ತಾನು ಹಿಂದೂ ಆಗಿದ್ದು ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಅಧಿಕಾರಿ ಎಂದು ಸುಳ್ಳು ಹೇಳಿದ್ದ ಹುಸೇನ್ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮಧ್ಯಪ್ರದೇಶದ 19 ವರ್ಷದ ಹಿಂದೂ ಯುವತಿಗೆ ತಾನು ಹಿಂದೂ ಎಂದು ನಂಬಿಸಿ, ಸೈಯದ್ ಸಲಾಮತ್ ಹುಸೇನ್ ಅಲಿಯಾಸ್ ಸಾಹಿಲ್ ಹುಸೇನ್ ಎಂಬಾತ ಉದ್ಯೋಗದ ಆಮಿಷವೊಡ್ಡಿದ್ದಾನೆ. ತಾನು ಸಿಆರ್‌ಪಿಎಫ್ ಅಧಿಕಾರಿ ಎಂದು ಆಕೆಯನ್ನು ನಂಬಿಸಿದ್ದನು. ಕೆಲಸಕ್ಕಾಗಿ ಆಕೆಯನ್ನು ಲಕ್ಷ್ಮಣಪುರಿಗೆ ಬರುವಂತೆ ಹೇಳಿ, ಅಲ್ಲಿಂದ ಬಲರಾಮಪುರಕ್ಕೆ ಕರೆದೊಯ್ದು ಮತಾಂತರ ಮಾಡುವುದು ಇವನ ಉದ್ದೇಶವಾಗಿತ್ತು. ರೈಲಿನಲ್ಲಿ ಕರೆದೊಯ್ಯುವಾಗ ಈತ ಯುವತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಯುವತಿ ದೂರು ನೀಡಿದ್ದಾಳೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ವಶಕ್ಕೆ ಪಡೆದಾಗ ಆತನ ಅಸಲಿ ಮುಖವಾಡ ಬಯಲಾಗಿದೆ. ಪೊಲೀಸರು ಈಗ ಆತನನ್ನು ಬಂಧಿಸಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ, ಹುಸೇನ್ ಇನ್‌ಸ್ಟಾಗ್ರಾಮ್ ಮೂಲಕ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಸಂತ್ರಸ್ತೆಯೊಂದಿಗೆ ಸ್ನೇಹ ಬೆಳೆಸಿದ್ದ ಎಂದು ತಿಳಿದುಬಂದಿದೆ. ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಏನೆಂದರೆ, ಈತ ಈ ಹಿಂದೆ ಪಿಲಿಭಿತ್‌ನ ಯುವತಿಯೊಬ್ಬಳನ್ನು ಮತಾಂತರ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದನು. ಆ ಪ್ರಕರಣದಲ್ಲಿ ಈತ ಜಾಮೀನಿನ ಮೇಲೆ ಹೊರಬಂದಿದ್ದನು.
(ಮತಾಂತರದ ಆರೋಪದ ಮೇಲೆ ಬಂಧಿತರಾದ ಇಂತಹ ವ್ಯಕ್ತಿಗಳನ್ನು ಸುಲಭವಾಗಿ ಬಿಡಬಾರದು. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ಅವರ ಮೇಲಿರುವ ಧಾರ್ಮಿಕ ಬೋಧನೆಗಳ ಪ್ರಭಾವವು ಶಿಕ್ಷೆಗಿಂತಲೂ ಹೆಚ್ಚಾಗಿರುತ್ತದೆ, ಹೀಗಾಗಿ ಅವರು ಜೀವನದ ಕೊನೆಯವರೆಗೂ ಮತಾಂತರದ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಇದನ್ನು ಗಂಭೀರವಾಗಿ ಪರಿಗಣಿಸಬೇಕು! -ಸಂಪಾದಕರು)
ಸಂಪಾಕೀಯ ನಿಲುವುಇಂತಹ ಘಟನೆಗಳು ನಡೆಯದಂತೆ ತಡೆಯಲು ಹಿಂದೂಗಳು ಜಾಗೃತರಾಗುವುದು ಅಗತ್ಯವಾಗಿದೆ. ‘ಯಾರಾದರೂ ಸ್ವತಃ ಮುಂದೆ ಬಂದು ನಮಗೆ ಉದ್ಯೋಗ ಏಕೆ ಕೊಡಿಸುತ್ತಾರೆ ?’ ಎಂಬ ವಾಸ್ತವಿಕ ವಿಚಾರವನ್ನು ಮಾಡಿದರೆ ಇಂತಹ ಅನೇಕ ಘಟನೆಗಳಿಗೆ ಕಡಿವಾಣ ಹಾಕಬಹುದು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!