
ಕಾಠ್ಮಂಡು (ನೇಪಾಳ) – ನೇಪಾಳದ 35 ವರ್ಷದ ಯುವ ನಾಯಕ ಬಾಲೇನ್ (ಬಾಲೇಂದ್ರ) ಶಾಹ ಅವರು ಅಲ್ಲಿನ ನೂತನ ಪ್ರಧಾನಮಂತ್ರಿಯಾಗಲಿದ್ದಾರೆ. ಬರುವ ಮಾರ್ಚ್ 27 ರಂದು, ಅಂದರೆ ಶ್ರೀರಾಮನವಮಿಯ ದಿನದಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಾಹ ಅವರು ತಮ್ಮ ಚುನಾವಣಾ ಪ್ರಚಾರವನ್ನು ಜನಕಪುರದಿಂದ ಆರಂಭಿಸಿದ್ದರು. ಜನಕಪುರವು ಸೀತಾಮಾತೆಯ ಜನ್ಮಸ್ಥಳವಾಗಿದೆ.
ಈ ನಿರ್ಧಾರವನ್ನು ಭಾರತದ ದೃಷ್ಟಿಕೋನದಿಂದ ನೋಡಬಾರದು! – ಮಾಜಿ ಪ್ರಾಧ್ಯಾಪಕ ಎಸ್.ಡಿ. ಮುನಿ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್.ಡಿ. ಮುನಿ ಅವರ ಪ್ರಕಾರ, ಬಾಲೇನ್ ಶಾಹ ಅವರ ಈ ಕ್ರಮವು ಜನರ ಭಾವನೆಗಳೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಪ್ರಯತ್ನವಾಗಿದೆ. ಅವರ ಬೆಂಬಲಿಗರು ಮುಖ್ಯವಾಗಿ ಯುವಕರಾಗಿದ್ದು, ಅವರು ರಾಜಪ್ರಭುತ್ವದ ವಿರೋಧಿಗಳಾಗಿದ್ದಾರೆ. ಆದ್ದರಿಂದ, ಅವರು ಶ್ರೀರಾಮನವಮಿಯಂದು ಪ್ರಮಾಣವಚನ ಸ್ವೀಕರಿಸುವ ನಿರ್ಧಾರವನ್ನು ಹಳೆಯ ಧಾರ್ಮಿಕ ರಾಜಪ್ರಭುತ್ವದೊಂದಿಗೆ ಜೋಡಿಸಬಾರದು.
ಈ ನಿರ್ಧಾರವನ್ನು ಭಾರತದ ಸಂದರ್ಭದಲ್ಲಿ ನೋಡಬಾರದು. ನೇಪಾಳವು ಯಾವಾಗಲೂ ತನ್ನದೇ ಆದ ಸ್ವತಂತ್ರ ರಾಷ್ಟ್ರೀಯ ಮತ್ತು ಧಾರ್ಮಿಕ ಗುರುತನ್ನು ನಿರ್ಮಿಸಲು ಪ್ರಯತ್ನಿಸಿದೆ, ಅಲ್ಲಿನ ಜನರು ರಾಮಾಯಣದ ಸಂಪ್ರದಾಯವನ್ನೂ ಸಹ ತಮ್ಮದೇ ಆದ ದೃಷ್ಟಿಕೋನದಿಂದ ನೋಡುತ್ತಾರೆ.
“ಶ್ರದ್ಧೆ ಮತ್ತು ಆಧುನಿಕ ವಿಚಾರಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ರಾಜಕೀಯ ಸಂದೇಶ!” – ಪ್ರಾಧ್ಯಾಪಕ ಸಂಜಯ ಭಾರದ್ವಾಜ್
ಈ ನಿರ್ಧಾರದ ಮೂಲಕ ಬಾಲೆನ್ ಶಾಹ ಅವರು ಹಿಂದೂ ಅಸ್ಮಿತೆಯಿಂದ ದೂರ ಸರಿಯುತ್ತಿಲ್ಲ ಎಂಬ ಸಂಕೇತವನ್ನು ನೀಡುತ್ತಿದ್ದಾರೆ; ಆದರೆ ರಾಜಪ್ರಭುತ್ವದ ಕಾಲದಲ್ಲಿದ್ದ ಆ ರೀತಿಯ ಹಿಂದುತ್ವವನ್ನು ಅವರು ಮಂಡಿಸುತ್ತಿಲ್ಲ, ರಾಜನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಆಗ ಪರಿಗಣಿಸಲಾಗುತ್ತಿತ್ತು. ಅಂದರೆ, ಈ ನಿರ್ಧಾರವು ಕೇವಲ ಧಾರ್ಮಿಕ ಸಂಕೇತವಾಗಿರದೆ, ಶ್ರದ್ಧೆ ಮತ್ತು ಆಧುನಿಕ ವಿಚಾರಗಳ ನಡುವೆ ಸಮತೋಲನ ಸಾಧಿಸುವ ಒಂದು ರಾಜಕೀಯ ಸಂದೇಶವಾಗಿದೆ ಎಂಬುದು ಪ್ರಾಧ್ಯಾಪಕ ಸಂಜಯ್ ಭಾರದ್ವಾಜ್ ಅವರ ಅಭಿಪ್ರಾಯವಾಗಿದೆ.
ಸಂಪಾದಕೀಯ ನಿಲುವುಬಾಲೇನ್ ಶಾಹ ಹಿಂದೂತ್ವದ ಹಾದಿಯಲ್ಲಿ ನಡೆಯುತ್ತಾರೆಯೇ? ಎಂಬುದು ಮುಂದಿನ ದಿನಗಳಲ್ಲೇ ತಿಳಿಯಲಿದೆ. ಆದರೆ, ಸದ್ಯಕ್ಕೆ ಅವರ ವಿಚಾರಗಳು ಭಾರತ ವಿರೋಧಿಯಾಗಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !