|
(‘ಡಿಜಿಟಲ್ ವ್ಯಸನ’ ಎಂದರೆ ಮೊಬೈಲ್, ಕಂಪ್ಯೂಟರ್ ಇತ್ಯಾದಿಗಳನ್ನು ನೋಡುವುದರಲ್ಲಿ ಕಳೆಯುವ ಸಮಯ)
(‘ಸ್ಕ್ರೀನ್ ಟೈಮ್’ ಎಂದರೆ ಮೊಬೈಲ್ ಅಥವಾ ಕಂಪ್ಯೂಟರನ್ನು ವೀಕ್ಷಿಸುವ ಅವಧಿ)

ಬೆಂಗಳೂರು – ಹೆಚ್ಚುತ್ತಿರುವ ಡಿಜಿಟಲ್ ವ್ಯಸನದ ಸಮಸ್ಯೆಯನ್ನು ನಿಯಂತ್ರಿಸಲು ರಾಜ್ಯ ಸರಕಾರವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಡಿಜಿಟಲ್’ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಮಸೂದೆಯನ್ನು ಸಿದ್ಧಪಡಿಸಿದೆ. ಈ ಮಸೂದೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನದ ಹೊರತು ಇರುವ ‘ಸ್ಕ್ರೀನ್ ಟೈಮ್’ ಅನ್ನು ಪ್ರತಿದಿನ 1 ಗಂಟೆಗೆ ಸೀಮಿತಗೊಳಿಸಲು ಮತ್ತು ಸಂಜೆ 7 ಗಂಟೆಯ ನಂತರ ಇಂಟರ್ನೆಟ್ ಬಳಕೆಯನ್ನು ಸ್ಥಗಿತಗೊಳಿಸಲು ಶಿಫಾರಸು ಮಾಡಲಾಗಿದೆ.
ಸರಕಾರದ ಅನುಸಾರ, ಅಂದಾಜು ಶೇ. 25 ರಷ್ಟು ಕಿಶೋರಾವಸ್ಥೆಯ ಮಕ್ಕಳು ಇಂಟರ್ನೆಟ್ ವ್ಯಸನಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ನಿದ್ರೆಯ ಕೊರತೆ, ಆತಂಕ ಮತ್ತು ಏಕಾಗ್ರತೆಯ ಕೊರತೆಯಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಈ ನೀತಿಯನ್ನು ರೂಪಿಸಲಾಗಿದೆ.
Karnataka moves to curb digital addiction among students 📵📚
➡️ Screen time capped at 1 hr/day
➡️ No internet after 7 PM
➡️ Policy for Classes 9–12⚠️ Govt says ~25% teens are addicted
Proposals include 👇
✔️ Digital detox days
✔️ Mental health support
✔️ Parental & teacher… pic.twitter.com/nn8bXtLah0— Sanatan Prabhat (@SanatanPrabhat) March 25, 2026
16 ವರ್ಷದೊಳಗಿನ ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಗೆ ಈಗಾಗಲೇ ನಿಷೇಧ ಹೇರಲಾಗಿದೆ !ರಾಜ್ಯ ಸರಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವುದಾಗಿ ಈಗಾಗಲೇ ಘೋಷಿಸಿದೆ. ಇಂತಹ ನಿರ್ಧಾರ ಕೈಗೊಂಡ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. |
ಈ ಮಸೂದೆಯ ಅನುಸಾರ…
೧. ವಿದ್ಯಾರ್ಥಿಗಳು ಮಲಗುವ ಕನಿಷ್ಠ ಒಂದು ಗಂಟೆ ಮೊದಲು ‘ಸ್ಕ್ರೀನ್’ನಿಂದ ದೂರವಿರುವುದು ಅವಶ್ಯಕ. ಮೊಬೈಲ್ ಬಳಕೆಗಾಗಿ ‘ಚೈಲ್ಡ್ ಪ್ಲಾನ್’ ಪರಿಕಲ್ಪನೆಯನ್ನು ಸೂಚಿಸಲಾಗಿದೆ. ಇದರಲ್ಲಿ ಮಕ್ಕಳಿಗೆ ಮೊಬೈಲ್‌ನಲ್ಲಿ ಸೀಮಿತ ಸೌಲಭ್ಯಗಳು, ಕೇವಲ ಆಡಿಯೋ ಆಯ್ಕೆಗಳು ಮತ್ತು ನಿರ್ದಿಷ್ಟ ಸಮಯದ ನಂತರ ಇಂಟರ್ನೆಟ್ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ವ್ಯವಸ್ಥೆ ಇರುತ್ತದೆ. ಅಲ್ಲದೆ, ವಯಸ್ಸಿಗೆ ಅನುಗುಣವಾಗಿ ಸುರಕ್ಷಿತ ಉಪಕರಣಗಳು ಮತ್ತು ‘ಆಪರೇಟಿಂಗ್ ಸಿಸ್ಟಮ್’ಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ.
2. ಶಾಲೆಗಳಲ್ಲಿ ‘ಡಿಜಿಟಲ್ ವೆಲ್-ಬೀಯಿಂಗ್’ (ವಿದ್ಯಾರ್ಥಿಗಳ ಡಿಜಿಟಲ್ ಬಳಕೆ ಆರೋಗ್ಯಕರ ಮತ್ತು ಸಮತೋಲನದಿಂದ ಕೂಡಿರುವುದಕ್ಕೆ ಒತ್ತು ನೀಡುವುದು) ಮತ್ತು ಆನ್‌ಲೈನ್ ಸುರಕ್ಷತೆಯನ್ನು ಪಠ್ಯಕ್ರಮದ ಭಾಗವಾಗಿಸಲಾಗುವುದು. ವಿದ್ಯಾರ್ಥಿಗಳಿಗೆ ‘ಸೈಬರ್ ಬುಲ್ಲಿಂಗ್’ (ಇಂಟರ್ನೆಟ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಸುವುದು), ಗೌಪ್ಯತೆ ಮತ್ತು ಜವಾಬ್ದಾರಿಯುತ ಆನ್‌ಲೈನ್ ನಡವಳಿಕೆಯ ಬಗ್ಗೆ ಶಿಕ್ಷಣ ನೀಡಲಾಗುವುದು. ಪ್ರತಿ ಶಾಲೆಯು ತನ್ನದೇ ಆದ ‘ಡಿಜಿಟಲ್ ಬಳಕೆ ನೀತಿ’ಯನ್ನು ಜಾರಿಗೆ ತರುವುದು ಕಡ್ಡಾಯವಾಗಿರುತ್ತದೆ. ‘ಡಿಜಿಟಲ್ ಡಿಟಾಕ್ಸ್ ಡೇ'(ಡಿಜಿಟಲ್ ಉಪಕರಣಗಳಿಂದ ದೂರವಿರುವ ದಿನ) ಮತ್ತು ‘ಟೆಕ್-ಫ್ರೀ’ (ತಂತ್ರಜ್ಞಾನಮುಕ್ತ ಸಮಯ) ಯಂತಹ ಉಪಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು.
3. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು. ಶಾಲೆಗಳಲ್ಲಿನ ಆಪ್ತಸಮಾಲೋಚನಾ (Counselling) ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.
4. ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯನ್ನು ನಿಗದಿಪಡಿಸಲಾಗುವುದು. ಶಿಕ್ಷಕರು ಮಕ್ಕಳ ಡಿಜಿಟಲ್ ನಡವಳಿಕೆಯನ್ನು ಗಮನಿಸಿ ಮಾರ್ಗದರ್ಶನ ನೀಡುವರು. ಪೋಷಕರು ಮನೆಯಲ್ಲಿ ‘ಸ್ಕ್ರೀನ್ ಟೈಮ್’ ನಿಗದಿಪಡಿಸುವರು, ಹಾಗೆಯೇ ಮನೆಯಲ್ಲಿ ‘ನೋ-ಫೋನ್ ಝೋನ್’ (ಮೊಬೈಲ್ ಬಳಸದ ಪ್ರದೇಶ) ವ್ಯವಸ್ಥೆಯನ್ನು ರೂಪಿಸುವುದು ಅಪೇಕ್ಷಿತವಾಗಿದೆ.
5. ಎ.ಐ. (AI) ಬಳಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು. ಶಾಲೆಗಳು ಎ.ಐ. ಬಳಕೆಗೆ ನಿಯಮಗಳನ್ನು ರೂಪಿಸಲಿವೆ. ಮನೆಗೆಲಸದಲ್ಲಿ (Homework) ಎ.ಐ. ಬಳಕೆಯನ್ನು ನಿಯಂತ್ರಿಸಲಾಗುವುದು ಮತ್ತು ನಕಲು ಮಾಡುವುದನ್ನು ತಡೆಯಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ