ಸಿಪಿಐ(ಎಂ) ನಾಯಕ ಮೊಹಮ್ಮದ್ ಸಲೀಂ ಅವರಿಂದ ಮಾಲ್ಡಾ ಹಿಂಸಾಚಾರದ ಸಮರ್ಥನೆ !

ಕೋಲಕಾತಾ(ಬಂಗಾಳ): ಮಾಲ್ಡಾ ಜಿಲ್ಲೆಯಲ್ಲಿ ನ್ಯಾಯಾಂಗ ಅಧಿಕಾರಿಗಳ ಮೇಲೆ ನಡೆದ ಮುತ್ತಿಗೆ ಮತ್ತು ಹಿಂಸಾಚಾರದ ಘಟನೆಯನ್ನು ಸಮರ್ಥಿಸಿಕೊಂಡಿರುವ ಸಿಪಿಐ(ಎಂ) ಹಿರಿಯ ನಾಯಕ ಮೊಹಮ್ಮದ್ ಸಲೀಂ, “ಯಾವಾಗ ಅನ್ಯಾಯವೇ ಕಾನೂನಾಗುತ್ತದೆಯೋ, ಆಗ ಪ್ರತಿಭಟನೆಯೇ ಏಕೈಕ ಮಾರ್ಗವಾಗುತ್ತದೆ” ಎಂದು ಹೇಳಿದ್ದಾರೆ.

1.ಸಲೀಂ ಅವರು ಮಾತನಾಡಿ, “ಈ ಘಟನೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ವೈಫಲ್ಯದ ಫಲಿತಾಂಶವಾಗಿದೆ. ವಿಶೇಷವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ವಿವಾದದಿಂದಾಗಿ ಜನರಲ್ಲಿ ತೀವ್ರ ಆಕ್ರೋಶವಿದೆ” ಎಂದರು. ( ‘ಮತದಾರರ ಪಟ್ಟಿಯಿಂದ ಹೆಸರುಗಳನ್ನು ಏಕೆ ತೆಗೆದುಹಾಕಲಾಗಿದೆ? ಅದರ ಹಿಂದಿನ ಕಾರಣವೇನು?’ ಎಂದು ಸಲೀಂ ಏಕೆ ಹೇಳುತ್ತಿಲ್ಲ? ಯಾರ ಬಳಿ ಭಾರತದ ಪೌರತ್ವದ ಪುರಾವೆಗಳಿಲ್ಲವೋ ಅಂತವರು ನುಸುಳುಕೋರರು ಮತ್ತು ಅವರನ್ನು ದೇಶದಿಂದ ಹೊರಹಾಕಲೇಬೇಕು! ಅಂತಹವರನ್ನು ಸಮರ್ಥಿಸುವವರು ದೇಶದ್ರೋಹಿಗಳೇ ಸರಿ! – ಸಂಪಾದಕರು) “ಯಾವಾಗ ಮತದಾನದ ಹಕ್ಕುಗಳಿಗೆ ಧಕ್ಕೆಯಾಗುತ್ತದೆಯೋ, ಆಗ ಇಂತಹ ಆಂದೋಲನಗಳು ಸ್ವಾಭಾವಿಕ” ಎಂದು ಅವರು ಹೇಳಿದ್ದಾರೆ.

2.ವಿವಾದಿತ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಬಡವರು, ಅಲ್ಪಸಂಖ್ಯಾತರು ಮತ್ತು ವಂಚಿತ ವರ್ಗಗಳ ವಿರುದ್ಧ ನಡೆಸಲಾಗುತ್ತಿರುವ ಅಭಿಯಾನವಾಗಿದೆ ಎಂದು ಸಲೀಂ ಆರೋಪಿಸಿದ್ದಾರೆ. ಯಾವುದೇ ಸ್ಪಷ್ಟ ಕಾರಣ ನೀಡದೆ ಅನೇಕರ ಹೆಸರುಗಳನ್ನು ಕೈಬಿಡಲಾಗಿದ್ದು, ಇದು ಸಮಾಜದ ವಿವಿಧ ವರ್ಗಗಳ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ( ‘ಸುಳ್ಳು ಹೇಳು, ಆದರೆ ಅಷ್ಟೇ ಗಟ್ಟಿತನದಿಂದ ಹೇಳು’ ಎಂಬ ಪ್ರವೃತ್ತಿಯ ನಾಯಕ ಸಲೀಂ! ಸಂಪಾದಕರು)

ಏನಿದು ಘಟನೆ ?

ಮಾಲ್ಡಾದ ಮೋಥಾಬಾರಿ ಪ್ರದೇಶದಲ್ಲಿ ಏಪ್ರಿಲ್ 1 ರಂದು ಸುಪ್ರೀಂ ಕೋರ್ಟ್ ಆದೇಶದಂತೆ ತೆರಳಿದ್ದ 7 ನ್ಯಾಯಾಂಗ ಅಧಿಕಾರಿಗಳನ್ನು ಬಿಡಿಒ (BDO) ಕಚೇರಿಯಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ಅಷ್ಟೇ ಅಲ್ಲದೆ, ಒಬ್ಬ ಅಧಿಕಾರಿಯನ್ನು ವಾಹನದಲ್ಲಿ ಸುಮಾರು 9 ಗಂಟೆಗಳ ಕಾಲ ತಡೆಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಗುಂಪು ರಸ್ತೆ ತಡೆ ನಡೆಸಿ, ವಿಧ್ವಂಸಕ ಕೃತ್ಯ ಎಸಗಿದ್ದಲ್ಲದೆ ಪೊಲೀಸರ ಮೇಲೂ ದಾಳಿ ಮಾಡಿದೆ. ಈ ಪ್ರಕರಣದಲ್ಲಿ ಇದುವರೆಗೆ 35ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕ್ರೌರ ಇತಿಹಾಸ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಹರಡಿದೆ. ಹೀಗಿರುವಾಗ ಅಂತಹ ಪಕ್ಷ ಹಿಂಸಾಚಾರದ ಸಮರ್ಥನೆಯೇ ಮಾಡುತ್ತದೆ ಎನ್ನುವುದರಲ್ಲಿ ಆಶ್ಚರ್ಯವೇನಿದೆ? ಇಂತಹ ಪಕ್ಷವನ್ನು ಭಾರತದಲ್ಲೀಗ ನಿಷೇಧಿಸುವುದು ಅತ್ಯಗತ್ಯವಾಗಿದೆ !