|

ಮುಂಬಯಿ – ಇಲ್ಲಿನ ಮಾಲವಣಿ ಪರಿಸರದಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಪೂರ್ವಸಿದ್ಧತೆಗಾಗಿ ರಾಮಭಕ್ತರು ಕೇಸರಿ ಧ್ವಜ ಮತ್ತು ಪತಾಕೆಗಳನ್ನು ಹಚ್ಚುತ್ತಿದ್ದರು. ಮಸೀದಿಯ ಮುಂಭಾಗದ ರಸ್ತೆಗೆ ರಾಮಭಕ್ತರು ಬಂದಾಗ ಅಲ್ಲಿನ ಮುಸ್ಲಿಮರು ಅವರನ್ನು ವಿರೋಧಿಸಿದರು. ಒಬ್ಬ ಮುಸ್ಲಿಂ ಮಹಿಳೆಯು ರಾಮಭಕ್ತರ ಮೇಲೆ ಹಲ್ಲೆ ನಡೆಸಿದಳು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘಟನೆಯು ಪೂರ್ವನಿಯೋಜಿತವಾಗಿತ್ತು ಎಂದು ಹೇಳಲಾಗುತ್ತಿದೆ; ಏಕೆಂದರೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಮತಾಂದ ಮುಸ್ಲಿಮರು ಅಲ್ಲಿ ಜಮಾಯಿಸಿ ರಾಮಭಕ್ತರಿಗೆ ಬೆದರಿಕೆ ಹಾಕತೊಡಗಿದರು.
‘ಸಕಲ ಹಿಂದೂ ಸಮಾಜ’ವು ಮತಾಂಧರ ವಿರುದ್ಧ ಲಿಖಿತ ದೂರನ್ನು ದಾಖಲಿಸಿದ್ದು, ಮಾರಣಾಂತಿಕ ಹಲ್ಲೆ ಮತ್ತು ದಂಗೆ ಎಬ್ಬಿಸುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಶೋಭಾಯಾತ್ರೆಯು ಸವೇರಾ ಚೌಕಕ್ಕೆ ಬಂದಾಗ ಮತಾಂಧರು ಶ್ರೀರಾಮನ ಮೂರ್ತಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಇಡೀ ಪರಿಸರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.
ಮಾಲವಣಿ ಪೊಲೀಸ್ ಠಾಣೆಯು ಈ ದಾಳಿ ನಡೆದ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದೆ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. (ಪೊಲೀಸ್ ಠಾಣೆ ಹತ್ತಿರದಲ್ಲಿದ್ದರೂ ಸಹ ಮತಾಂಧರು ಇಂತಹ ಉದ್ಧಟತನ ತೋರುತ್ತಾರೆ ಎಂದರೆ, ಇದು ಪೊಲೀಸ್ ಆಡಳಿತದ ವೈಫಲ್ಯವೇ ಸರಿ! – ಸಂಪಾದಕರು).
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!