ನೇಪಾಳದಲ್ಲಿ ಈದ್ ದಿನದಂದು ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಧ್ವಂಸ

  • ನಮಾಜ್ ಸಮಯದಲ್ಲಿ ದೇವಸ್ಥಾನದಲ್ಲಿ ಧ್ವನಿವರ್ಧಕದ ಮೂಲಕ ಭಜನೆ ನಡೆಯುತ್ತಿದ್ದ ಕಾರಣಕ್ಕೆ ದಾಳಿ

  • ಅರ್ಚಕರಿಗೂ ಥಳಿತ

  • ದಾಳಿಯ ವಿರುದ್ಧ ಜನಸಮೂಹದಿಂದ ಹಿಂಸಾತ್ಮಕ ಪ್ರತಿಭಟನೆ

  • ಪ್ರತಿಭಟನೆ ತಡೆಯಲು ಪೊಲೀಸರಿಂದ ಗುಂಡಿನ ದಾಳಿ

ಕಾಠಮಂಡು (ನೇಪಾಳ) – ನೇಪಾಳದ ಕಪಿಲವಸ್ತುವಿನಲ್ಲಿ ಈದ್ ದಿನದಂದು ಮುಸಲ್ಮಾನರ ಗುಂಪೊಂದು ದೇವಸ್ಥಾನದಲ್ಲಿ ಧ್ವನಿವರ್ಧಕದ ಮೂಲಕ ಭಜನೆ ನಡೆಯುತ್ತಿದೆ ಎಂಬ ಕಾರಣಕ್ಕೆ ದೇವಸ್ಥಾನದ ಮೇಲೆ ದಾಳಿ ಮಾಡಿದೆ. ಮುಸಲ್ಮಾನರು ದೇವಸ್ಥಾನದ ಆವರಣಕ್ಕೆ ನುಗ್ಗಿ ಧ್ವಂಸಗೊಳಿಸಿದ್ದಾರೆ, ಧ್ವನಿವರ್ಧಕವನ್ನು ಒಡೆದು ಹಾಕಿದ್ದಾರೆ ಮತ್ತು ಅರ್ಚಕರಿಗೂ ಥಳಿಸಿದ್ದಾರೆ. ಈ ಘಟನೆಯು ಮಾರ್ಚ್ ೨೧ ರಂದು ಬೆಳಿಗ್ಗೆ ಮಹಾರಾಜಗಂಜ್ ಪ್ರದೇಶದ ಬರಗದಿ ಘಾಟ್ ಸಮೀಪದ ಕಾಳಿ ದೇವಸ್ಥಾನದಲ್ಲಿ ನಡೆದಿದೆ. ಇಲ್ಲಿ ಚೈತ್ರ ನವರಾತ್ರಿಯ ಅಂಗವಾಗಿ ಪೂಜೆ ಮತ್ತು ಭಜನೆ-ಕೀರ್ತನೆಗಳು ನಡೆಯುತ್ತಿದ್ದವು, ಅದೇ ಸಮಯದಲ್ಲಿ ಮುಸಲ್ಮಾನರು ನಮಾಜ್ ಮಾಡುತ್ತಿದ್ದರು. ಘಟನೆಯ ಸುದ್ದಿ ಹರಡುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರತಿಭಟನೆಗಾಗಿ ರಸ್ತೆಗಿಳಿದರು ಮತ್ತು ಹಿಂಸಾಚಾರ ಸಂಭವಿಸಿತು.

ಅನೇಕ ಕಡೆ ಸಂಚಾರ ನಿಷೇಧ (ಕರ್ಫ್ಯೂ)

ಬುಟಹಾನಿಯಾ ಪ್ರದೇಶದಲ್ಲಿ ಜನಸಮೂಹವು ಸೇರಿ ಆರೋಪಿ ಮುಸಲ್ಮಾನರನ್ನು ಬಂಧಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಲಾರಂಭಿಸಿತು. ಕೆಲವು ಕಡೆಗಳಲ್ಲಿ ಟಯರ್ ಸುಟ್ಟು ರಸ್ತೆ ತಡೆ ನಡೆಸಲಾಯಿತು, ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಮಾಹಿತಿ ತಿಳಿಯುತ್ತಿದ್ದಂತೆ ಆಡಳಿತ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಸಿಡಿಸಿದರು. ಆದರೂ ಜನಸಮೂಹವು ಆಕ್ರಮಣಕಾರಿಯಾದಾಗ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು. ಈ ಘಟನೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರು ಸೇರಿದಂತೆ ಒಟ್ಟು ೮ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಬರಗದಿ, ಮಹಾರಾಜಗಂಜ್ ಮಾರುಕಟ್ಟೆ, ಹರದೌನಾ ಮತ್ತು ಬಹಾದ್ದೂರಗಂಜ್ ಪ್ರದೇಶಗಳಲ್ಲಿ ಸಂಚಾರ ನಿಷೇಧ ಹೇರಲಾಗಿದೆ.

  • ಶೇ. ೮೨ ರಷ್ಟು ಹಿಂದೂಗಳಿರುವ ನೇಪಾಳದಲ್ಲಿ ಶೇ. ೫ ರಷ್ಟು ಇರುವ ಮುಸಲ್ಮಾನರು ಇಂತಹ ಧೈರ್ಯ ತೋರಿಸುತ್ತಾರೆ ಎಂದರೆ ಇದು ಹಿಂದೂಗಳಿಗೆ ಲಜ್ಜಾಸ್ಪದ ಸಂಗತಿ! ಇಂತಹ ಹಿಂದೂಗಳು ಹೊಡೆತ ತಿನ್ನಲು ಲಾಯಕ್ಕಾಗಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿಲ್ಲ!
  • ಮುಸಲ್ಮಾನರಿಗೆ ನಮಾಜ್ ಸಮಯದಲ್ಲಿ ದೇವಸ್ಥಾನದ ಮೇಲಿರುವ ಧ್ವನಿವರ್ಧಕದ ಶಬ್ದದಿಂದ ತೊಂದರೆಯಾಗುತ್ತದೆ; ಆದರೆ ಕಳೆದ ಹಲವು ದಶಕಗಳಿಂದ ದೇಶಾದ್ಯಂತ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳಿಂದ ಹಿಂದೂಗಳಿಗೆ ತೊಂದರೆಯಾಗುತ್ತಿದೆಯಲ್ಲವೇ, ಅದರ ಬಗ್ಗೆ ಏನು ಹೇಳುತ್ತೀರಿ?
  • ನೇಪಾಳದಲ್ಲಿ ಈಗ ಅಧಿಕಾರ ಬದಲಾವಣೆಯಾಗಿದ್ದು ಬಾಲೇಂದ್ರ ಶಾ ಅವರು ಪ್ರಧಾನಿ ಪಟ್ಟಕ್ಕೇರಲಿದ್ದಾರೆ. ಅವರು ಹಿಂದೂಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳುವರೇ?