ಲವ್ ಜಿಹಾದ್ ವಿರುದ್ಧ ಜಾಗೃತಿ ಮತ್ತು ಪ್ರತಿಜ್ಞೆ

ಬೆಂಗಳೂರು – ಗದಗನ ‘ಕ್ರಾಂತಿ ಸೇನಾ ಗದಗ’ ಮತ್ತು ‘ರಾಜರಾಜೇಶ್ವರಿ ಮಹಿಳಾ ಮಂಡಳಿ’ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ‘ದ ಕೇರಳ ಸ್ಟೋರಿ ೨’ ಚಲನಚಿತ್ರದ ವಿಶೇಷ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಉಪಕ್ರಮದ ಲಾಭವನ್ನು ಗದಗ ಜಿಲ್ಲೆಯ ಸುಮಾರು ೬೫೦ ಹಿಂದೂ ಯುವತಿಯರು ಪಡೆದರು. ಚಲನಚಿತ್ರವನ್ನು ನೋಡಿದ ನಂತರ ಯುವತಿಯರಿಗೆ ಲವ್ ಜಿಹಾದ್ ಸಂಕಟದ ಬಗ್ಗೆ ಎಚ್ಚರದಿಂದಿರಲು ಕರೆ ನೀಡಲಾಯಿತು ಹಾಗೂ ಇತರ ಹುಡುಗಿಯರನ್ನು ರಕ್ಷಿಸಲು ಸಾಮೂಹಿಕ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷ ಶ್ರೀ. ಬಾಬು ಬಾಕಳೆ ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ರಾಣಿ ರಾ. ಚಂದಾವರಿ ಉಪಸ್ಥಿತರಿದ್ದರು.
ಸಂಸ್ಕಾರದ ಬೀಜ ಅಗತ್ಯ! – ಮಾತೃ-ಭಗಿನಿಯರ ಅಭಿಪ್ರಾಯ

ಚಲನಚಿತ್ರ ವೀಕ್ಷಿಸಲು ಬಂದಿದ್ದ ಪೋಷಕರು ಮತ್ತು ತಾಯಂದಿರು ಪ್ರತಿಕ್ರಿಯಿಸಿ, ಪ್ರಸ್ತುತ ಕಾಲದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಯೋಗ್ಯ ಸಂಸ್ಕಾರಗಳನ್ನು ನೀಡುವುದು ಅಗತ್ಯವಾಗಿದೆ. ನಮ್ಮ ಮಕ್ಕಳಿಗೆ ಹಿಂದೂ ಸಂಸ್ಕೃತಿ ಮತ್ತು ಧರ್ಮದ ಮಹತ್ವವನ್ನು ತಿಳಿಸಿದರೆ ಮಾತ್ರ ಇಂತಹ ಸಂಕಟಗಳನ್ನು ತಡೆಯಲು ಸಾಧ್ಯ ಎಂದರು.
ಯುವತಿಯರಿಂದ ಎಚ್ಚರದಿಂದಿರುವ ನಿರ್ಧಾರ!

ಚಲನಚಿತ್ರ ನೋಡಿದ ನಂತರ ಯುವತಿಯರು ತಮ್ಮ ಭಾವನೆಗಳನ್ನು ಹಂಚಿಕೊಂಡರು. ‘ಕೇವಲ ಸ್ನೇಹದ ನೆಪದಲ್ಲಿ ಹಿಂದೂ ಹುಡುಗಿಯರನ್ನು ಜಾಲಕ್ಕೆ ಎಳೆಯಲಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ನಾವು ಎಚ್ಚರದಿಂದಿರುವುದು ಅಗತ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪ್ರದರ್ಶನದಿಂದಾಗಿ ಸಮಾಜದಲ್ಲಿ ಜಾಗೃತಿ ಮೂಡಲು ಹೆಚ್ಚು ಸಹಾಯವಾಯಿತು ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!