ನಾನು ಬಂಗಾಳವನ್ನು ಬಾಂಗ್ಲಾದೇಶವಾಗಲು ಬಿಡುವುದಿಲ್ಲ ! – ಭಾಜಪ ನಾಯಕ ಮತ್ತು ನಟ ಮಿಥುನ ಚಕ್ರವರ್ತಿ

ಕೋಲಕಾತಾ (ಬಂಗಾಳ) – ಎಲ್ಲಿಯವರೆಗೆ ನನ್ನ ಮೈಯಲ್ಲಿ ರಕ್ತದ ಒಂದು ಹನಿ ಇರುವ ತನಕ ಯಾರೂ ಬಂಗಾಳವನ್ನು ಬಾಂಗ್ಲಾದೇಶವಾಗಿ ಮಾಡಲು ಸಾಧ್ಯವಿಲ್ಲ, ಎಂದು ನಟ ಹಾಗೂ ಭಾಜಪ ನಾಯಕ ಮಿಥುನ ಚಕ್ರವರ್ತಿ ಅವರು ಹೇಳಿದ್ದಾರೆ. ಮತದಾರರ ಪಟ್ಟಿಯ ಆಳವಾದ ಮರುಪರಿಶೀಲನೆಯ ಪ್ರಕ್ರಿಯೆಯ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ನಡೆಸಿದರು. ನುಸುಳುವಿಕೆಯು ಒಂದು ದೊಡ್ಡ ವಿಷಯವಾಗಿದೆ ಎಂದು ಹೇಳಿದ ಮಿಥುನ್ ಚಕ್ರವರ್ತಿಯವರು, ಇದರಿಂದ ಸ್ಥಳೀಯ ಜನರ, ವಿಶೇಷವಾಗಿ ಮುಸಲ್ಮಾನ ಸಮಾಜದ ಉದ್ಯೋಗ ಮತ್ತು ಹಕ್ಕುಗಳಿಗೆ ಧಕ್ಕೆ ಬರುತ್ತಿದೆ, ಎಂದರು.

ಬಂಗಾಳದಲ್ಲಿ ಪ್ರಸ್ತುತ ಎಷ್ಟು ಗಲೀಜು ಇದೆಯೆಂದರೆ, ಅದನ್ನು ಕಸಬರಗಿ ಹಿಡಿದು ಸ್ವಚ್ಛಗೊಳಿಸಬೇಕಿದೆ !

ಮಿಥುನ್ ಚಕ್ರವರ್ತಿಯವರು ಮಾತು ಮುಂದುವರೆಸುತ್ತಾ, ಭಾಜಪವು ಮುಸಲ್ಮಾನರ ವಿರೋಧಿಯಲ್ಲ, ಬದಲಾಗಿ ಭಾರತದಲ್ಲಿ ವಾಸಿಸುತ್ತಾ ಭಾರತಕ್ಕೆ ಹಾನಿ ಮಾಡಲು ಬಯಸುವ ಜನರ ವಿರೋಧಿಯಾಗಿದೆ. ಭಾಜಪದ ಅನೇಕ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮದರಸಾಗಳಿಗೆ ೫ ಸಾವಿರದ ೭೧೩ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಬಂಗಾಳದಲ್ಲಿ ಪ್ರಸ್ತುತ ಎಷ್ಟು ಗಲೀಜು ಹರಡಿದೆಯೆಂದರೆ, ಅದನ್ನು ಕಸಬರಗಿ ಹಿಡಿದು ಸ್ವಚ್ಛಗೊಳಿಸಬೇಕಿದೆ, ಎಂದು ಹೇಳಿದರು.