
ಭೋಪಾಲ್ (ಮಧ್ಯಪ್ರದೇಶ) – ಮಹಾಕುಂಭದ ಸಮಯದಲ್ಲಿ ಬೆಳಕಿಗೆ ಬಂದಿದ್ದ ಮಧ್ಯಪ್ರದೇಶದ ಸಾಧ್ವಿ ಹರ್ಷ ರಿಛಾರಿಯಾ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಮಹಮ್ಮದ್ ಅಶರ್ ಎಂಬಾತನು ಕಳುಹಿಸಿದ ಇ-ಮೇಲ್ ಗಳನ್ನು ಉಲ್ಲೇಖಿಸುತ್ತಾ ಅವರು ‘ಲವ್ ಜಿಹಾದ್’ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಧ್ವಿ ಅವರ ಪ್ರಕಾರ ಮುಸಲ್ಮಾನ ಯುವಕರು ಹಿಂದೂ ಯುವತಿಯರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿ ಅವರನ್ನು ತಮ್ಮ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ.
ವಿಡಿಯೋದಲ್ಲಿ ಸಾಧ್ವಿ ಹರ್ಷ ರಿಛಾರಿಯಾ ಅವರು ಹೇಳಿದ್ದು,
೧. ನನಗೆ ಒಬ್ಬ ವ್ಯಕ್ತಿಯಿಂದ ಕೆಲವು ಇ-ಮೇಲ್ ಗಳು ಬಂದವು. ಕಳೆದ ಕೆಲವು ದಿನಗಳಿಂದ ಆತನು ನಿರಂತರವಾಗಿ ನಾನು ಹೇಗಿದ್ದೇನೆ?, ಎಲ್ಲಿದ್ದೇನೆ?, ನಿನ್ನ ಬಗ್ಗೆ ಯಾವುದೇ ಸುದ್ದಿಯಿಲ್ಲವಲ್ಲ?, ನಿನ್ನ ಆರೋಗ್ಯ ಸರಿಯಿದೆಯೇ?, ನೀನು ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನೂ ಬರೆಯುತ್ತಿಲ್ಲವೇಕೆ? ಎಂದು ಕೇಳುತ್ತಿದ್ದನು.
೨. ‘ಇದೆಲ್ಲವೂ ಪ್ರಸಿದ್ಧಿಗಾಗಿ ಮತ್ತು ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳಲು ಸರಿ ಇದೆ; ಆದರೆ ಕೊನೆಯಲ್ಲಿ ಇದರಿಂದ ಮನೆ ನಡೆಯುವುದಿಲ್ಲ. ಇದರಿಂದ ಆದಾಯ ಬರುವುದಿಲ್ಲ. ಅದಕ್ಕಾಗಿ ನಿನ್ನ ಮುಂದಿನ ಯೋಜನೆಯೇನು?, ಇದನ್ನು ನೀನು ನನಗೆ ಹೇಳಬಹುದು.’ ಎಂದು ಕೇಳುತ್ತಿದ್ದನು.
೩. ಯಾವಾಗ ಒಬ್ಬ ವ್ಯಕ್ತಿಗೆ ತನ್ನವರ ಬೆಂಬಲ ಬೇಕಿರುತ್ತದೆಯೋ, ಅಂತಹ ಸಮಯದಲ್ಲಿ ಆತನು ಹಲವು ಬಾರಿ ಅಪಹಾಸ್ಯ ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಸಾಧ್ವಿ ಅವರ ಪ್ರಕಾರ ಇದರಿಂದ ಸಾಮಾನ್ಯವಾಗಿ ವ್ಯಕ್ತಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದುರ್ಬಲನಾಗುತ್ತಾನೆ ಮತ್ತು ಕೆಲವು ಜನರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.
ಹಿಂದೂ ಯುವತಿಯರ ಮನಃಪರಿವರ್ತನೆ
ಲವ್ ಜಿಹಾದಿ ಮುಸಲ್ಮಾನರು ಹಿಂದೂ ಯುವತಿಯರಿಗೆ ‘ಸಹಾಯ ಮಾಡುವವರು’ ಎಂಬಂತೆ ಮುಂದೆ ಬರುತ್ತಾರೆ. ‘ಯಾವಾಗ ಯಾರೂ ನಿನ್ನ ಮಾತನ್ನು ಕೇಳಲು ಸಿದ್ಧರಿರುವುದಿಲ್ಲವೋ, ಅಂತಹ ಸಮಯದಲ್ಲಿ ನಾನು ನಿನ್ನನ್ನು ಅರ್ಥಮಾಡಿಕೊಂಡೆ’ ಎಂಬ ನಂಬಿಕೆಯನ್ನು ಮುಸಲ್ಮಾನ ಯುವಕರು ಹಿಂದೂ ಯುವತಿಯರಲ್ಲಿ ನಿರ್ಮಿಸುತ್ತಾರೆ. ಆಗ, ಇವನಿಗಿಂತ ಒಳ್ಳೆಯವರು ನನಗೆ ಬೇರೆ ಯಾರು ಸಿಗಲು ಸಾಧ್ಯ? ಎಂದು ಆ ಹುಡುಗಿಗೆ ಅನಿಸುತ್ತದೆ. ನನ್ನ ಧರ್ಮದ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ, ನನ್ನ ಸ್ವಂತ ಜನರು ನನ್ನ ಮಾತು ಕೇಳುವುದಿಲ್ಲ ಮತ್ತು ಈ ಯುವಕ ನನ್ನ ಜೀವನದಲ್ಲಿ ದೇವ ದೂತನಂತೆ ಬಂದಿದ್ದಾನೆ. ನಂತರ ಆಕೆ ಅವನ ಹೆಗಲ ಮೇಲೆ ತಲೆಯಿಟ್ಟು ಅಳತೊಡಗುತ್ತಾಳೆ ಮತ್ತು ಇಲ್ಲಿಂದಲೇ ಮನಃಪರಿರ್ತನೆ ಹಾಗೂ ‘ಲವ್ ಜಿಹಾದ್’ ಆರಂಭವಾಗುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!