
ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿ ೮ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿಗೆ ಪೋಕ್ಸೊ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ೨೫,೦೦೦ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ. ನ್ಯಾಯಾಧೀಶ ವಿನೋದ ಕುಮಾರ್ ಚೌರಸಿಯಾ ಅವರು ಮಾತನಾಡಿ, “ನಿರಪರಾಧಿ ಬಾಲಕಿಯ ಮೇಲೆ ನಡೆದ ಈ ಕ್ರೌರ್ಯವು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಈ ಪ್ರಕರಣವು ಅತ್ಯಂತ ಕ್ರೂರ, ಅಮಾನವೀಯ ಮತ್ತು ಸಮಾಜವನ್ನು ಬೆಚ್ಚಿಬೀಳಿಸುವಂತದ್ದಾಗಿದೆ. ಆರೋಪಿಯು ಸುಧಾರಣೆಯಾಗುವ ಸಾಧ್ಯತೆ ಶೂನ್ಯವಾಗಿದೆ. ಆದ್ದರಿಂದ ದೋಷಿಯು ಗಲ್ಲು ಶಿಕ್ಷೆಗೆ ಅರ್ಹನಾಗಿದ್ದಾನೆ” ಎಂದು ಹೇಳಿದ್ದಾರೆ.
ಸೋರಾಂವ್‌ನಲ್ಲಿ ೩ ಅಕ್ಟೋಬರ್ ೨೦೨೪ ರಂದು ೨೬ ವರ್ಷದ ಆರೋಪಿ ಮುಕೇಶ್ ಪಟೇಲ್, ದುರ್ಗಾಪೂಜೆ ಮುಗಿಸಿ ಹಿಂತಿರುಗುತ್ತಿದ್ದ ಬಾಲಕಿಯನ್ನು ಅಪಹರಿಸಿದ್ದನು. ಅವಳ ಮೇಲೆ ಅತ್ಯಾಚಾರ ಮಾಡಿ ಅವಳ ಹತ್ಯೆ ಮಾಡಿದ್ದನು. ಗುರುತು ಸಿಗದಂತೆ ಮಾಡಲು ಅವಳ ಮುಖದ ಮೇಲೆ ಇರಿದಿದ್ದನು. ಅವಳ ಹಲ್ಲುಗಳನ್ನು ಮುರಿದು, ಮುಖದ ಮೇಲೆ ಗಾಯಗಳನ್ನು ಮಾಡಿ ಮತ್ತು ಎರಡೂ ಕೈಗಳನ್ನು ಮುರಿದಿದ್ದನು. ಘಟನೆ ನಡೆದ ೧೨ ದಿನಗಳ ನಂತರ ಪೊಲೀಸರು ಆರೋಪಿಯನ್ನು ಎನ್‌ಕೌಂಟರ್ ಮೂಲಕ ಬಂಧಿಸಿದ್ದರು.
ಸಂಪಾದಕೀಯ ನಿಲುವುಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಪ್ರತಿಯೊಬ್ಬರಿಗೂ ಇದೇ ಶಿಕ್ಷೆ ಸೂಕ್ತವಾಗಿದೆ! ಇಂತಹ ಶಿಕ್ಷೆಗಳು ಜಾರಿಯಾಗತೊಡಗಿದರೆ ಇಂತಹ ಘಟನೆಗಳು ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ! |
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!