|

ಕೊಚ್ಚಿ (ಕೇರಳ) – ಏಪ್ರಿಲ್ ೯ ರಂದು ಕೇರಳ ವಿಧಾನಸಭೆಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಎಂಬ ಪಿತೂರಿಯನ್ನು ಮುನ್ನೆಲೆಗೆ ತಂದಿರುವ ‘ದ ಕೇರಳ ಸ್ಟೋರಿ ೨’ ಚಿತ್ರದ ವಿಷಯವಾಗಿ ರಾಜ್ಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಚಲನ ಚಿತ್ರವು ಭಾಜಪ ಪ್ರಚಾರ ಮಾಡುತ್ತಿದೆ ಎಂದು ಹೇಳಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ನಡೆಸಿ ರಾಜ್ಯದಲ್ಲಿ ಚಿತ್ರವನ್ನು ನಿಷೇಧಿಸಿದ್ದರು. ಉಚ್ಚ ನ್ಯಾಯಾಲಯವು ಅದನ್ನು ಪ್ರದರ್ಶಿಸಲು ಆದೇಶ ನೀಡಿತು; ಆದರೆ ಚಿತ್ರಮಂದಿರಗಳ ಮಾಲೀಕರು ಅದನ್ನು ಪ್ರದರ್ಶಿಸಲು ಸಿದ್ಧರಿರಲಿಲ್ಲ. ಇಂತಹ ಪರಿಸ್ಥಿತಿಯ ನಡುವೆ, ಮಹಾಕುಂಭಮೇಳದ ಮೂಲಕ ಪ್ರಸಿದ್ಧಿ ಪಡೆದ ಮೋನಾಲಿಸಾ ಭೋಸಲೆ ಎಂಬಾಕೆ ಕೇರಳದ ದೇವಸ್ಥಾನವೊಂದರಲ್ಲಿ ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ವಿವಾಹವಾದಳು. ಆಡಳಿತಾರೂಢ ಮಾಕಪದ ಹಿರಿಯ ನಾಯಕ ಥಾಮಸ್ ಐಸಾಕ್ ಈ ವಿವಾಹದ ಚಿತ್ರವನ್ನು ಪ್ರಸಾರ ಮಾಡುತ್ತಾ, ‘ಇದು ನಿಜವಾದ ಕೇರಳ ಸ್ಟೋರಿ’ ಎಂದು ಬರೆದಿದ್ದಾರೆ. (ನಾಳೆ ಇದೇ ಮೋನಾಲಿಸಾಗೆ ಏನಾದರೂ ಹೆಚ್ಚುಕಮ್ಮಿಯಾದರೆ, ಅಂದು ಥಾಮಸ್ ಐಸಾಕ್ ಅವರನ್ನೇ ಲವ್ ಜಿಹಾದ್ ಪಿತೂರಿಯ ಸೂತ್ರಧಾರ ಎಂದು ಪರಿಗಣಿಸಿ ಸರಕಾರವು ಏಕೆ ಗಲ್ಲಿಗೇರಿಸಬಾರದು? – ಸಂಪಾದಕರು)
ಅಂಕಿಅಂಶಗಳ ಮೂಲಕ ತಿಳಿದುಕೊಳ್ಳಿ ಕೇರಳದ ಲವ್ ಜಿಹಾದ್ ವಾಸ್ತವ!
೧. ರಾಜ್ಯದ ಕಾಸರಗೋಡು, ಕೋಯಿಕ್ಕೋಡ್, ತ್ರಿಶೂರ್, ಮಲಪ್ಪುರಂ, ಕಣ್ಣೂರು ಮತ್ತು ಪಾಲಕ್ಕಾಡ್ ಈ ೬ ಜಿಲ್ಲೆಗಳಲ್ಲಿ ಲವ್ ಜಿಹಾದ್ ಮೂಲಕ ಅತಿ ಹೆಚ್ಚು ಮತಾಂತರಗಳು ನಡೆದಿವೆ.
೨. ಈ ೬ ಜಿಲ್ಲೆಗಳಲ್ಲೇ ವಿಧಾನಸಭೆಯ ೧೪೦ ಸ್ಥಾನಗಳ ಪೈಕಿ ೭೦ ಸ್ಥಾನಗಳಿವೆ.
೩. ತ್ರಿಶೂರ್ ಹೊರತುಪಡಿಸಿ ಮೇಲಿನ ಎಲ್ಲಾ ಜಿಲ್ಲೆಗಳಲ್ಲಿ ಶೇ. ೩೦ ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯಿದೆ.
೪. ಇವೆಲ್ಲದರ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ಟಿ. ವೀಣಾ ಅವರು ೨೦೨೦ ರಲ್ಲಿ ಮಾಕಪದ ವಿದ್ಯಾರ್ಥಿ ಸಂಘಟನೆಯಾದ ‘ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ’ದ ಅಧ್ಯಕ್ಷ ಮಹಮ್ಮದ್ ರಿಯಾಸ್ ಎಂಬಾತನನ್ನು ಮದುವೆಯಾಗಿದ್ದರು.
೫. ‘ಕೇರಳ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್’ ಸದಸ್ಯ ಫಾದರ್ ಮೈಕೆಲ್ ಪುಲ್ಲಿಕಲ್ ಹೇಳುವಂತೆ, ‘ದ ಕೇರಳ ಸ್ಟೋರಿ’ಯ ಪಾತ್ರಗಳು ಮತ್ತು ಕಥೆ ಕಾಲ್ಪನಿಕವಾಗಿರಬಹುದು; ಆದರೆ ಈ ವಿಷಯ ಕೇರಳಕ್ಕೆ ಸಂಬಂಧಿಸಿದ್ದಾಗಿದೆ. ಕೇರಳದಲ್ಲಿ ಕೇವಲ ಹಿಂದೂಗಳಷ್ಟೇ ಅಲ್ಲ, ಕ್ರಿಶ್ಚಿಯನ್ ಸಮುದಾಯವೂ ಇದಕ್ಕೆ ಬಲಿಯಾಗಿದೆ. ಕಟ್ಟರ ಮುಸ್ಲಿಂ ಸಂಘಟನೆಗಳು ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ವಿವಾಹಿತ ಮುಸ್ಲಿಂ ಯುವಕರೇ ಇದರಲ್ಲಿ ಭಾಗಿಯಾಗಿದ್ದಾರೆ.
೬. ‘ಹಿಂದೂ ಐಕ್ಯ ವೇದಿ’ಯ ಅಧ್ಯಕ್ಷ ಆರ್.ವಿ. ಬಾಬು ತಿಳಿಸುವಂತೆ, ರಾಜ್ಯದಲ್ಲಿ ಪ್ರತಿ ತಿಂಗಳು ೧೦ ರಿಂದ ೧೨ ಪ್ರಕರಣಗಳು ದಾಖಲಾಗುತ್ತಿವೆ. ೨೦೧೫ ರಿಂದ ೨೦೨೫ ರವರೆಗಿನ ೧೧ ವರ್ಷಗಳ ಅವಧಿಯಲ್ಲಿ ೫ ಸಾವಿರಕ್ಕೂ ಹೆಚ್ಚು ಯುವತಿಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
೭. ‘ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ರಿಸರ್ಚ್’ ನಿರ್ದೇಶಕ ಡಾ. ಧನುರಾಜ್ ಹೇಳುವಂತೆ, ‘ದ ಕೇರಳ ಸ್ಟೋರಿ’ ರಾಜ್ಯದಲ್ಲಿ ಚುನಾವಣೆಯ ಮುಖ್ಯ ವಿಷಯವಾಗಿದೆ. ಇದರ ಚರ್ಚೆ ಪ್ರತಿ ಮನೆಯಲ್ಲೂ ನಡೆಯುತ್ತಿದೆ, ಆದರೆ ಜನರು ಇದರ ಆಧಾರದ ಮೇಲೆ ಮತ ಹಾಕುತ್ತಾರೆಯೇ ಎಂಬುದು ಹೇಳುವುದು ಕಷ್ಟ.
೮. ಮುಸ್ಲಿಂ ನಾಯಕರ ಆಕ್ರೋಶ: ಕೊಚ್ಚಿ ನಿವಾಸಿ ಸಾಜಿಲ್ ಎಂಬುವವರು, ‘ದ ಕೇರಳ ಸ್ಟೋರಿ’ ಕಥೆ ನಿಜವಲ್ಲ ಎಂದು ಹೇಳುತ್ತಾರೆ. ಪ್ರೀತಿ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ವಿಷಯ. ಇದನ್ನು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂದು ನೋಡಬಾರದು. ‘ಲವ್ ಮ್ಯಾರೇಜ್’ ಅನ್ನು ಲವ್ ಜಿಹಾದ್ ಎನ್ನಬಾರದು ಎನ್ನುತ್ತಾರೆ. (ಹಾಗಿದ್ದಲ್ಲಿ, ನಂತರ ಹಿಂದೂ ಯುವತಿಯರನ್ನು ಬಲವಂತವಾಗಿ ಏಕೆ ಮತಾಂತರ ಮಾಡಲಾಗುತ್ತದೆ? – ಸಂಪಾದಕರು)
೯. ಆಡಳಿತಾರೂಢ ಮಾಕಪ ತನ್ನನ್ನು ಮುಸ್ಲಿಂ ಪರ ಎಂದು ತೋರಿಸಿಕೊಳ್ಳುತ್ತಿದೆ: ಕೊಚ್ಚಿ ನಿವಾಸಿ ಅನೂಪ್ ಹೇಳುವಂತೆ, ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷ ಮೋನಾಲಿಸಾ ಪ್ರಕರಣವನ್ನು ಪ್ರಚಾರ ಮಾಡಿತು. ಮುಸ್ಲಿಮರು ಮಾಕಪಕ್ಕೆ ಮತ ಹಾಕಲಿ ಎಂಬ ಕಾರಣಕ್ಕೆ ಅವರು ತಮ್ಮನ್ನು ತಾವು ಪ್ರಗತಿ(ಅಧೋ)ಗತಿ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದರಿಂದ ಮುಸಲ್ಮಾನರು ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷ ಮಾಡುತ್ತಾರೆ.
ಸಂಪಾದಕೀಯ ನಿಲುವು‘ದ ಕೇರಳ ಸ್ಟೋರಿ ೨’ ಅಂತಹ ಚಲನಚಿತ್ರಗಳ ಮೂಲಕ ಹಿಂದೂಗಳಲ್ಲಿ ಜಾಗೃತಿ ಮೂಡಿ, ಅವರು ಲವ್ ಜಿಹಾದ್ ಒಂದು ಸುಳ್ಳು ಎಂದು ಹೇಳುವ ರಾಜಕೀಯ ಪಕ್ಷಗಳಿಗೆ ತಿಲಾಂಜಲಿ ನೀಡಿದರೆ ಮಾತ್ರ ಚಿತ್ರ ಯಶಸ್ವಿಯಾಗಿದೆ ಎಂದು ಹೇಳಬಹುದು. ಹಾಗೆಯೇ ಇದು ಕೇವಲ ರಾಜಕಾರಣವಲ್ಲ, ಬದಲಾಗಿ ಹಿಂದೂ ಯುವತಿಯರ ರಕ್ಷಣೆಯ ಕಾರ್ಯವಾಗಿದೆ ಎಂಬುದನ್ನು ಮರೆಯಬಾರದು! |
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?