|

ನವ ದೆಹಲಿ – ಬಂಗಾಳದ ಮುಸಲ್ಮಾನ್ ಬಹುಸಂಖ್ಯಾತ ಪ್ರದೇಶವಾದ ಮಾಲ್ದಾದಲ್ಲಿ ಮತದಾರರ ಪಟ್ಟಿಯ ಸಮಗ್ರ ಪುನರಾವಲೋಕನ ಪ್ರಕ್ರಿಯೆಯ ಸಮಯದಲ್ಲಿ ಕೆಲವು ಅಧಿಕಾರಿಗಳನ್ನು ಒತ್ತೆ ಇರಿಸಿಕೊಂಡ ಘಟನೆಯು ಏಪ್ರಿಲ್ ೧ ರಂದು ನಡೆದಿದೆ. ಈ ಘಟನೆಯನ್ನು ಸರ್ವೋಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಅಥವಾ ಕೇಂದ್ರೀಯ ತನಿಖಾ ದಳಕ್ಕೆ (ಸಿ.ಬಿ.ಐ.) ವಹಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಪರಿಶೀಲನಾ ಪ್ರಕ್ರಿಯೆಯಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳ ರಕ್ಷಣೆಗಾಗಿ ಕೇಂದ್ರ ಭದ್ರತಾ ಪಡೆಯನ್ನು ನಿಯೋಜಿಸುವಂತೆ ಸೂಚಿಸಿದೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, ೩ ಮಹಿಳೆಯರು ಸೇರಿದಂತೆ ೭ ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆ ಇರಿಸಿಕೊಂಡ ಘಟನೆಯು ಅತ್ಯಂತ ಖಂಡನೀಯ. ಈ ಘಟನೆಯು ಪೂರ್ವನಿಯೋಜಿತ ಮತ್ತು ಉದ್ದೇಶಪೂರ್ವಕವಾಗಿದೆ. ಬಂಗಾಳದಲ್ಲಿ ಪ್ರತಿಯೊಬ್ಬರೂ ಕೇವಲ ರಾಜಕೀಯ ಭಾಷೆಯನ್ನೇ ಮಾತನಾಡುತ್ತಿದ್ದಾರೆ. ನಾನು ಸ್ವತಃ ರಾತ್ರಿ ೨ ಗಂಟೆಯವರೆಗೆ ಪರಿಸ್ಥಿತಿಯನ್ನು ಗಮನಿಸುತ್ತಿದ್ದೆ. ಹಾಗಾಗಿ ‘ಇದರ ಹಿಂದೆ ಯಾರಿದ್ದಾರೆ?’ ಎಂಬುದು ನಮಗೆ ತಿಳಿದಿದೆ. ಬಂಗಾಳವು ದೇಶದ ಅತ್ಯಂತ ಧ್ರುವೀಕರಣಗೊಂಡ ರಾಜ್ಯವಾಗಿದೆ ಎಂದು ಹೇಳಿದೆ.
The Supreme Court slams the situation in Bengal! 🚫⚖️
After 7 judicial officers were held hostage in Malda, the SC labeled Bengal as the "most polarised state."
- Investigation ordered
– Full-time security for officers mandated#SupremeCourt #Bengal #Malda #BengalElections… pic.twitter.com/pwhg3Ti5Ix
— Sanatan Prabhat (@SanatanPrabhat) April 2, 2026
ನ್ಯಾಯಾಂಗ ಅಧಿಕಾರಿಗಳ ನಿವಾಸಗಳಿಗೂ ಕೇಂದ್ರ ಪಡೆಯನ್ನು ನಿಯೋಜಿಸುವಂತೆ ನ್ಯಾಯಾಲಯ ಆದೇಶಿಸಿದೆ. ಯಾವುದೇ ನ್ಯಾಯಾಂಗ ಅಧಿಕಾರಿ ಅಥವಾ ಅವರ ಕುಟುಂಬದವರಿಗೆ ಅಪಾಯ ಉಂಟಾದಲ್ಲಿ ತಕ್ಷಣವೇ ಪರಿಸ್ಥಿತಿಯ ಮೌಲ್ಯಮಾಪನ ಮಾಡಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಾಲ್ದಾದಲ್ಲಿ ಏನಾಯಿತು?
ಬಂಗಾಳದ ಮಾಲ್ದಾ ಜಿಲ್ಲೆಯ ಕಾಲಿಯಾಚಕ್ ಇಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರತಿಭಟಿಸಿ ಹಿಂಸಾತ್ಮಕ ಆಂದೋಲನ ನಡೆಯಿತು. ಆಕ್ರೋಶಗೊಂಡ ಗುಂಪು ಬಿಡಿಒ ಕಚೇರಿಯನ್ನು ಮುತ್ತಿಗೆ ಹಾಕಿ ಧ್ವಂಸಗೊಳಿಸಿತು ಮತ್ತು ವಾಹನಗಳಿಗೆ ಹಾನಿ ಮಾಡಿತು. ಈ ಸಮಯದಲ್ಲಿ ಮತದಾರರ ಪಟ್ಟಿಯ ಕೆಲಸಕ್ಕಾಗಿ ಬಂದಿದ್ದ ೩ ಮಹಿಳಾ ನ್ಯಾಯಾಧೀಶರು ಸೇರಿದಂತೆ ೭ ನ್ಯಾಯಾಂಗ ಅಧಿಕಾರಿಗಳನ್ನು ೮-೯ ಗಂಟೆಗಳ ಕಾಲ ಒತ್ತೆ ಇರಿಸಿಕೊಳ್ಳಲಾಗಿತ್ತು.
ಈ ಘಟನೆಯ ನಂತರ ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರ ಆದೇಶದ ನಂತರವೇ ಆಡಳಿತ ಯಂತ್ರವು ಸಕ್ರಿಯವಾಯಿತು ಮತ್ತು ರಾತ್ರಿ ಕಠಿಣ ನಿರ್ದೇಶನಗಳನ್ನು ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಈ ಸಮಯದಲ್ಲಿ ಕಲ್ಲು ತೂರಾಟವೂ ನಡೆಯಿತು. ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಹಾಯದಿಂದ ಅಧಿಕಾರಿಗಳನ್ನು ಹೊರತರುವಾಗಲೂ ಅವರ ಮೇಲೆ ಕಲ್ಲು ತೂರಾಟ ನಡೆಸಲಾಯಿತು.
ಸಂಪಾದಕೀಯ ನಿಲುವುಬಂಗಾಳದಲ್ಲಿ ಇಂತಹ ಘಟನೆ ನಡೆಯುವುದು ಆಶ್ಚರ್ಯವೇನಲ್ಲ. ನ್ಯಾಯಾಲಯವು ಈಗ ಆದೇಶ ನೀಡಿದ್ದರೂ ಸಹ, ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಗಮನಿಸಿದರೆ ಮತ್ತೆ ಇಂತಹ ಘಟನೆ ನಡೆಯುವುದಿಲ್ಲ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)