|

ಒಟ್ಟಾವಾ (ಕೆನಡಾ) – ಕೆನಡಾದ ಸಂಸತ್ತಿನ ಕೆಳಮನೆಯಾದ ‘ಹೌಸ್ ಆಫ್ ಕಾಮನ್ಸ್’ ವ್ಯಾಪಕ ಪರಿಣಾಮ ಬೀರುವ ‘ಸಿ-೯’ (ಕಂಬ್ಯಾಟಿಂಗ್ ಹೇಟ್ ಆಕ್ಟ್) ಎಂಬ ಮಹತ್ವದ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯನ್ನು ಮುಂದಿನ ಅನುಮೋದನೆಗಾಗಿ ಸಂಸತ್ತಿನ ಮೇಲ್ಮನೆಯಾದ ‘ಸೆನೆಟ್’ಗೆ ಕಳುಹಿಸಲಾಗಿದೆ. ಕೆನಡಾದಲ್ಲಿ ದೀರ್ಘಕಾಲದಿಂದ ವ್ಯಕ್ತವಾಗುತ್ತಿದ್ದ ಕಳವಳಗಳು, ಅದರಲ್ಲೂ ವಿಶೇಷವಾಗಿ ಖಲಿಸ್ತಾನಿ ಉಗ್ರಗಾಮಿ ಸಿದ್ಧಾಂತವನ್ನು ಸಾರ್ವಜನಿಕವಾಗಿ ವೈಭವೀಕರಿಸುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.
🇨🇦 Canada Signals Tough Stand on Khalistani Extremism 🚨
"Combating Hate Act" bill passed in the lower house proposes action against Khalistani terror outfits, with a likely ban on flags & symbols.
Groups like Babbar Khalsa & ISYF could face stricter enforcement.
A shift in… pic.twitter.com/UmSkJRGtXW
— Sanatan Prabhat (@SanatanPrabhat) March 27, 2026
ಉಗ್ರಗಾಮಿ ಸಂಘಟನೆಗಳ ಚಿಹ್ನೆಗಳ ಮೇಲೆ ನಿರ್ಬಂಧ
ಈ ಮಸೂದೆಯ ಅತಿ ಪ್ರಮುಖ ಅಂಶವೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಬಳಸಿ ನಿರ್ದಿಷ್ಟ ಗುಂಪಿನ ವಿರುದ್ಧ ಉದ್ದೇಶಪೂರ್ವಕವಾಗಿ ದ್ವೇಷವನ್ನು ಹರಡುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದು ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್’ ಮತ್ತು ‘ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್’ನಂತಹ ಖಲಿಸ್ತಾನಿ ಉಗ್ರಗಾಮಿ ಸಂಘಟನೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಕೆನಡಾದ ಕಾನೂನಿನ ಪ್ರಕಾರ ಈ ಸಂಘಟನೆಗಳನ್ನು ಈಗಾಗಲೇ ಉಗ್ರಗಾಮಿ ಸಂಘಟನೆಗಳೆಂದು ಘೋಷಿಸಲಾಗಿದೆ. ಅವುಗಳ ಧ್ವಜವನ್ನು ಹಾರಿಸುವುದು ಅಥವಾ ಪ್ರಚಾರ ಸಾಮಗ್ರಿಗಳನ್ನು ಹಂಚುವುದು ಈಗ ಕಾನೂನು ಕ್ರಮದ ವ್ಯಾಪ್ತಿಗೆ ಬರಲಿದೆ. ೧೯೮೫ರಲ್ಲಿ ಏರ್ ಇಂಡಿಯಾ ವಿಮಾನ ‘ಕನಿಷ್ಕ’ದಲ್ಲಿ ನಡೆದ ಬಾಂಬ್ ಸ್ಫೋಟದಂತಹ ದೊಡ್ಡ ಉಗ್ರಗಾಮಿ ದಾಳಿಯೊಂದಿಗೆ ಈ ಸಂಘಟನೆಗಳು ನಂಟು ಹೊಂದಿವೆ. ಆ ಬಾಂಬ್ ಸ್ಫೋಟದಲ್ಲಿ ೩೨೯ ಜನರು ಸಾವನ್ನಪ್ಪಿದ್ದರು.
ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಭದ್ರತೆಗೆ ಒತ್ತು
ಹೊಸ ಕಾನೂನಿನಲ್ಲಿ ಯಾವುದೇ ಸಮುದಾಯದ ಶಾಲೆಗಳು, ಧಾರ್ಮಿಕ ಸ್ಥಳಗಳು ಅಥವಾ ಸಾಂಸ್ಕೃತಿಕ ಕೇಂದ್ರಗಳಿಗೆ ಜನರ ಓಡಾಟವನ್ನು ತಡೆಯುವುದು, ಬೆದರಿಕೆ ಹಾಕುವುದು ಅಥವಾ ಅಡೆತಡೆಗಳನ್ನು ಉಂಟುಮಾಡುವುದನ್ನೂ ಸ್ವತಂತ್ರ ಅಪರಾಧವೆಂದು ಪರಿಗಣಿಸಲಾಗಿದೆ. ಕೆನಡಾದಲ್ಲಿ ಗುರುದ್ವಾರಗಳು, ಹಿಂದೂ ದೇವಾಲಯಗಳು ಮತ್ತು ಇತರ ಸಮುದಾಯ ಸ್ಥಳಗಳ ಹೊರಗೆ ಪ್ರತಿಭಟನೆ, ವಿಧ್ವಂಸಕ ಕೃತ್ಯಗಳು ಮತ್ತು ಬೆದರಿಕೆ ಒಡ್ಡುವಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂತಹ ಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ಸ್ಪಷ್ಟವಾದ ಕಾನೂನು ಚೌಕಟ್ಟು ಇರಬೇಕು ಎಂದು ಇಂಡೋ-ಕೆನಡಿಯನ್ ಸಮುದಾಯವು ದೀರ್ಘಕಾಲದಿಂದ ಒತ್ತಾಯಿಸುತ್ತಿತ್ತು. ಈ ಮಸೂದೆಯನ್ನು ಆ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ.
ಇಂಡೋ-ಕೆನಡಿಯನ್ ಸಮುದಾಯದ ಪ್ರತಿಕ್ರಿಯೆ
ಇಂಡೋ-ಕೆನಡಿಯನ್ ಸಮುದಾಯವು ಈ ಮಸೂದೆಯನ್ನು ದೊಡ್ಡ ನೆಮ್ಮದಿ ಮತ್ತು ಮಹತ್ವದ ಯಶಸ್ಸು ಎಂದು ಪರಿಗಣಿಸಿದೆ. ಅವರ ಪ್ರಕಾರ, ಇದು ಹಲವು ವರ್ಷಗಳಿಂದ ನಡೆಯುತ್ತಿರುವ ಬೆದರಿಕೆಗಳು ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಬಲ್ಲದು; ಆದರೆ ಸಮುದಾಯದ ಒಂದು ಪ್ರಮುಖ ಬೇಡಿಕೆ ಇನ್ನೂ ಬಾಕಿ ಉಳಿದಿದೆ. ಭಾರತೀಯ ರಾಯಭಾರ ಕಚೇರಿ ಮತ್ತು ರಾಜತಾಂತ್ರಿಕ ಕಚೇರಿಗಳಿಗೆ ವಿಶೇಷ ಆಂತರಿಕ ಭದ್ರತೆ ಒದಗಿಸಬೇಕು ಎಂಬುದು ಅವರ ನಿರೀಕ್ಷೆಯಾಗಿದೆ; ಏಕೆಂದರೆ ಈ ಹಿಂದೆಯೂ ಅಲ್ಲಿ ಪ್ರತಿಭಟನೆಗಳು ಮತ್ತು ದಾಳಿಗಳಂತಹ ಘಟನೆಗಳು ನಡೆದಿವೆ.
ಸಂಪಾದಕೀಯ ನಿಲುವುಕೆನಡಾದಲ್ಲಿ ಅಧಿಕಾರ ಬದಲಾವಣೆಯಾದ ನಂತರ, ಅಲ್ಲಿನ ಹೊಸ ಸರಕಾರಕ್ಕೆ ಭಾರತದ ಮಹತ್ವ ಅರ್ಥವಾಗಲಾರಂಭಿಸಿದೆ ಎಂಬುದಕ್ಕೆ ಇದುವೇ ನಿದರ್ಶನ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !