
ನವದೆಹಲಿ – ಉಚಿತ ಪಡಿತರ ನೀಡುವುದು, ಮಹಿಳೆಯರಿಗೆ ನಗದು ನೀಡುವುದು ಮುಂತಾದ ಯೋಜನೆಗಳಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡುತ್ತವೆ. ಆದರೆ ಚುನಾವಣೆ ನಂತರ ಅವುಗಳ ವಾಸ್ತವಿಕ ಅನುಷ್ಠಾನದ ಹಾದಿಯಲ್ಲಿ ಹಲವು ರಾಜ್ಯಗಳು ಅಲ್ಪಾವಧಿಯಲ್ಲಿಯೇ ದಿವಾಳಿಯ ಅಂಚನ್ನು ತಲುಪಿವೆ.
ಈ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯಗಳು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಮತ್ತು ಸಮತೋಲಿತ ಬಜೆಟ್ ಅನ್ನು ಸಹ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೆಯೇ ಮುಂದುವರಿದರೆ ಹಲವು ರಾಜ್ಯಗಳು ದಿವಾಳಿಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
Indian States Heading Toward Bankruptcy 🚨
Several states are nearing financial distress due to unsustainable freebie schemes; free rations, cash handouts, and more.
Every election brings bigger promises, but at what cost?
This is not welfare – it’s vote-buying in disguise.… pic.twitter.com/KXF948nezw
— Sanatan Prabhat (@SanatanPrabhat) April 5, 2026
1. ಕೆಲವು ರಾಜ್ಯಗಳಲ್ಲಿ ಈ ಯೋಜನೆಗಳ ಹೊರೆ ಒಟ್ಟು ಆದಾಯ ಸ್ವೀಕೃತಿಯ ಶೇಕಡಾ 30 ರಿಂದ 40 ರಷ್ಟನ್ನು ತಲುಪಿದೆ. ಹಿಮಾಚಲ ಪ್ರದೇಶದಂತಹ ಸಣ್ಣ ರಾಜ್ಯದಲ್ಲಿ ನಗದು ಬಿಕ್ಕಟ್ಟಿನ ಗಂಭೀರ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವೇತನ-ಪಿಂಚಣಿಯನ್ನು ಮುಂದೂಡಬೇಕಾದ ಪರಿಸ್ಥಿತಿ ಬಂದಿದೆ.
2. ತೆಲಂಗಾಣದಲ್ಲಿ ಜನರ ಮೇಲೆ ಉಚಿತ ಕೊಡುಗೆಗಳ ಯೋಜನೆಗಳನ್ನು ಜಾರಿಗೊಳಿಸಿದ ಪರಿಣಾಮ ಬಜೆಟ್‌ನಲ್ಲಿ ಅನುದಾನದ ಕೊರತೆ ಎದುರಾಗಿದೆ. ಇದರಿಂದ ಹಲವು ಜನಕಲ್ಯಾಣ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮಧ್ಯಪ್ರದೇಶದಲ್ಲಿ ‘ಲಾಡ್ಲಿ ಬಹನಾ’ ಯೋಜನೆಯಿಂದಾಗಿ ಜಿ.ಎಸ್.ಡಿ.ಪಿ.ಗೆ ಹೋಲಿಸಿದರೆ ಸಾಲದ ಪ್ರಮಾಣ ಶೇಕಡಾ 27 ರಿಂದ 32 ಕ್ಕೆ ಏರಿಕೆಯಾಗಿದೆ.
3. ಮಹಾರಾಷ್ಟ್ರದಲ್ಲಿ ‘ಲಾಡ್ಕಿ ಬಹಿನ್ ಯೋಜನೆ’ಗೆ ಸರಕಾರದ ಬೊಕ್ಕಸದಿಂದ ಹಣ ವ್ಯಯಿಸುತ್ತಿರುವುದರಿಂದ, ಹಬ್ಬಗಳಲ್ಲಿ ನೀಡಲಾಗುತ್ತಿದ್ದ ‘ರೇಷನ್ ಕಿಟ್’ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.
4. “ಇದೇ ರೀತಿ ಜನರಿಗೆ ಉಚಿತ ಆರ್ಥಿಕ ಲಾಭ ನೀಡುವ ಯೋಜನೆಗಳು ಮುಂದುವರಿದರೆ ದೇಶದ ಆರ್ಥಿಕತೆ ಉತ್ತಮವಾಗಿದ್ದರೂ ರಾಜ್ಯಗಳು ದಿವಾಳಿಯಾಗಬಹುದು. ಹಿಮಾಚಲ ಪ್ರದೇಶದಂತೆಯೇ ಇತರೆ ರಾಜ್ಯಗಳೂ ವೆಚ್ಚ ಕಡಿತ ಮಾಡುತ್ತಿವೆ” ಎಂದು ‘ಇಂಡಿಯನ್ ಅಸೋಸಿಯೇಷನ್ ಫಾರ್ ರಿಸರ್ಚ್ ಇನ್ ನ್ಯಾಷನಲ್ ಇನ್ಕಮ್ ಅಂಡ್ ವೆಲ್ತ್’ ಸಂಪಾದಕ ಡಾ. ಅಮರ್ಜೀತ್ ಸಿಂಗ್ ಸೇಥಿ ಹೇಳಿದ್ದಾರೆ.

1. ಮಧ್ಯಪ್ರದೇಶದ ಉಚಿತ ಯೋಜನೆಗಳು!
1. ಲಾಡ್ಲಿ ಬಹನಾ ಯೋಜನೆ
2. ಉಚಿತ ಸಿಲಿಂಡರ್ ಯೋಜನೆ
3. ವಿದ್ಯುತ್ ಪೂರೈಕೆ ಮೇಲೆ ಸಬ್ಸಿಡಿ
ಈ ಯೋಜನೆಗಳಿಗೆ ಎಷ್ಟು ಖರ್ಚು?
50 ಸಾವಿರ ಕೋಟಿ ರೂಪಾಯಿಗಳು
2. ತೆಲಂಗಾಣದ ಉಚಿತ ಯೋಜನೆಗಳು!
1. ಮಹಿಳೆಯರಿಗಾಗಿ ಮಹಾಲಕ್ಷ್ಮಿ ಯೋಜನೆ (ಉಚಿತ ಬಸ್ ಪ್ರಯಾಣ, ಸಿಲಿಂಡರ್ ಮತ್ತು ತಿಂಗಳಿಗೆ 2 ಸಾವಿರ 500 ರೂಪಾಯಿ)
2. ನಿರ್ವಸತಿಯರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಸಹಾಯ
3. ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ
ಈ ಯೋಜನೆಗಳಿಗೆ ಎಷ್ಟು ಖರ್ಚು?
51 ಸಾವಿರ ಕೋಟಿ ರೂಪಾಯಿಗಳು
3. ಪಂಜಾಬ್‌ನ ಉಚಿತ ಯೋಜನೆಗಳು!
1. ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ
2. ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ದಿಂದ 1 ಸಾವಿರ 500 ರೂಪಾಯಿ ಸಹಾಯ
3. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಈ ಯೋಜನೆಗಳಿಗೆ ಎಷ್ಟು ಖರ್ಚು?
2 ಲಕ್ಷದ 60 ಸಾವಿರ ಕೋಟಿ ರೂಪಾಯಿಗಳು
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!