
ಸಿಯಾಲ್ಕೋಟ್ (ಪಾಕಿಸ್ತಾನ) – ಒಂದು ವೇಳೆ ಭಾರತ ಈ ಬಾರಿ ಯಾವುದೇ ರೀತಿಯ ಕೃತಕ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿದರೆ, ದೇವರ ಇಚ್ಛೆಯಿದ್ದರೆ, ನಾವು ಕೊಲಕಾತಾದವರೆಗೆ ಕಾರ್ಯಾಚರಣೆ ನಡೆಸುತ್ತೇವೆ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಭಾರತಕ್ಕೆ ಟೊಳ್ಳು ಬೆದರಿಕೆ ಹಾಕಿದ್ದಾರೆ. ‘ಕೇವಲ ಕೊಲಕಾತಾ ಮಾತ್ರವಲ್ಲ, ಸಂಘರ್ಷದ ಮುಂದಿನ ಹಂತವು ಅತ್ಯಂತ ಭೀಕರವಾಗಿರುತ್ತದೆ. ನಾವು ಅವರ ಗಡಿಯೊಳಗೆ ನುಗ್ಗಿ ಅವರ ಮನೆಯೊಳಗೆ ನುಗ್ಗಿ ಅವರ ಮೇಲೆ ಆಕ್ರಮಣ ಮಾಡುತ್ತೇವೆ,” ಎಂದು ಅವರು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಾ ಆಸಿಫ್ ಅವರು ಭಾರತವು ‘ಫಾಲ್ಸ್ ಫ್ಲಾಗ್ ಆಪರೇಷನ್’ (ಸಂಚಿನ ಕಾರ್ಯಾಚರಣೆ) ನಡೆಸಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಅವರು ಮಾತನಾಡುತ್ತಾ, “ಭಾರತವು ತನ್ನದೇ ನಾಗರಿಕರನ್ನು ಅಥವಾ ತನ್ನ ವಶದಲ್ಲಿರುವ ಪಾಕಿಸ್ತಾನಿ ನಾಗರಿಕರನ್ನು ಬಳಸಿ, ಅವರ ಮೃತದೇಹಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿರಿಸಿ, ಅವರ ಸಾವಿಗೆ ಭಯೋತ್ಪಾದಕರೇ ಕಾರಣ ಎಂದು ಹೇಳುತ್ತಿದೆ, ಈ ಬಗ್ಗೆ ನಮಗೆ ಸುಳಿವು ಸಿಕ್ಕಿದೆ ಎಂದು ಆಸಿಫ್ ಆರೋಪಿಸಿದರು.
ಸಂಪಾದಕೀಯ ನಿಲುವುಭಾರತದ ಜೊತೆಗೆ ಇದುವರೆಗಿನ ಎಲ್ಲಾ ಯುದ್ಧಗಳಲ್ಲಿ ಸೋತಿದ್ದರೂ, ಹಾಗೆಯೇ ತನ್ನದೇ ಒಂದು ಭಾಗ (ಬಾಂಗ್ಲಾದೇಶ) ಬೇರೆಯಾಗಿದ್ದರೂ ಪಾಕಿಸ್ತಾನದ ಭಾರತ ದ್ವೇಷದ ಚಾಳಿ ಕಡಿಮೆಯಾಗಿಲ್ಲ. ಪಾಕಿಸ್ತಾನದ ಜನರಿಗೂ ಈಗ ತಮ್ಮ ಸೈನ್ಯದ ನಿಜವಾದ ‘ಸಾಮರ್ಥ್ಯ’ ಏನೆಂಬುದು ತಿಳಿದಿದೆ. ಹಾಗಾಗಿ, ಆಸಿಫ್ ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಜನರೇ ನಂಬುವುದಿಲ್ಲ! |
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis