ಮುಸಲ್ಮಾನ ಪ್ರಿಯಕರನಿಗಾಗಿ ಬುರ್ಖಾ ಧರಿಸಿ ವಿಮಾನ ಪ್ರಯಾಣ ಮಾಡಲು ಯತ್ನಿಸುತ್ತಿದ್ದ ಹಿಂದೂ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು

ವಾರಾಣಸಿ ವಿಮಾನ ನಿಲ್ದಾಣದಲ್ಲಿನ ಘಟನೆ

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿನ ಲಾಲ ಬಹದ್ದೂರ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ‘ಇಂಡಿಗೋ’ ವಿಮಾನಯಾನ ಸಂಸ್ಥೆಯ ವಾರಾಣಸಿ – ಮುಂಬಯಿ ವಿಮಾನಕ್ಕಾಗಿ ಬಂದಿದ್ದ ಯುವತಿಯೊಬ್ಬಳು ಕಪ್ಪು ಬಣ್ಣದ ಬುರ್ಖಾವನ್ನು ಧರಿಸಿದ್ದಳು. ಮಹಿಳಾ ಭದ್ರತಾ ಸಿಬ್ಬಂದಿ ಆಕೆಯನ್ನು ತಪಾಸಣೆ ನಡೆಸಿದಾಗ, ಆಕೆಯ ಆಧಾರ ಕಾರ್ಡ್ ನಲ್ಲಿ ‘ಪೂಜಾ ಕುಶವಾಹಾ’ ಎಂದು ಹೆಸರಿತ್ತು. ಇದರಿಂದ ಸಂಶಯಗೊಂಡು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ವೇಳೆ ಆಕೆಯು ಮುಸಲ್ಮಾನ ಯುವಕನನ್ನು ಪ್ರೀತಿಸುತ್ತಿದ್ದು, ಅವನನ್ನು ವಿವಾಹವಾಗಲು ತನ್ನ ಗುರುತನ್ನು ಮರೆಮಾಚಿ ಪ್ರಯಾಣಿಸುತ್ತಿರುವುದು ಬೆಳಕಿಗೆ ಬಂದಿದೆ.

ಘಟನಾಕ್ರಮವೇನು?

೧. ಸಂಬಂಧಿತ ಯುವತಿಯು ಮೂಲತಃ ಬಿಹಾರದ ಗೋಪಾಲಗಂಜನವಳಾಗಿದ್ದು, ಆಕೆಯ ಕುಟುಂಬವು ಮುಂಬಯಿಯಲ್ಲಿ ವಾಸಿಸುತ್ತಿದೆ. ಆಕೆಗೆ ನೆರೆಯವನಾದ ಸಿರಾಜ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧವಿತ್ತು. ಈ ವಿಷಯ ತಿಳಿದ ಆಕೆಯ ಮನೆಯವರು ಮದುವೆಗೆ ನಿರಾಕರಿಸಿ ಆಕೆಯನ್ನು ಗೋಪಾಲಗಂಜಗೆ ಕರೆದುಕೊಂಡು ಹೋಗಿದ್ದರು. ಕುಟುಂಬದವರು ಆಕೆಗೆ ಸ್ವಜಾತಿಯ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಯುವತಿಯು ಸಿರಾಜಗೆ ತಿಳಿಸಿದ್ದಳು.

೨. ಸಿರಾಜನು ಆ ಯುವತಿಯನ್ನು ಮರಳಿ ಕರೆತರಲು ಇಮ್ರಾನ ಎಂಬ ಸಂಬಂಧಿಯನ್ನು ಗೋಪಾಲಗಂಜಗೆ ಕಳುಹಿಸಿದ್ದನು. ಅವರಿಬ್ಬರಿಗಾಗಿ ಇಂಡಿಗೋ ವಿಮಾನದ ಟಿಕೆಟನ್ನು ಸಹ ಅವನೇ ಕಾಯ್ದಿರಿಸಿದ್ದನು. ದಾರಿಯಲ್ಲಿ ಯಾರೂ ಗುರುತಿಸಬಾರದೆಂದು ಪೂಜಾಳಿಗೆ ಬುರ್ಖಾ ಹಾಕಿಸಲಾಗಿತ್ತು. ಇಮ್ರಾನನೊಂದಿಗೆ ಪೂಜಾ ವಾರಾಣಸಿ ವಿಮಾನ ನಿಲ್ದಾಣವನ್ನು ತಲುಪಿದ್ದಳು. ಈಗ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

೩. ಈ ಪ್ರಕರಣದ ಬಗ್ಗೆ ತಿಳಿಯುತ್ತಲೇ ಬಜರಂಗದಳದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ಪಡೆದರು. ಪೊಲೀಸರು ಕಾರ್ಯಕರ್ತರೊಂದಿಗೆ ಯುವತಿಯನ್ನು ಮಾತನಾಡಿಸಿದರು. ಆಗ ಯುವತಿಯು ತಾನು ಸ್ವಇಚ್ಛೆಯಿಂದ ಹೋಗುತ್ತಿರುವುದಾಗಿ ಸ್ಪಷ್ಟಪಡಿಸಿದಳು. ಪೊಲೀಸ ಅಧಿಕಾರಿ ಅತುಲ ಸಿಂಹರವರು ಮಾತನಾಡಿ, ಯುವತಿಯ ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ, ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಲವ್ ಜಿಹಾದ, ಮತಾಂತರ ಮುಂತಾದವುಗಳ ವಿರುದ್ಧ ಕೇವಲ ಕಾನೂನುಗಳನ್ನು ಮಾಡುವುದರಿಂದ ಈ ಘಟನೆಗಳು ನಿಲ್ಲುವುದಿಲ್ಲ, ಬದಲಿಗೆ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಅವರಲ್ಲಿ ಧರ್ಮಾಭಿಮಾನವನ್ನು ಮೂಡಿಸುವುದೂ ಅಷ್ಟೇ ಅಗತ್ಯವಾಗಿದೆ!