ಕಲಬುರಗಿ ಮಹಾನಗರ ಪಾಲಿಕೆಯಿಂದ ಆಯತೊಲ್ಲಾ ಖಮೇನಿಗೆ ಶ್ರದ್ಧಾಂಜಲಿ!

‘ಘಜ್ನಿ-ಘೋರಿ’ಗಳ ಸಂತತಿ ಅವಶೇಷಗಳ ರೂಪದಲ್ಲಿ ಇನ್ನೂ ಬಾಕಿ ಇದೆ! – ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ – ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ದಾಳಿಯಲ್ಲಿ ಹತರಾದ ಇರಾನ್ ನ ಸರ್ವೋಚ್ಚ ಧರ್ಮಗುರು ಆಯತೊಲ್ಲಾ ಖಮೇನಿ ಅವರಿಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಘಟನೆಯನ್ನು ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತೀವ್ರ ಶಬ್ದಗಳಲ್ಲಿ ಖಂಡಿಸಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆ ಮತ್ತು ಖಮೇನಿ ಅವರಿಗೆ ಇರುವ ಸಂಬಂಧವೇನು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಸ್ವಾಮೀಜಿ ಮಾತನಾಡಿ, ಈ ಜನರು ಪಹಲ್ಗಾಮ್ ದಾಳಿಯನ್ನು ಖಂಡಿಸಲಿಲ್ಲ ಅಥವಾ ಅದಕ್ಕಾಗಿ ಕಣ್ಣೀರು ಹಾಕಲಿಲ್ಲ; ಆದರೆ ದೂರದ ಇರಾನ್ ದೇಶದ ನಾಯಕ ಮೃತಪಟ್ಟಾಗ ಇವರು ಇಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಶ್ರದ್ಧಾಂಜಲಿ ನಿರ್ಣಯ ಮಂಡಿಸಿದ ನಗರಸೇವಕಿ ಸಯೀದಾ ನೂರ್ ಫಾತಿಮಾ ಮತ್ತು ಖಮೇನಿ ಅವರಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದರು. ಖಮೇನಿ ಅವರ ನಿಧನದ ಬಗ್ಗೆ ವಿಧಾನಸಭೆಯಲ್ಲಾಗಲಿ ಅಥವಾ ಸಂಸತ್ತಿನಲ್ಲಾಗಲಿ ಸಂತಾಪ ವ್ಯಕ್ತಪಡಿಸಲಾಗಿಲ್ಲ; ಹಾಗಿರುವಾಗ ಅಲ್ಲಿಲ್ಲದ ಸಂಕಟ ಪಾಲಿಕೆಯಲ್ಲಿ ಯಾಕೆ? ಇದೆಲ್ಲವನ್ನೂ ನೋಡಿದರೆ ‘ಘಜ್ನಿ-ಘೋರಿ’ಗಳ ಸಂತತಿಯು ಮಹಾನಗರ ಪಾಲಿಕೆಯಲ್ಲಿ ಅವಶೇಷಗಳ ರೂಪದಲ್ಲಿ ಇನ್ನೂ ಬಾಕಿ ಇದೆ ಎಂಬುದು ತಿಳಿಯುತ್ತದೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆಯಲ್ಲಿ ಖಮೇನಿಗಾಗಿ ಸಂತಾಪ ಸೂಚಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ಕಲಬುರಗಿಯ ಮತದಾರರೇ ಮುಸಲ್ಮಾನರ ಮೇಲಿನ ಪ್ರೇಮ ಉಕ್ಕುತ್ತಿರುವ ಈ ನಗರಸೇವಕರನ್ನು ಪ್ರಶ್ನಿಸಬೇಕು!