ವಾಹನಗಳಲ್ಲಿದ್ದ ಪ್ರಯಾಣಿಕರು ದೀರ್ಘಕಾಲದವರೆಗೆ ಕಾರಿನಲ್ಲೇ ಸಿಲುಕಿಕೊಂಡರು!
(ರೋಬೋ ಟ್ಯಾಕ್ಸಿ ಎಂದರೆ ಚಾಲಕನಿಲ್ಲದ, ಸ್ವಯಂಚಾಲಿತ ಟ್ಯಾಕ್ಸಿ)

ವುಹಾನ್ (ಚೀನಾ) – ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ‘ರೋಬೋ ಟ್ಯಾಕ್ಸಿ’ಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅನೇಕ ನಗರಗಳಲ್ಲಿ ಇವುಗಳ ಬಳಕೆಯೂ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಚೀನಾದ ವುಹಾನ್ ನಗರದಲ್ಲಿ ಭಾರಿ ತಾಂತ್ರಿಕ ದೋಷದಿಂದಾಗಿ ೧೦೦ ಕ್ಕೂ ಹೆಚ್ಚು ರೋಬೋ ಟ್ಯಾಕ್ಸಿಗಳು ಹಠಾತ್ತನೆ ರಸ್ತೆ ಮಧ್ಯೆ ನಿಂತು ಬಿಟ್ಟವು. ಇದರಿಂದಾಗಿ ಕಾರಿನಲ್ಲಿ ಕುಳಿತಿದ್ದ ಪ್ರಯಾಣಿಕರು ಒಳಗೆ ಸಿಲುಕಿಕೊಂಡರು.
🇨🇳 Over 100 Robotaxis reportedly glitched and came to a sudden halt, leaving passengers trapped inside for hours.
Is the future of AI transport ready for the road? 🚕🤖#Wuhan #Robotaxi #TechFail #SelfDrivingCars #ChinaNews pic.twitter.com/eLKvMNaFib
— Sanatan Prabhat (@SanatanPrabhat) April 5, 2026
ಚೀನಾದ ‘ಬೈಡು’ ಸಂಸ್ಥೆಯ ‘ಅಪೊಲೊ ಗೋ’ ಹೆಸರಿನ ಈ ಚಾಲಕರಹಿತ ಟ್ಯಾಕ್ಸಿಗಳು ಕೆಲವು ದಿನಗಳ ಹಿಂದೆ ರಾತ್ರಿ ಸುಮಾರು ೯ ಗಂಟೆಯ ಸುಮಾರಿಗೆ ಹಠಾತ್ತನೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು. ಈ ವಾಹನಗಳು ಸಂಚಾರದ ಮಧ್ಯದಲ್ಲೇ ಸ್ಥಗಿತಗೊಂಡಿದ್ದರಿಂದ ಇತರ ವಾಹನಗಳಿಗೂ ಅಪಾಯ ಉಂಟಾಯಿತು. ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಲಾಗಿದೆ.
ರೋಬೋ ಟ್ಯಾಕ್ಸಿಗಳು ಹಠಾತ್ತನೆ ನಿಂತಾಗ, ಅವುಗಳ ಸ್ಕ್ರೀನ್ ಮೇಲೆ ವ್ಯವಸ್ಥೆಯಲ್ಲಿ ದೋಷವಿರುವ ಸಂದೇಶ ಕಾಣಿಸಿಕೊಂಡಿತು. ‘೫ ನಿಮಿಷಗಳಲ್ಲಿ ಸಿಬ್ಬಂದಿ ತಲುಪಲಿದ್ದಾರೆ,’ ಎಂಬ ಸಂದೇಶವೂ ಕಾಣಿಸಿತು. ಆದರೆ ಬಹಳ ಹೊತ್ತಿನವರೆಗೆ ಯಾರೂ ಬಾರದಿದ್ದಾಗ, ಪ್ರಯಾಣಿಕರು ಸ್ವತಃ ಎಸ್.ಓ.ಎಸ್. (ಅಪಾಯ ತೋರಿಸುವ ಸೂಚನೆ) ಬಟನ್ ಒತ್ತಿ ಅವರು ಕಾರಿನಿಂದ ಹೊರಗೆ ಬಂದರು.
ರೋಬೋ ಟ್ಯಾಕ್ಸಿಗಳು ಸ್ಥಗಿತಗೊಂಡ ಹಿಂದಿನ ಘಟನೆಗಳು
೧. ಡಿಸೆಂಬರ್ ೨೦೨೫ : ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ‘ವೇಮೋ’ ಸಂಸ್ಥೆಯ ವಾಹನಗಳು ವಿದ್ಯುತ್ ವ್ಯತ್ಯಯದಿಂದಾಗಿ ಸ್ಥಗಿತಗೊಂಡಿದ್ದವು.
೨. ಆಗಸ್ಟ್ ೨೦೨೫ : ಚೀನಾದ ಚಾಂಗ್‌ಕಿಂಗ್‌ನಲ್ಲಿ ರೋಬೋ ಟ್ಯಾಕ್ಸಿಯೊಂದು ನಿರ್ಮಾಣ ಹಂತದ ಗುಂಡಿಯಲ್ಲಿ ಬಿದ್ದಿತ್ತು.
ತಜ್ಞರ ಅಭಿಪ್ರಾಯದಂತೆ, ಸ್ವಯಂಚಾಲಿತ ವಾಹನಗಳು ಮಾನವ ತಪ್ಪುಗಳನ್ನು ಕಡಿಮೆ ಮಾಡಬಹುದು; ಆದರೆ ತಾಂತ್ರಿಕ ದೋಷಗಳು ಹೊಸ ರೀತಿಯ ಅಪಾಯಗಳನ್ನು ಸೃಷ್ಟಿಸಬಹುದು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara