|

ನವ ದೆಹಲಿ – ಬರುವ ಏಪ್ರಿಲ್ 1 ರಿಂದ, ಅಂದರೆ ಹೊಸ ಆರ್ಥಿಕ ವರ್ಷದಿಂದ ಡಿಜಿಟಲ್ ವ್ಯವಹಾರಗಳ ಸ್ವರೂಪವು ಬದಲಾಗಲಿದ್ದು, ಅವುಗಳನ್ನು ಮತ್ತಷ್ಟು ಸುರಕ್ಷಿತಗೊಳಿಸಲಾಗುವುದು. ನಾಗರಿಕರ ಆನ್‌ಲೈನ್ ವಂಚನೆಯನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ‘ಯುಪಿಐ’, ‘ನೆಟ್ ಬ್ಯಾಂಕಿಂಗ್’ ಅಥವಾ ‘ಮೊಬೈಲ್ ವಾಲೆಟ್’ ಬಳಸುವವರು ಇನ್ಮುಂದೆ ಎಲ್ಲಾ ಡಿಜಿಟಲ್ ವ್ಯವಹಾರಗಳಿಗಾಗಿ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (ಸುರಕ್ಷತೆಗಾಗಿ ಗುರುತಿನ ದೃಢೀಕರಣದ 2 ಹಂತಗಳು) ಮಾಡುವುದು ಕಡ್ಡಾಯವಾಗಲಿದೆ. ನಾಗರಿಕರು ಆನ್‌ಲೈನ್ ವ್ಯವಹಾರ ಮಾಡುವಾಗ ಎರಡು ಹಂತಗಳಲ್ಲಿ ತಮ್ಮ ಗುರುತನ್ನು ಸಾಬೀತುಪಡಿಸಬೇಕಾಗುತ್ತದೆ. ಇಲ್ಲಿಯವರೆಗೆ ಹೆಚ್ಚಿನ ಕಡೆಗಳಲ್ಲಿ ಕೇವಲ ಒಂದು ಒಟಿಪಿ ಅಥವಾ ‘ಪಿನ್’ ಮೂಲಕ ವ್ಯವಹಾರ ನಡೆಸಲು ಸಾಧ್ಯವಿತ್ತು.
ಡಿಜಿಟಲ್ ವ್ಯವಹಾರ ಮಾಡುವಾಗ ಗ್ರಾಹಕರಿಗೆ ವಂಚನೆಯಾದರೆ, ಅದರ ಹೊಣೆಗಾರಿಕೆ ಸಂಬಂಧಪಟ್ಟ ಬ್ಯಾಂಕಿನದ್ದಾಗಿರುತ್ತದೆ!
ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ‘ಅಥೆಂಟಿಕೇಶನ್’ಗಾಗಿ (ಗುರುತಿನ ಪರಿಶೀಲನೆಗಾಗಿ) ವಿವಿಧ ಆಯ್ಕೆಗಳನ್ನು ನೀಡಬೇಕಾಗುತ್ತದೆ. ಇವುಗಳಲ್ಲಿ ಒಂದು ಆಯ್ಕೆಯು ‘ಡೈನಾಮಿಕ್’ ಆಗಿರುವುದು ಅವಶ್ಯಕವಾಗಿದೆ. ಅಂದರೆ, ಆ ಆಯ್ಕೆಯು ಪ್ರತಿ ವ್ಯವಹಾರಕ್ಕೂ ವಿಭಿನ್ನವಾಗಿರುತ್ತದೆ. ಒಂದು ವೇಳೆ ಬ್ಯಾಂಕುಗಳು ನಿಯಮಗಳನ್ನು ಪಾಲಿಸದೆ ಗ್ರಾಹಕರಿಗೆ ವಂಚನೆಯಾದರೆ, ಅದರ ಹೊಣೆಗಾರಿಕೆಯು ಸಂಬಂಧಪಟ್ಟ ಬ್ಯಾಂಕಿನದ್ದೇ ಆಗಿರುತ್ತದೆ.
‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ ಹೇಗೆ ಕೆಲಸ ಮಾಡುತ್ತದೆ?
ಡಿಜಿಟಲ್ ವ್ಯವಹಾರಗಳಿಗಾಗಿ ಕನಿಷ್ಠ ಎರಡು ‘ಅಥೆಂಟಿಕೇಶನ್’ (ಗುರುತಿನ ದೃಢೀಕರಣ) ಘಟಕಗಳು ಇರುವುದು ಅಗತ್ಯವಾಗಿದೆ. ಇದಕ್ಕಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪಾಸ್‌ವರ್ಡ್ ಅಥವಾ ಪಿನ್, ಒಟಿಪಿ (ಒನ್ ಟೈಮ್ ಪಾಸ್‌ವರ್ಡ್), ಬಯೋಮೆಟ್ರಿಕ್ಸ್ ಮತ್ತು ಹಾರ್ಡ್‌ವೇರ್ ಟೋಕನ್ ಮುಂತಾದ ಆಯ್ಕೆಗಳನ್ನು ಪರಿಗಣಿಸಬೇಕಾಗುತ್ತದೆ.
ಇಲ್ಲಿಯವರೆಗೆ ಅನೇಕ ಬಾರಿ ಒಂದೇ ‘ಸ್ಟ್ಯಾಟಿಕ್ ಪಿನ್’ ಅನ್ನು ಎಲ್ಲೆಡೆ ಬಳಸಲಾಗುತ್ತಿತ್ತು, ಅದನ್ನು ‘ಹ್ಯಾಕರ್ಸ್’ (ಖಾತೆಗಳ ಮೇಲೆ ಅಕ್ರಮ ನಿಯಂತ್ರಣ ಸಾಧಿಸುವವರು) ಸುಲಭವಾಗಿ ಕಳ್ಳತನ ಮಾಡಬಲ್ಲವರಾಗಿದ್ದರು. ಆದರೆ ಈಗ ಪ್ರತಿ ಬಾರಿಯೂ ಹೊಸದಾದ ‘ರಿಯಲ್-ಟೈಮ್ ಸೆಕ್ಯೂರಿಟಿ ಕೋಡ್’ (ಸಾಂಕೇತಿಕ ಅಂಕಿಗಳು) ಸಿದ್ಧವಾಗಲಿದೆ. ಒಂದು ವೇಳೆ ವಂಚನೆ ಮಾಡುವ ವ್ಯಕ್ತಿಗೆ ನಿಮ್ಮ ‘ಪಿನ್’ ತಿಳಿದರೂ ಸಹ, ಆ ‘ಡೈನಾಮಿಕ್ ಫ್ಯಾಕ್ಟರ್’ (ಉದಾಹರಣೆಗೆ ಫಿಂಗರ್‌ಪ್ರಿಂಟ್ ಅಥವಾ ಒಟಿಪಿ) ಇಲ್ಲದೆ ಆತ ಹಣವನ್ನು ತೆಗೆಯಲು ಸಾಧ್ಯವಾಗುವುದಿಲ್ಲ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್