
ಮುಂಬಯಿ, ಮಾರ್ಚ್ 31 (ಸುದ್ದಿ) – ಜೈನ ಮಂದಿರಗಳು ಸನಾತನ ಧರ್ಮದ ಒಂದು ಅಂಗವೇ ಆಗಿವೆ. ಮಂದಿರಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು, ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮತ್ತು ಪೇಶ್ವೆಗಳು ಮಂದಿರಗಳ ರಕ್ಷಣೆ ಮತ್ತು ಪುನರ್ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಜೈನ ಮಂದಿರಗಳಿಗೆ ಸಿಲಿಂಡರ್ ಗಳನ್ನು ಒದಗಿಸುವ ಬೇಡಿಕೆಯ ಕುರಿತು ವಿವಾದ ಸೃಷ್ಟಿಸುವುದು ತಪ್ಪು ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ಹೇಳಿದ್ದಾರೆ.
ಶ್ರೀ. ಅಭಯ ವರ್ತಕ ಅವರು ಮುಂದೆ ಮಾತನಾಡಿ, “ರಾಜ್ಯದ ಕೌಶಲ್ಯಾಭಿವೃದ್ಧಿ ಸಚಿವ ಮಂಗಳಪ್ರಭಾತ ಲೋಧಾ ಅವರು ಕೆಲವು ದಿನಗಳ ಹಿಂದೆ ಮುಂಬಯಿಯ 16 ಜೈನ ಮಂದಿರಗಳಿಗೆ ತಲಾ 5 silindar ಗಳನ್ನು ಒದಗಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪತ್ರ ಬರೆದಿದ್ದರು. ಮಂದಿರಗಳಲ್ಲಿ ‘ಆಯಂಬಿಲ್’ ಉತ್ಸವವಿರುವ ಕಾರಣ ಸಿಲಿಂಡರ್ ಗಳ ಅಗತ್ಯವಿತ್ತು. ಮಂದಿರಗಳಿಗೆ ನೂರಾರು ಭಕ್ತರು ಬರುತ್ತಾರೆ. ಆಗ ಸರಕಾರಿ ಸೌಲಭ್ಯಗಳಿಲ್ಲದೆ ಕಾರ್ಯಕ್ರಮ ನಡೆಯುವುದು ಕಷ್ಟವಾಗಿರುತ್ತದೆ. ಪ್ರಸ್ತುತ ಸಿಲಿಂಡರ್ ಗಳ ಅಭಾವವಿದ್ದ ಕಾರಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪತ್ರ ಬರೆಯಲಾಗಿತ್ತು ಮತ್ತು ಈ ಮೂಲಕ ವಾಣಿಜ್ಯ ಸಿಲಿಂಡರ್ ಗಳಿಗಾಗಿ ಬೇಡಿಕೆ ಇಡಲಾಗಿತ್ತು. ಮಂದಿರಗಳ ರಕ್ಷಣೆ ಮಾಡುವುದು ರಾಜನ ಪ್ರಥಮ ಕರ್ತವ್ಯವಾಗಿದೆ. ಮಹಾಭಾರತದ ‘ಶಾಂತಿ ಪರ್ವ’ದಲ್ಲಿ ‘ಪ್ರಜಾನಾಂ ರಕ್ಷಣಂ ಧರ್ಮೋ ರಾಜ್ಞಃ ಪರಮ ಉಚ್ಯತೇ’ (ಅರ್ಥ: ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಸರ್ವೋಚ್ಚ ಧರ್ಮ ಎಂದು ಪರಿಗಣಿಸಲಾಗುತ್ತದೆ) ಎಂಬ ಶ್ಲೋಕವಿದೆ. ‘ಪ್ರಜೆಗಳ ರಕ್ಷಣೆ ಮಾಡುವುದೇ ರಾಜನ ಸರ್ವೋಚ್ಚ ಕರ್ತವ್ಯ’ ಎಂದು ಹೇಳಲಾಗಿದೆ. ಪ್ರಜೆಗಳ ರಕ್ಷಣೆ ಎಂದರೆ ಅದರ ಜೊತೆಗೆ ಸಮಾಜದ ಧಾರ್ಮಿಕ ಅಸ್ಮಿತೆಯೂ ಸೇರಿದೆ. ಇದು ನಮ್ಮ ಭಾರತೀಯ ಪರಂಪರೆಯಾಗಿದೆ.”
ಮಂದಿರಗಳ ಕುರಿತು ತೋರಿಸಿದ ಕಾಳಜಿ ಸರಿಯಾಗಿದೆ
ಹಲವು ಬಾರಿ ಹಿಂದೂಗಳ ಮಂದಿರಗಳ ಪರವಾಗಿ ಮಂಗಳಪ್ರಭಾತ ಲೋಧಾ ಅವರು ನಿಲ್ಲುತ್ತಾರೆ. ಆದ್ದರಿಂದ ಹಿಂದುತ್ವನಿಷ್ಠರೂ ಅವರ ಪರವಾಗಿ ನಿಲ್ಲುತ್ತಾರೆ. ಮಂಗಳಪ್ರಭಾತ ಲೋಧಾ ಅವರು ಹಿಂದೂ ಮಂದಿರಗಳಿಗೂ ಸಹಾಯ ಮಾಡುತ್ತಾರೆ. ಮುಂಬಯಿಯ ಮಂದಿರಗಳಲ್ಲಿನ ಉತ್ಸವಗಳಿಗೂ ಅವರು ಸಹಾಯಕ್ಕಾಗಿ ಪ್ರಯತ್ನಿಸುತ್ತಾರೆ. ಇದಕ್ಕಾಗಿ ವಾಸ್ತವವಾಗಿ ಮಂಗಳಪ್ರಭಾತ ಲೋಧಾ ಅವರನ್ನು ಅಭಿನಂದಿಸಬೇಕು. ಜೈನ ಮತ್ತು ಹಿಂದೂಗಳನ್ನು ಬೇರೆ ಬೇರೆಯಾಗಿ ತೋರಿಸಲು ಪ್ರಯತ್ನಿಸುವುದು ದೊಡ್ಡ ತಪ್ಪು. ಮಂಗಳಪ್ರಭಾತ ಲೋಧಾ ಅವರು ಮಂದಿರಗಳ ಕುರಿತು ತೋರಿದ ಕಾಳಜಿ ಸರಿಯಾದದ್ದೇ ಎಂಬುದು ಸನಾತನ ಸಂಸ್ಥೆಯ ಸ್ಪಷ್ಟ ಅಭಿಪ್ರಾಯವಾಗಿದೆ ಎಂದು ಶ್ರೀ. ಅಭಯ ವರ್ತಕ ಅವರು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ