(ಟ್ರಾನ್ಸ್ ಜೆಂಡರ್ ಎಂದರೆ ಜನ್ಮತಃ ಇರುವ ಲಿಂಗಕ್ಕಿಂತ ಭಿನ್ನವಾಗಿ ತನ್ನದೇ ಆದ ಪ್ರತ್ಯೇಕ ಲಿಂಗ ಗುರುತನ್ನು ಹೊಂದಿರುವ ವ್ಯಕ್ತಿ)

ಕ್ವೆಟ್ಟಾ (ಬಲೂಚಿಸ್ತಾನ) – ಪಾಕಿಸ್ತಾನದ ಶೇ.೮೦ ರಷ್ಟು ಜನಸಂಖ್ಯೆಯು ಸಮಲಿಂಗಿಗಳಾಗಿದ್ದಾರೆ ಮತ್ತು ಉಳಿದ ಶೇ.೨೦ ರಷ್ಟು ಜನರು ದ್ವಿಲಿಂಗಿಗಳು (ಪುರುಷ ಮತ್ತು ಸ್ತ್ರೀ ಇಬ್ಬರ ಬಗ್ಗೆಯೂ ಆಕರ್ಷಣೆ ಹೊಂದಿರುವವರು). ಪಾಕಿಸ್ತಾನದಲ್ಲಿ ಯಾರೂ ಸಂಪೂರ್ಣವಾಗಿ ವಿಷಮಲಿಂಗಿಗಳಲ್ಲ (ವಿರುದ್ಧ ಲಿಂಗಿಗಳ ಬಗ್ಗೆ ಮಾತ್ರ ಆಕರ್ಷಣೆ ಹೊಂದಿರುವವರು) ಎಂದು ಪಾಕಿಸ್ತಾನದ ಟ್ರಾನ್ಸ್ ಜೆಂಡರ್ ಕಾರ್ಯಕರ್ತೆ ಹೀನಾ ಬಲೋಚ್ ದಾವೆ ಮಾಡಿದ್ದಾರೆ.
ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದ್ದಾರೆ. ಪಾಕಿಸ್ತಾನದ ಪ್ರತಿಯೊಬ್ಬರಿಗೂ ತಿಳಿದಿರುವ ಬಹಿರಂಗ ಸತ್ಯವಿದು ಎಂದು ಹೀನಾ ಬಲೋಚ್ ಹೇಳಿದ್ದಾರೆ. ಜನರು ತಮ್ಮ ನಿಜವಾದ ಲೈಂಗಿಕ ಗುರುತನ್ನು ಮರೆಮಾಚುತ್ತಾರೆ ಮತ್ತು ಧರ್ಮ, ಸಂಸ್ಕೃತಿ ಹಾಗೂ ಕುಟುಂಬದ ಒತ್ತಡದಿಂದಾಗಿ ಅದನ್ನು ಬಹಿರಂಗವಾಗಿ ಸ್ವೀಕರಿಸುವುದಿಲ್ಲ. ಹೀನಾ ಬಲೋಚ್ ಅವರು ‘ಸಿಂಧ್ ಔರತ್ ಮಾರ್ಚ್’ನ ಸಹ-ಸ್ಥಾಪಕರಾಗಿದ್ದರು ಮತ್ತು ‘ಔರತ್ ಮಾರ್ಚ್’ನಲ್ಲಿಯೂ ಸಕ್ರಿಯರಾಗಿದ್ದರು. ‘ಪ್ರೈಡ್’ (ಸಮಲಿಂಗಿ ಸಮುದಾಯದ ಧ್ವಜ) ಧ್ವಜವನ್ನು ಹಿಡಿದಿದ್ದಕ್ಕಾಗಿ ಅವರನ್ನು ಅಪಹರಿಸಿ ಕಿರುಕುಳ ನೀಡಲಾಗಿತ್ತು, ನಂತರ ಅವರು ದೇಶವನ್ನು ತೊರೆದು ಯುನೈಟೆಡ್ ಕಿಂಗ್ ಡಮ್‌ನಲ್ಲಿ ಆಶ್ರಯ ಪಡೆಯಬೇಕಾಯಿತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation