|

ನಾಸಿಕ್ – ಇಲ್ಲಿನ ಚಾಂಡಕ್ ವೃತ್ತದ ಬಳಿಯ ಆಟೋ ಚಾಲಕರು ತಮ್ಮ ವಾಹನಗಳಲ್ಲಿದ್ದ ನಿಂಬೆ-ಮೆಣಸಿನಕಾಯಿ ಮತ್ತು ಕಪ್ಪು ಬೊಂಬೆಗಳನ್ನು ತೆಗೆದುಹಾಕಿದ್ದಾರೆ. ನಗರದ ಸಿಟು ಭವನದಲ್ಲಿ ಇತ್ತೀಚೆಗೆ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ (ಅಂನಿಸ್) ವತಿಯಿಂದ ಆಯೋಜಿಸಲಾಗಿದ್ದ ‘ಬುವಾಬಾಜಿ ವಿರೋಧಿ’ ಸಮ್ಮೇಳನದಲ್ಲಿ ‘ನಿಂಬೆ-ಮೆಣಸಿನಕಾಯಿ ಕಳಚಿ, ವಿವೇಕದೊಂದಿಗೆ ಸಂಬಂಧ ಬೆಳೆಸಿ’ ಎಂಬ ಘೋಷಣೆಗಳನ್ನು ಕೂಗಲಾಯಿತು. ಈ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ. ‘ನಿಂಬೆ-ಮೆಣಸಿನಕಾಯಿ ಕೇವಲ ತಿನ್ನುವ ಪದಾರ್ಥಗಳು, ಅವುಗಳಿಗೆ ಶುಭ-ಅಶುಭಗಳೊಂದಿಗೆ ಯಾವುದೇ ಸಂಬಂಧವಿಲ್ಲ’ ಎಂದು ಆಟೋ ಚಾಲಕರು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಟೋ ಚಾಲಕರಾದ ಶರದ್ ಭಾಮ್ರೆ, ದಿಲೀಪ್ ದೇವರೆ, ಗಣಪತ್ ಸೋನಾವಣೆ ಅವರೊಂದಿಗೆ ‘ಅಂನಿಸ್’ ಕಾರ್ಯಕರ್ತರು ಉಪಸ್ಥಿತರಿದ್ದರು. (ಇಂದು ಆಟೋಗಳಿಗೆ ಕಟ್ಟಿದ್ದ ನಿಂಬೆ-ಮೆಣಸಿನಕಾಯಿಯನ್ನು ತೆಗೆದುಹಾಕಿದ್ದಾರೆ, ನಾಳೆ ಇವರೇ ಮನೆಯಲ್ಲಿರುವ ದೇವರುಗಳ ಚಿತ್ರಗಳನ್ನೂ ತೆಗೆಯಲು ಹೇಳಬಹುದು ಅಥವಾ ಕುಲಧರ್ಮ-ಕುಲಾಚಾರಗಳನ್ನೂ ‘ಅಂಧಶ್ರದ್ಧೆ’ ಎಂದು ಕೈಬಿಡಲು ಹೇಳಬಹುದು. ಆಟೋ ಚಾಲಕರ ಈ ಕೃತ್ಯವನ್ನು ಹಿಂದೂ ಧರ್ಮದ ಮೇಲಾದ ಒಂದು ರೀತಿಯ ಸಾಂಸ್ಕೃತಿಕ ಆಕ್ರಮಣ ಎಂದೇ ಹೇಳಬೇಕಾಗುತ್ತದೆ! – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!