ಶಿಳಫಾಟಾ (ಠಾಣೆ) ಇಲ್ಲಿನ ಹಿಂದೂ ಸಮ್ಮೇಳನದಲ್ಲಿ ಸಚಿವ ನಿತೇಶ ರಾಣೆ ಅವರ ಕರೆ

ಠಾಣೆ, ಏಪ್ರಿಲ್ ೪ (ಸುದ್ದಿ) – ಮುಂಬ್ರಾ ಪರಿಸರವನ್ನು ಕೇಸರಿಮಯ ಮಾಡಲು ಕಾರ್ಯಕರ್ತರು ಸಂಘಟಿತರಾಗಬೇಕು. ನೀವು ಒಬ್ಬಂಟಿಯಲ್ಲ, ಯಾವುದೇ ಸಮಸ್ಯೆ ಇದ್ದರೂ ನಮಗೆ ತಿಳಿಸಿ. ‘ಮುಂಬ್ರಾದೇವಿ’ಯ ಪ್ರತಿಯೊಂದು ಮನೆಯ ಮೇಲೆ ಭಗವಾ ಧ್ವಜ ಹಾರಾಡುವವರೆಗೆ ವಿಶ್ರಮಿಸಬಾರದು ಎಂದು ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ಹಾಗೂ ಸಿಂಧುದುರ್ಗ ಜಿಲ್ಲೆಯ ಉಸ್ತುವಾರಿ ಸಚಿವ ನಿತೇಶ ರಾಣೆ ಅವರು ಮುಂಬ್ರಾದಲ್ಲಿ ಗುಡುಗಿದರು. ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಶಿಳಫಾಟಾದಲ್ಲಿ ನಡೆದ ‘ಹಿಂದೂ ಸಮ್ಮೇಳನ’ದಲ್ಲಿ ಸಚಿವ ನಿತೇಶ ರಾಣೆ ಮಾತನಾಡುತ್ತಿದ್ದರು. ಸಕಲ ಹಿಂದೂ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಈ ಸಮ್ಮೇಳನದಲ್ಲಿ ವೇದಿಕೆಯ ಮೇಲೆ ಇತರ ಗಣ್ಯರು ಉಪಸ್ಥಿತರಿದ್ದರು.
ಸಚಿವ ನಿತೇಶ ರಾಣೆ ಅವರು ಮಾತು ಮುಂದುವರೆಸುತ್ತಾ,
೧. ಇಂದು ಮುಂಬ್ರಾದ ಹಿಂದೂಗಳಿಗೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಅಥವಾ ಮತಾಂತರದ ಹೆಸರಿನಲ್ಲಿ ಭಯ ಹುಟ್ಟಿಸುವ ಪಿತೂರಿ ನಡೆಯುತ್ತಿದೆ. ಯಾರಾದರೂ ಹಿಂದೂಗಳ ಕಡೆಗೆ ಕೆಟ್ಟ ದೃಷ್ಟಿಯಿಂದ ನೋಡಿದರೆ, ನಾನು ಹೇಳದೆ ಕೇಳದೆ ಇಲ್ಲಿಗೆ ಬಂದು ತಾಂಡವವಾಡಿ ಹೋಗುತ್ತೇನೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮಸೀದಿಗಳಿಂದ ಯಾರು ನನ್ನ ಭಾಷಣವನ್ನು ಕೇಳುತ್ತಿದ್ದಾರೋ ಅವರಿಗೆ ತಿಳಿಯಲಿ, ಇದು ನಿಮ್ಮ ಅಬ್ಬುವಿನ ಪಾಕಿಸ್ತಾನವಲ್ಲ, ಇದು ನನ್ನ ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರ. ಸ್ವರಾಜ್ಯ, ಶೌರ್ಯ ಮತ್ತು ನ್ಯಾಯನಿಷ್ಠೆಯೇ ಇಂದಿನ ಪೀಳಿಗೆಯ ಪ್ರೇರಣೆಯಾಗಿದೆ. ರಾಜ್ಯದಲ್ಲಿ ಧರ್ಮ ಸ್ವಾತಂತ್ರ್ಯ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಯಾವುದೇ ರೀತಿಯ ಬೆದರಿಕೆ ಅಥವಾ ಒತ್ತಡಕ್ಕೆ ಹಿಂದೂಗಳು ಬಗ್ಗಬಾರದು.
೨. ಇಂದು ಯಾರೋ ಎದ್ದು ನಮಗೆ ಸವಾಲು ಹಾಕುವ ಭಾಷೆಯಲ್ಲಿ ಮಾತನಾಡುತ್ತಾರೆ. ಅವರೆಲ್ಲ ಇತ್ತೀಚಿನ ಹುಡುಗರು. ಜನಪ್ರತಿನಿಧಿಗಳಾದ ನಂತರ ‘ಇವನನ್ನು ನಾವು ಸೋಲಿಸುತ್ತೇವೆ’ ಎಂದು ಹೇಳುತ್ತಾರೆ. ಅವರ ಮಾನಸಿಕತೆಯನ್ನು ಗುರುತಿಸಿ, ಅರ್ಥಮಾಡಿಕೊಳ್ಳಿ. ಆ ಜನರಿಗೆ ಬಾಲ್ಯದಿಂದಲೂ ಇದನ್ನೇ ಕಲಿಸಲಾಗುತ್ತದೆ. ಮದರಸಾಗಳಲ್ಲಿ ಕುಳಿತಿರುವವರು ಇದನ್ನು ಕಲಿಸುತ್ತಾರೆ. ಅಲ್ಲಿಂದ ಭಯೋತ್ಪಾದಕರು ಸೃಷ್ಟಿಯಾಗುತ್ತಾರೆ ಮತ್ತು ಆದ್ದರಿಂದಲೇ ಅವರ ಬಾಯಿಂದ ಇಂತಹ ವಿಚಾರಗಳು ಹೊರಬರುತ್ತವೆ. ನಾವು ಈಗ ಧರ್ಮ ಸ್ವಾತಂತ್ರ್ಯ ಕಾಯ್ದೆಯವರೆಗೆ ತಲುಪಿದ್ದೇವೆ. ಇನ್ನು ಮುಂದಿನ ಹಂತ ಮದರಸಾಗಳದ್ದಾಗಿದೆ.
ಮುಂಬ್ರಾವನ್ನು ‘ಮುಂಬ್ರಾದೇವಿ’ ಎಂದು ನಾಮಕರಣ ಮಾಡೋಣ !
ಸಾಂಗ್ಲಿಯ ಇಸ್ಲಾಂಪುರವನ್ನು ಈಶ್ವರಪುರ ಎಂದು ನಾಮಕರಣ ಮಾಡಲಾಯಿತು. ಮುಂಬ್ರಾವನ್ನು ಸಹ ‘ಮುಂಬ್ರಾದೇವಿ’ ಎಂದು ನಾಮಕರಣ ಮಾಡಿ ತೋರಿಸುತ್ತೇವೆ ಎಂದು ರಾಣೆ ಅವರು ಉಪಸ್ಥಿತರಿಗೆ ವಿಶ್ವಾಸ ವ್ಯಕ್ತಪಡಿಸಿದರು. ಈ ಹೇಳಿಕೆಗೆ ಸಭಾಸ್ಥಳದಲ್ಲಿದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ಬೆಂಬಲ ಸೂಚಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ