|

ನಾಗ್ಪುರ – ಸನಾತನ ಧರ್ಮದ ಉತ್ಥಾನವಾಗಬೇಕು, ಇದು ಈಶ್ವರನ ಇಚ್ಛೆಯಾಗಿದೆ. ಇದಕ್ಕಾಗಿ ಭಾರತದ ಉತ್ಥಾನವಾಗುವುದು ಆವಶ್ಯಕವಾಗಿದೆ. ಇಡೀ ಜಗತ್ತು ಇಂದು ತತ್ತರಿಸುತ್ತಿದೆ. ಸ್ವಾರ್ಥ ಮತ್ತು ಪ್ರಾಬಲ್ಯಕ್ಕಾಗಿ ಯುದ್ಧಗಳು ನಡೆಯುತ್ತಿವೆ. ಮೂಲ ಧಾರಣೆ ಮತ್ತು ವಿಚಾರಗಳು ತಪ್ಪಾಗಿರುವುದರಿಂದ ಇವೆಲ್ಲವೂ ನಡೆಯುತ್ತಿವೆ. ಎಲ್ಲರನ್ನೂ ಒಟ್ಟಾಗಿ ಜೋಡಿಸುವ ದಾರ ಯಾರಿಗೂ ತಿಳಿದಿಲ್ಲ. ಜಗತ್ತಿಗೆ ಸಂಘರ್ಷದ ಅಗತ್ಯವಿಲ್ಲ, ಬದಲಾಗಿ ಸಾಮರಸ್ಯದ ಅಗತ್ಯವಿದೆ. ನಮ್ಮ ಋಷಿಮುನಿಗಳು ಮತ್ತು ಪೂರ್ವಜರ ಕೃಪೆಯಿಂದ ಎಲ್ಲರನ್ನೂ ಒಗ್ಗೂಡಿಸುವ ತತ್ವ ಕೇವಲ ಭಾರತದ ಕಡೆಗಿದೆ. ಪ್ರಸ್ತುತ ವಿಶ್ವದಾದ್ಯಂತ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ ಭಾರತದ ಕಡೆಗೆಯೇ ಇದಕ್ಕೆ ಉತ್ತರವಿದೆ. ಶಾಂತಿ ಎಂಬುದು ಭಾರತದ ಮೂಲ ಸ್ವರೂಪವಾಗಿದೆ. ತತ್ತರಿಸುತ್ತಿರುವ ಜಗತ್ತಿಗೆ ‘ಧರ್ಮ’ದ ಭದ್ರ ಆಧಾರ ನೀಡಿ ಅದರಲ್ಲಿ ಮತ್ತೆ ಸಮತೋಲನವನ್ನು ಪ್ರಸ್ಥಾಪಿಸುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ನಾಗ್ಪುರದಲ್ಲಿ ಹೇಳಿದರು.
ಪ.ಪೂ. ಸರಸಂಘಚಾಲಕರು ಮಂಡಿಸಿದ ಮಹತ್ವಪೂರ್ಣ ಸೂತ್ರಗಳು !
1. ಭಾರತದಲ್ಲಿನ ಜನರು ಮಾನವತೆಯ ನಿಯಮಗಳನ್ನು ಪಾಲಿಸುತ್ತಾರೆ, ಆದರೆ ಉಳಿದ ಜಗತ್ತು ಶಕ್ತಿಯ ಕಾನೂನನ್ನು ಪಾಲಿಸುತ್ತದೆ. ತತ್ತರಿಸುತ್ತಿರುವ ಈ ಜಗತ್ತಿಗೆ ಧರ್ಮದ ಆಧಾರ ನೀಡಿ ಅದರಲ್ಲಿ ಮತ್ತೆ ಸಮತೋಲನ ನಿರ್ಮಾಣ ಮಾಡುವುದು, ಇದೇ ನಮ್ಮ ಕಾರ್ಯವಾಗಿದೆ.
2. ಭಾರತವು ಮಾನವತಾವಾದದ ಮೇಲೆ ವಿಶ್ವಾಸವನ್ನಿಡುತ್ತದೆ, ಆದರೆ ಇತರ ಜನರು ಅಸ್ತಿತ್ವಕ್ಕಾಗಿ ಸಂಘರ್ಷ ಮಾಡುತ್ತಾರೆ. ‘ಯಾರು ಅತ್ಯಂತ ಸಮರ್ಥರಾಗಿದ್ದಾರೆಯೋ, ಅವರೇ ಉಳಿಯುತ್ತಾರೆ’ ಎಂಬ ತತ್ತ್ವದ ಮೇಲೆ ಜಗತ್ತಿಗೆ ವಿಶ್ವಾಸವಿದೆ. ಬೇರೆಯವರ ಮೇಲೆ ರಾಜ್ಯವಾಳುವುದು, ಇದು ಮೂಲತಃ ಸ್ವಾರ್ಥಿ ವೃತ್ತಿಯಾಗಿದೆ. ಸ್ವಾರ್ಥಿ ಹಿತಸಂಬಂಧ ಮತ್ತು ವರ್ಚಸ್ವವಾದದಿಂದ ಜಗತ್ತಿನಲ್ಲಿ ಸಂಘರ್ಷ ನಡೆಯುತ್ತಿದೆ.
3. ಯುದ್ಧಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನ 2000 ವರ್ಷಗಳಿಂದ ನಡೆಯುತ್ತಿದೆ; ಆದರೆ ಅದರ ಉತ್ತರ ಯಾರಿಗೂ ಸಿಕ್ಕಿಲ್ಲ ಮತ್ತು ವಾದವಿವಾದ ಹಾಗೂ ಕಟ್ಟರತೆ ಹೆಚ್ಚು ತೀವ್ರವಾಗುತ್ತಿದೆ. ಎಲ್ಲಾ ಸಮಸ್ಯೆಗಳು ಇದ್ದಂತೆಯೇ ಇವೆ. ವಾದ ಬೆಳೆಯುತ್ತಲೇ ಸಾಗಿದ್ದು, ಜಗತ್ತು ವಿನಾಶದ ಛಾಯೆಯಲ್ಲಿ ನಿಂತಿದೆ.
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister