವೀಯ ಕೃತ್ಯ ಎಸಗಿದ್ದಾರೆ, ಆದ್ದರಿಂದ ಅವರಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು ಎಂದು ತನಿಖಾ ಸಂಸ್ಥೆಯು ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ ಏನು?
ತೂತುಕುಡಿ ಜಿಲ್ಲೆಯ ಸಥಾನಕುಲಂನ ಪಿ. ಜಯರಾಜ್ ಮತ್ತು ಅವರ ಪುತ್ರ ಜೆ. ಬೆನ್ನಿಕ್ಸ್ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಜೂನ್ ೧೯, ೨೦೨೦ ರಂದು ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಇವರು ಮೊಬೈಲ್ ಅಂಗಡಿಯನ್ನು ಹೊಂದಿದ್ದರು ಮತ್ತು ನಿಗದಿತ ಸಮಯದ ನಂತರವೂ ಅಂಗಡಿಯನ್ನು ತೆರೆದಿದ್ದರು ಎಂಬ ಆರೋಪವಿತ್ತು. ತನಿಖೆಯಲ್ಲಿ ತಿಳಿದುಬಂದ ವಿಷಯವೇನೆಂದರೆ, ಕಸ್ಟಡಿಯಲ್ಲಿ ಇವರಿಬ್ಬರಿಗೂ ಸತತವಾಗಿ ಮತ್ತು ಅಮಾನವೀಯವಾಗಿ ಹೊಡೆಯಲಾಗಿತ್ತು. ಇಡೀ ರಾತ್ರಿ ಅವರಿಗೆ ಕಿರುಕುಳ ನೀಡಲಾಗಿತ್ತು. ವರದಿಯ ಪ್ರಕಾರ, ಇಬ್ಬರಿಗೂ ಗಂಭೀರ ಗಾಯಗಳಾಗಿ ಅತಿಯಾದ ರಕ್ತಸ್ರಾವವಾದ ಕಾರಣ ಅವರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಇಡೀ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿತ್ತು. ಸಾರ್ವಜನಿಕರು ಪೊಲೀಸ್ ಕಸ್ಟಡಿಯಲ್ಲಿನ ದೌರ್ಜನ್ಯದ ವಿರುದ್ಧ ಪ್ರಶ್ನಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ದೋಷಿ ಪೊಲೀಸರ ಹೆಸರುಗಳು
೧. ಎಸ್. ಶ್ರೀಧರ್, ಪೊಲೀಸ್ ನಿರೀಕ್ಷಕರು
೨. ಪಿ. ರಘು ಗಣೇಶ, ಉಪನಿರೀಕ್ಷಕ
೩. ಕೆ. ಬಾಲಕೃಷ್ಣನ, ಉಪನಿರೀಕ್ಷಕ
೪. ಎಸ್. ಮುರುಗನ, ಮುಖ್ಯ ಪೇದೆ
೫. ಎ. ಸಮದುರೈ, ಮುಖ್ಯ ಪೇದೆ
೬. ಎಮ್. ಮುತ್ತುರಾಜ್, ಪೊಲೀಸ್ ಪೇದೆ
೭. ಎಸ್. ಚೆಲ್ಲದುರೈ, ಪೊಲೀಸ್ ಪೇದೆ
೮. ಎಕ್ಸ್. ಥಾಮಸ್ ಫ್ರಾನ್ಸಿಸ್, ಪೊಲೀಸ್ ಪೇದೆ
೯. ಎಸ್. ವೇಲುಮುತ್ತು, ಪೊಲೀಸ್ ಪೇದೆ
ಈ ಪ್ರಕರಣದ ಹತ್ತನೇ ಆರೋಪಿ ವಿಶೇಷ ಉಪನಿರೀಕ್ಷಕ ಪಾಲದುರೈ ವಿಚಾರಣೆಯ ಸಂದರ್ಭದಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ