ಮಂಗಳೂರಿನಲ್ಲಿ ‘ರಣರಾಗಿಣಿ ಶೌರ್ಯ ಜಾಗೃತಿ ಶಿಬಿರ’ !

ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜನೆ

ಶಿಬಿರದಲ್ಲಿ ಉಪಸ್ಥಿತ ಮಹಿಳೆಯರು ಮತ್ತು ಯುವತಿಯರು

ಮಂಗಳೂರು – ಧರ್ಮಾಚರಣೆಯ ಮಹತ್ವ, ಲವ್‌ ಜಿಹಾದ್‌ನ ಭಯಾನಕತೆ, ಭಾವಿ ಹಿಂದೂ ರಾಷ್ಟ್ರದ ಪರಿಕಲ್ಪನೆ, ಬ್ರಾಹ್ಮತೇಜದ ಮಹತ್ವ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಮಾಧ್ಯಮಗಳ ಮೂಲಕ ಧರ್ಮಜಾಗೃತಿ ಹಾಗೂ ಸಾಮಾಜಿಕ ವೇದಿಕೆಗಳಲ್ಲಿ ಧರ್ಮ ರಕ್ಷಣೆಗಾಗಿ ಧ್ವನಿಯೆತ್ತುವ ವಿಷಯಗಳನ್ನು ಒಳಗೊಂಡಂತೆ ಅನೇಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಎರಡು ದಿನಗಳ ‘ರಣರಾಗಿಣಿ ಶೌರ್ಯ ಜಾಗೃತಿ ಶಿಬಿರ’ವು ನೆರವೇರಿತು. ೨೮ ಮಾರ್ಚ್ ೨೦೨೬ ರಂದು ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿ ವತಿಯಿಂದ ಆಯೋಜಿಸಲ್ಪಟ್ಟ ಈ ಕಾರ್ಯಾಗಾರದಲ್ಲಿ ಬಾಗಲಕೋಟೆ, ಗದಗ, ಹುಬ್ಬಳ್ಳಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಬೆಂಗಳೂರು ಸಹಿತ ಅನೇಕ ಜಿಲ್ಲೆಗಳಿಂದ ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ, ರಣರಾಗಿಣಿ ಬೆಂಗಳೂರು ಮಹಿಳಾ ಶಾಖೆಯ ಸಮನ್ವಯಕರಾದ ಸೌ. ಭವ್ಯ ಗೌಡ, ಮಂಗಳೂರಿನ ನ್ಯಾಯವಾದಿ ಜ್ಯೋತಿ ಗೌಡ, ಶಿವಮೊಗ್ಗದ ಮಹಿಳಾ ಮುಖಂಡರಾದ ಸೌ. ನಿವೇದಿತಾ ರಾಜು ಮತ್ತು ಮುಂತಾದವರು ಉಪಸ್ಥಿತರಿದ್ದರು.