ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನರವರ ಅಭಿಪ್ರಾಯ

ಪಾಟಲೀಪುತ್ರ (ಬಿಹಾರ) – ಚುನಾವಣಾ ಆಯೋಗ, ನಿಯಂತ್ರಕರು ಮತ್ತು ಮಹಾಲೆಕ್ಕ ಪರೀಕ್ಷಕರು (ಸಿಎಜಿ) ಮತ್ತು ಹಣಕಾಸು ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರ ಮತ್ತು ರಾಜಕೀಯ ಪ್ರಭಾವದಿಂದ ಮುಕ್ತವಾಗಿರುವುದು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನರವರು ಇಲ್ಲಿ ಅಭಿಪ್ರಾಯಪಟ್ಟರು. ಅವರು ‘ಚಾಣಕ್ಯ ನ್ಯಾಷನಲ್ ಲಾ ಯೂನಿವರ್ಸಿಟಿ’ಯಲ್ಲಿ ಉಪನ್ಯಾಸ ನೀಡುತ್ತಿದ್ದರು.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಮಾತು ಮುಂದುವರೆಸುತ್ತಾ,
1. ಚುನಾವಣೆಯು ಕೇವಲ ಕಾಲಕಾಲಕ್ಕೆ ನಡೆಯುವ ಒಂದು ಪ್ರಕ್ರಿಯೆಯಾಗಿರದೇ ರಾಜಕೀಯ ಅಧಿಕಾರವನ್ನು ಸ್ಥಾಪಿಸುವ ಯಂತ್ರವಾಗಿದೆ. ಹೀಗಾಗಿ, ಚುನಾವಣಾ ಪ್ರಕ್ರಿಯೆಯ ಮೇಲಿನ ನಿಯಂತ್ರಣವೆಂದರೆ ರಾಜಕೀಯ ಸ್ಪರ್ಧೆಯ ಷರತ್ತುಗಳ ಮೇಲಿನ ನಿಯಂತ್ರಣವಾಗಿದೆ.
2. ಸರ್ವೋಚ್ಚ ನ್ಯಾಯಾಲಯವು ಆಯೋಗವನ್ನು ‘ಉನ್ನತ ಸಾಂವಿಧಾನಿಕ ಸಂಘಟನೆ’ ಎಂದು ಪರಿಗಣಿಸಿದೆ. ಚುನಾವಣೆ ನಡೆಸುವ ಸಂಸ್ಥೆಯು ಚುನಾವಣೆಯಲ್ಲಿ ಸ್ಪರ್ಧಿಸುವವರ ಮೇಲೆ ಅವಲಂಬಿತವಾಗಿದ್ದರೆ, ಪ್ರಕ್ರಿಯೆಯ ನಿಷ್ಪಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
3. ಸಾಂವಿಧಾನಿಕ ಅವನತಿಯು ಹಠಾತ್ತನೆ ಸಂಭವಿಸುವುದಿಲ್ಲ, ಸಾಂಸ್ಥಿಕ ಚೌಕಟ್ಟು ನಿಧಾನವಾಗಿ ಕುಸಿದಾಗ ಅದು ಪ್ರಾರಂಭವಾಗುತ್ತದೆ. ಸಂಸ್ಥೆಗಳು ಪರಸ್ಪರ ನಿಯಂತ್ರಣವನ್ನು ನಿಲ್ಲಿಸಿದಾಗ, ಚುನಾವಣೆಗಳು ನಡೆಯುತ್ತವೆ, ಸಂಸತ್ತು ಕಾರ್ಯನಿರ್ವಹಿಸುತ್ತದೆ; ಆದರೆ ಅಧಿಕಾರದ ಮೇಲಿನ ಪರಿಣಾಮಕಾರಿ ನಿಯಂತ್ರಣ ಅಂತ್ಯಗೊಂಡಿರುತ್ತದೆ.
4. ರಾಜ್ಯ ಸರಕಾರಗಳು ಸಂವಿಧಾನದ ಪ್ರಕಾರ ಕೇಂದ್ರ ಸರಕಾರದ ಅಧೀನದಲ್ಲಿಲ್ಲ, ಆದರೆ ಅವುಗಳಿಗೆ ಸಮಾನ ಸ್ಥಾನಮಾನ ನೀಡಲಾಗಿದೆ. ಅಭಿವೃದ್ಧಿ ಯೋಜನೆಗಳಲ್ಲಿ ರಾಜ್ಯಗಳ ಬಗ್ಗೆ ‘ತಾರತಮ್ಯದ’ ದೃಷ್ಟಿಕೋನ ಇರಬಾರದು ಎಂದು ಅವರು ಉಲ್ಲೇಖಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ