ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ‘ಸನಾತನ ಪ್ರಭಾತ’ ವರದಿ !

ಮುಂಬಯಿ, ೨೩ ಮಾರ್ಚ್ (ವಾರ್ತೆ) – ವರದಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಬಗ್ಗೆ ವಿಧಾನಮಂಡಲದ ನಿಯಮಗಳಿವೆ; ಆದರೂ ವಿಧಾನಮಂಡಲದಲ್ಲಿ ಸಲ್ಲಿಸಬೇಕಾದ ೧೦೦ ವರದಿಗಳು ಬಾಕಿ ಇವೆ. ಆದ್ದರಿಂದ, ಸಂಬಂಧಿತ ಪ್ರಾಧಿಕಾರಗಳು ವಾರ್ಷಿಕ ವರದಿಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವಂತೆ ಅಧ್ಯಕ್ಷರು ಆದೇಶ ನೀಡಬೇಕು ಎಂದು ಬಿಜೆಪಿಯ ಶಾಸಕ ಸುಧೀರ್ ಮುನಗಂಟಿವಾರ್ ಅವರು ಮಾರ್ಚ್ ೨೩ ರಂದು ವಿಧಾನಸಭೆಯಲ್ಲಿ ಆಗ್ರಹಿಸಿದರು.
‘ಮಹಾರಾಷ್ಟ್ರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ದ (MahaRERA) ೨೦೧೭ ರಿಂದ ೨೦೨೫ ರ ಅವಧಿಯ ೮ ವಾರ್ಷಿಕ ವರದಿಗಳನ್ನು ಮಾರ್ಚ್ ೨೩ ರಂದು ಸದನದಲ್ಲಿ ಒಟ್ಟಾಗಿ ಸಲ್ಲಿಸಲಾಯಿತು. ಇದಕ್ಕೆ ಸುಧೀರ್ ಮುನಗಂಟಿವಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು. “೨೦೧೭ ರಿಂದೀಚೆಗಿನ ವರದಿಗಳನ್ನು ಇಷ್ಟು ವರ್ಷಗಳ ನಂತರ ಸಲ್ಲಿಸುತ್ತಿದ್ದರೆ, ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಪ್ರಜಾಪ್ರಭುತ್ವದ ಹತ್ಯೆಯನ್ನು ತಡೆಯಲು ಆದೇಶ ನೀಡಬೇಕು. ಇಷ್ಟು ವರ್ಷಗಳ ವರದಿಗಳನ್ನು ಸಲ್ಲಿಸದಿದ್ದರೆ, ಆ ಅವಧಿಯ ವೇತನವನ್ನು ನೀಡದಿದ್ದರೆ ನಡೆಯುತ್ತದೆಯೇ?” ಎಂಬ ಪ್ರಶ್ನೆಯನ್ನು ಸುಧೀರ್ ಮುನಗಂಟಿವಾರ್ ಎತ್ತಿದರು.
ವರದಿಗಳು ವಿಳಂಬವಾಗಿ ಸಲ್ಲಿಕೆಯಾಗುವುದು ಸರಿಯಲ್ಲ! – ರಾಹುಲ್ ನಾರ್ವೇಕರ್, ಅಧ್ಯಕ್ಷರು, ವಿಧಾನಸಭೆ
ಸುಧೀರ್ ಮುನಗಂಟಿವಾರ್ ಅವರು ಎತ್ತಿರುವ ಅಂಶ ಅತ್ಯಂತ ಸರಿಯಾಗಿದೆ. ೨೦೧೭ ರಿಂದೀಚೆಗಿನ ವರದಿಗಳು ಇಷ್ಟು ವರ್ಷಗಳ ನಂತರ ಬರುವುದು ಅಯೋಗ್ಯವಾಗಿದೆ. ಕೆಲವು ಬಾರಿ ವಿಳಂಬಕ್ಕೆ ಸೂಕ್ತ ಕಾರಣಗಳೂ ಇರುತ್ತವೆ. ಆದರೆ, ವಿಳಂಬದ ಕಾರಣಗಳಲ್ಲಿ ಸತ್ಯಾಂಶ ಇಲ್ಲದಿದ್ದರೆ, ಈ ವಿಷಯವನ್ನು ಸದನದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು.
‘ಸನಾತನ ಪ್ರಭಾತ’ ಬಯಲಿಗೆಳೆದ ಪ್ರಕರಣ!
ರಾಜ್ಯದ ೧೨೫ ಸರ್ಕಾರಿ ಸಂಸ್ಥೆಗಳು ಸುಮಾರು ೩ ರಿಂದ ೧೪ ವರ್ಷಗಳವರೆಗೆ ವಾರ್ಷಿಕ ವರದಿಗಳನ್ನು ಸಲ್ಲಿಸಿಲ್ಲ ಎಂಬ ವರದಿಯನ್ನು ದೈನಿಕ ‘ಸನಾತನ ಪ್ರಭಾತ’ ಫೆಬ್ರವರಿ ೨೬ ರಂದು ಪ್ರಕಟಿಸಿತ್ತು. ಇದನ್ನು ಗಮನಿಸಿದ ಶಾಸಕ ಮುನಗಂಟಿವಾರ್ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!