ಪಂಕ್ಚರ್ ರಿಪೇರಿ ಮಾಡುವ ಮುಸ್ಲಿಂನಿಂದ ಹಿಂದೂ ಬಾಲಕಿಯ ದೌರ್ಜನ್ಯ!

  • ರೆಹಮಾನ್ ಮನೆ ಕೆಡವಲು ಜನರ ಆಗ್ರಹ

  • ಆರೋಪಿಯ ಮನೆಗೆ ನುಗ್ಗೆ ಧ್ವಂಸ

ಭೋಪಾಲ್ (ಮಧ್ಯಪ್ರದೇಶ) – ನೀಮಚ್ ಜಿಲ್ಲೆಯ ಮನಸಾ ನಗರದಲ್ಲಿ ಏಪ್ರಿಲ್ 1ರ ರಾತ್ರಿ ಪಂಕ್ಚರ್ ರಿಪೇರಿ ಮಾಡುವ 55 ವರ್ಷದ ಅಬ್ದುಲ್ ರೆಹಮಾನ್ ಎಂಬಾತ 13 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದನು. ಈ ಘಟನೆಯ ನಂತರ ಮರುದಿನ ಆಕ್ರೋಶಗೊಂಡ ಗ್ರಾಮಸ್ಥರು ತಕ್ಷಣವೇ ರಸ್ತೆ ತಡೆ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

1. ಅಬ್ದುಲ್ ರೆಹಮಾನ್ ಸಂತ್ರಸ್ತ ಕುಟುಂಬದ ನೆರೆಮನೆಯಲ್ಲೇ ವಾಸವಾಗಿದ್ದನು. ಏಪ್ರಿಲ್ 1ರ ರಾತ್ರಿ ಸಂತ್ರಸ್ತೆಯ ಮನೆಗೆ ನುಗ್ಗಿದ ಆತ, ಬಾಲಕಿ ಒಬ್ಬಳೇ ಇರುವುದನ್ನು ಕಂಡು ದೌರ್ಜನ್ಯಕ್ಕೆ ಯತ್ನಿಸಿದನು. ಬಾಲಕಿ ಕಿರುಚಾಡಲು ಆರಂಭಿಸಿದಾಗ ಅವಳಿಗೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಮನೆಯವರು ಹಿಂತಿರುಗಿದ ನಂತರ ಬಾಲಕಿ ಅಳುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾಳೆ.

2. ಈ ಸುದ್ದಿ ನಗರದಾದ್ಯಂತ ಹರಡುತ್ತಿದ್ದಂತೆ ಆಕ್ರೋಶಗೊಂಡ ಜನರು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ರಸ್ತೆ ತಡೆದರು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಹ ‘ಆರೋಪಿಯನ್ನು ತಕ್ಷಣ ಬಂಧಿಸಬೇಕು ಮತ್ತು ಅವನ ಅನಧಿಕೃತ ಕಟ್ಟಡವನ್ನು ನೆಲಸಮ ಮಾಡಬೇಕು’ ಎಂದು ಆಡಳಿತವನ್ನು ಒತ್ತಾಯಿಸಿದರು.

3. ಗ್ರಾಮ ಪಂಚಾಯಿತಿಯು ಆ ಕಟ್ಟಡಕ್ಕೆ ನೋಟಿಸ್ ಅಂಟಿಸಿ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ಕರೆಸಿತು. ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರೂ, ಜನಸಮೂಹ ಮಾತ್ರ ಆರೋಪಿಯ ಮನೆಯನ್ನು ಕೂಡಲೇ ಕೆಡವಬೇಕೆಂದು ಒತ್ತಾಯಿಸಿತು.

4. ಕೆಲವು ಆಕ್ರೋಶಿತ ಗ್ರಾಮಸ್ಥರು ಆರೋಪಿಯ ಮನೆಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಜನರ ಗುಂಪು ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು ಮತ್ತು ಅಶ್ರುವಾಯು ಬಳಸಬೇಕಾಯಿತು. ಇದರಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

5. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವಲ್ ಸಿಂಗ್ ಸಿಸೋಡಿಯಾ ಅವರು ಈ ಬಗ್ಗೆ ಮಾತನಾಡಿ, “ಕೆಲವರು ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಂತಿ ನೆಲೆಸಿದೆ. ಗಲಭೆಯಲ್ಲಿ ಭಾಗಿಯಾದ ಕೆಲವು ಯುವಕರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಇಂತಹ ಕಾಮುಕರನ್ನು ಹದ್ದುಬಸ್ತಿನಲ್ಲಿಡದಿದ್ದರೆ, ಭವಿಷ್ಯದಲ್ಲಿ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಂಡು ಇಂಥವರಿಗೆ ಪಾಠ ಕಲಿಸುತ್ತಾರೆ ಎಂಬುದನ್ನು ಸರಕಾರ ಮರೆಯಬಾರದು!