
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈ ಎರಡೂ ದೇಶಗಳು ಈದ್-ಉಲ್-ಫಿತರ್ (ರಮಜಾನ್ ಈದ್) ಹಿನ್ನೆಲೆಯಲ್ಲಿ ತಾತ್ಕಾಲಿಕ ಕದನ ವಿರಾಮ ಮಾಡಲು ನಿರ್ಧರಿಸಿವೆ. ಕೆಲವು ವಾರಗಳಿಂದ ನಡೆಯುತ್ತಿದ್ದ ಸಂಘರ್ಷ ಮತ್ತು ವೈಮಾನಿಕ ದಾಳಿಗಳ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕದನ ವಿರಾಮವು ಮಾರ್ಚ್ 19ರ ಮಧ್ಯರಾತ್ರಿಯಿಂದ ಜಾರಿಗೆ ಬಂದು ಈದ್ ಮುಗಿಯುವವರೆಗೆ ಇರಲಿದೆ. ‘ಈ ನಿರ್ಧಾರವನ್ನು ಸದ್ಭಾವನೆಯ ಸಂಕೇತವಾಗಿ ತೆಗೆದುಕೊಳ್ಳಲಾಗಿದೆ’ ಎಂದು ಪಾಕಿಸ್ತಾನ ಹೇಳಿದೆ; ಆದರೆ ‘ಗಡಿಯಾಚೆಗಿನ ದಾಳಿಯ ಸಂದರ್ಭದಲ್ಲಿ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ.
ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಧ್ಯಸ್ಥಿಕೆ ವಹಿಸಿವೆ ಎಂಬ ಮಾಹಿತಿ ಹೊರಬಂದಿದೆ. ಈ ದೇಶಗಳ ವಿನಂತಿಯ ನಂತರ ಎರಡೂ ಕಡೆಯವರು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾರೆ.
ಪಾಕ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಅಫ್ಘಾನಿಸ್ತಾನದ ಆರೋಪ
ಈದ್ ನಿಮಿತ್ತ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ನಂತರವೂ ಪಾಕಿಸ್ತಾನವು ದಾಳಿ ಮಾಡಿದೆ; ಅಫ್ಘಾನಿಸ್ತಾನದಿಂದ ಆರೋಪಿಸಿದೆ. ಅಫ್ಘಾನಿಸ್ತಾನದ ಪ್ರಕಾರ, ಪಾಕಿಸ್ತಾನವು ಕುನಾರ್ ಪ್ರಾಂತ್ಯದ ಮೇಲೆ ಇಲ್ಲಿಯವರೆಗೆ 72 ಫಿರಂಗಿ ಗುಂಡುಗಳನ್ನು ಹಾರಿಸಿದೆ. ಕುನಾರ್ ಮಾಹಿತಿ ವಿಭಾಗದ ಮುಖ್ಯಸ್ಥ ಜಿಯಾ-ಉರ್-ರೆಹಮಾನ್ ಸ್ಪಿನ್ ಘರ್ ಅವರ ಮಾಹಿತಿಯ ಪ್ರಕಾರ, 35 ಫಿರಂಗಿ ಗುಂಡುಗಳು ನರೈ ಜಿಲ್ಲೆಯ ಡೋಕಲಾಮ್, ಬಾರಿಕೋಟ್ ಮತ್ತು ಸೋಂಗಲಾಯಿ ಭಾಗಗಳಲ್ಲಿ ಬಿದ್ದಿವೆ. ಇನ್ನು 37 ಫಿರಂಗಿ ಗುಂಡುಗಳನ್ನು ಮನೋಗಯಿ ಜಿಲ್ಲೆಯ ವಿವಿಧ ಭಾಗಗಳ ಮೇಲೆ ಹಾರಿಸಲಾಗಿದೆ. ನರಾಯಿ ಜಿಲ್ಲೆಯಲ್ಲಿ ಇನ್ನೂ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಜೀವಹಾನಿಯಾದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಪಾಕಿಸ್ತಾನಿ ಸೈನ್ಯವು ಮನೆಗಳಿಗೆ ಮರಳುತ್ತಿರುವ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಅಫ್ಘಾನ್ ಕಡೆಯಿಂದ ಆರೋಪಿಸಲಾಗಿದೆ.
ಸಂಪಾಕೀಯ ನಿಲುವುವಿಶ್ವಾಸದ್ರೋಹದ ಇನ್ನೊಂದು ಹೆಸರೇ ಪಾಕಿಸ್ತಾನ ! ಎರಡೂ ದೇಶಗಳು ಇಸ್ಲಾಮಿಕ್ ಆಗಿದ್ದರೂ ಮತ್ತು ಈದ್ ನಿಮಿತ್ತ ಕದನ ವಿರಾಮ ಮಾಡಿದ್ದರೂ ಸಹ ಪಾಕಿಸ್ತಾನವು ಇಂತಹ ದಾಳಿ ಮಾಡಬಹುದಾದರೆ, ಅದು ಭಾರತದೊಂದಿಗೆ ಎಂದಾದರೂ ವಿಶ್ವಾಸದಿಂದ ನಡೆದುಕೊಳ್ಳಲು ಸಾಧ್ಯವೇ ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation