ಮೂಲಸೌಕರ್ಯಗಳ ಮೇಲಿನ ದಾಳಿಗೆ ಖಂಡನೆ! – PM Narendra Modi Condemn Attack

  • ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸುವಾಗ ಪ್ರಧಾನಿ ಮೋದಿ ನೀಡಿದ ಹೇಳಿಕೆ

  • ಕಡಲ ಮಾರ್ಗಗಳನ್ನು ಮುಕ್ತವಾಗಿಡುವುದಕ್ಕೆ ಬೆಂಬಲ!

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದರು. ಅವರು ಡಾ. ಮಸೂದ್ ಅವರಿಗೆ ಈದ್ ಮತ್ತು ನವ್ರೋಜ್ (ಪಾರ್ಸಿ ಜನರ ಹೊಸ ವರ್ಷ) ಹಬ್ಬದ ಶುಭಾಶಯಗಳನ್ನು ಕೋರಿದರು. ಹಾಗೆಯೇ ಮಧ್ಯಪ್ರಾಚ್ಯದ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದರು. ಪ್ರಧಾನಿ ಮೋದಿ ಅವರು ಈ ಮಾಹಿತಿಯನ್ನು ‘ಎಕ್ಸ್’ (X) ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು,

೧. ನಾನು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದೆ. ಈ ಹಬ್ಬದ (ಈದ್) ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲಿದೆ ಎಂದು ನಾವು ಆಶಿಸುತ್ತೇವೆ.

೨. ಈ ಪ್ರದೇಶದ ಪ್ರಮುಖ ಮೂಲ ಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಲಾಯಿತು; ಇಂತಹ ಕೃತ್ಯಗಳಿಂದ ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ಉಂಟಾಗುತ್ತದೆ ಮತ್ತು ಜಾಗತಿಕ ಪೂರೈಕೆ ಸರಪಳಿ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

೩. ನೌಕಾಯಾನ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಮುದ್ರ ಮಾರ್ಗಗಳನ್ನು ಮುಕ್ತ ಹಾಗೂ ಸುರಕ್ಷಿತವಾಗಿಡುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಲಾಯಿತು.

೪. ಇರಾನ್‌ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗಾಗಿ ನೀಡುತ್ತಿರುವ ನಿರಂತರ ಸಹಕಾರಕ್ಕಾಗಿ ಇರಾನ್‌ಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.