|

ಮುಂಬಯಿ – ಜೈನ ಧರ್ಮವು ಮೂಲ ಹಿಂದೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮೊಘಲರು ಮತ್ತು ಬ್ರಿಟಿಷರ ನಂತರ ಕಾಂಗ್ರೆಸ್ ‘ಒಡೆದು ಆಳುವ’ ಕುತಂತ್ರದ ನೀತಿಯಿಂದ ಹಿಂದೂ ಸಮಾಜವನ್ನು ತುಂಡರಿಸಿತು. ಈಗ ಜೈನ ಸಮಾಜವು ಈ ‘ಅಲ್ಪಸಂಖ್ಯಾತ’ ಎಂಬ ಗುಲಾಮಗಿರಿಯ ಮಾನಸಿಕತೆ ಮತ್ತು ಸ್ಥಾನಮಾನವನ್ನು ತ್ಯಜಿಸಿ ಮೂಲ ಪ್ರವಾಹಕ್ಕೆ ಬರುವ ಸಮಯ ಬಂದಿದೆ ಎಂದು ರಾಜ್ಯದ ಕ್ಯಾಬಿನೆಟ್ ಸಚಿವ ಶ್ರೀ. ಮಂಗಲ ಪ್ರಭಾತ ಲೋಧಾ ಅವರು ಸ್ಪಷ್ಟ ಮಾತುಗಳಲ್ಲಿ ಹಿಂದೂ ಅಸ್ಮಿತೆಯ ದನಿ ಎತ್ತಿದ್ದಾರೆ. ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಅವರು,

೧. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಶೇ. ೨೨ ರಿಂದ ೨೩ ರಷ್ಟಿದ್ದ ಜೈನ ಸಮಾಜ ಇಂದು ಕೇವಲ ಶೇ. ೩ ಕ್ಕೆ ಬಂದು ನಿಂತಿದೆ. ಇದು ಕೇವಲ ಅಂಕಿ-ಅಂಶಗಳಲ್ಲ, ಇದೊಂದು ದೊಡ್ಡ ರಾಜಕೀಯ ಪಿತೂರಿಯ ಪರಿಣಾಮವಾಗಿದೆ.
೨. ಮುಸಲ್ಮಾನ ಸಮಾಜದಲ್ಲಿ ಅನೇಕ ಜಾತಿಗಳಿದ್ದರೂ ಕಾಂಗ್ರೆಸ್ ಅವರನ್ನು ಸಂಘಟಿತರಾಗಿರಿಸಿತು; ಆದರೆ ಹಿಂದೂ ಸಮಾಜವನ್ನು ಜಾತಿ-ಧರ್ಮದ ಚೌಕಟ್ಟಿನಲ್ಲಿ ಬಂಧಿಸಿ ದುರ್ಬಲಗೊಳಿಸಿತು.
೩. ಸಮಾಜದಲ್ಲಿ ವ್ಯಾಪಕ ಒಮ್ಮತ ಮೂಡಿದರೆ, ಜೈನ ಸಮಾಜವನ್ನು ‘ಅಲ್ಪಸಂಖ್ಯಾತ’ ಸ್ಥಾನಮಾನದಿಂದ ಹೊರತರಲು ಅಗತ್ಯವಾದ ಕಾನೂನು ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುವುದು. ಶ್ರೀರಾಮ ಜನ್ಮಭೂಮಿ ಹೋರಾಟದಂತೆಯೇ ಈಗ ಮತ್ತೊಮ್ಮೆ ‘ನಾವು ಹಿಂದೂ’ ಎಂಬ ಭಾವನೆಯನ್ನು ಪ್ರಬಲಗೊಳಿಸುವ ಐತಿಹಾಸಿಕ ಅವಶ್ಯಕತೆಯಿದೆ.
೪. ಜಗತ್ತಿಗೆ ಅಹಿಂಸೆ ಮತ್ತು ಮಾನವೀಯತೆಯ ಸಂದೇಶ ನೀಡಿದ ಜೈನ ಸಮಾಜವನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವುದು ಸಾಂಸ್ಕೃತಿಕ ದ್ರೋಹವಾಗಿದೆ.
೫. ರಾಜಕೀಯ ಲಾಭಕ್ಕಾಗಿ ಹೇರಲಾದ ‘ಅಲ್ಪಸಂಖ್ಯಾತ’ ಎಂಬ ಹಣೆಪಟ್ಟಿಯನ್ನು ಅಳಿಸಿಹಾಕುವ ಸಮಯ ಈಗ ಬಂದಿದೆ. ಜೈನ ಧರ್ಮೀಯರ ಪೂಜಾ ಪದ್ಧತಿ ಭಿನ್ನವಾಗಿರಬಹುದು; ಆದರೆ ಸಾಂಸ್ಕೃತಿಕ ಬೇರುಗಳು ಹಿಂದೂ ಧರ್ಮದಲ್ಲೇ ಆಳವಾಗಿ ಬೇರೂರಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!