ಯುದ್ಧದ ಸಮಯದಲ್ಲಿ ಜನರಿಗೆ ಮನಃಶಾಂತಿ

ತೆಹ್ರಾನ್ – ಅಮೆರಿಕಾ ಮತ್ತು ಇಸ್ರೇಲ್, ಇರಾನ್ ವಿರುದ್ಧ ಸಧ್ಯ ಯುದ್ಧ ನಡೆಯುತ್ತಿದ್ದು, ಇದರಿಂದಾಗಿ ಇರಾನ್ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ, ಇರಾನ್ನ ಮುಸ್ಲಿಂ ಯುವತಿಯೊಬ್ಬಳು ಫಾರ್ಸಿ ಭಾಷೆಯಲ್ಲಿ ಶಿವಭಜನೆಯನ್ನು ಹಾಡಿದ್ದಾಳೆ. ಈ ಶಿವಭಜನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಆಗಿದೆ. ಈ ಭಜನೆಯು ಅನೇಕರ ಹೃದಯವನ್ನು ಆಳವಾಗಿ ಸ್ಪರ್ಶಿಸಿದೆ. ಭಗವಾನ್ ಶಿವನಿಗೆ ಅರ್ಪಿತವಾದ ಈ ಭಕ್ತಿಗೀತೆಯನ್ನು ಹಾಡುವ ಮೂಲಕ ಇರಾನ್ ಯುವತಿಯು ಶಾಂತಿ ಮತ್ತು ಏಕತೆಯ ಸಂದೇಶವನ್ನು ನೀಡಿದ್ದಾಳೆ. ಯುದ್ಧದ ಸಮಯದಲ್ಲಿ ಹೊರಬಂದಿರುವ ಈ ಭಜನೆಯು ಜನರಿಗೆ ಮನಃಶಾಂತಿಯನ್ನು ನೀಡುತ್ತಿದೆ.
ಈ ವಿಡಿಯೋದಲ್ಲಿ ಇರಾನ್ನ ಮುಸ್ಲಿಂ ಯುವತಿಯು ತನ್ನ ಮಾತೃಭಾಷೆಯಾದ ಫಾರ್ಸಿ (ಪರ್ಷಿಯನ್) ಭಾಷೆಯಲ್ಲಿ ಭಗವಾನ್ ಶಂಕರನ ಭಜನೆಯನ್ನು ಹಾಡುತ್ತಿರುವುದು ಕಂಡುಬಂದಿದೆ. ಈ ಭಜನೆಯಲ್ಲಿ ‘ಹರ ಹರ ಮಹಾದೇವ’ ಮತ್ತು ‘ಓಂ ನಮಃ ಶಿವಾಯ’ ಅಂತಹ ಮಂತ್ರಗಳನ್ನು ಪಠಿಸಲಾಗಿದೆ. ಅಲ್ಲಿನ ಕೇಳುಗರಿಗೆ ಇದು ಅತ್ಯಂತ ನವೀನ ಮತ್ತು ಮನಸ್ಸಿಗೆ ಹತ್ತಿರವಾಗುವ ಅನುಭವವಾಗಿದೆ. ಸಂಪೂರ್ಣವಾಗಿ ಭಿನ್ನ ಸಂಸ್ಕೃತಿಯಲ್ಲಿ ಬೆಳೆದ ಇರಾನಿ ಜನರು ಈ ಭಜನೆಯ ಮೂಲಕ ಭಾರತೀಯ ಆಧ್ಯಾತ್ಮಿಕ ಶಕ್ತಿಯ ಒಂದು ಝಲಕನ್ನು ಅನುಭವಿಸುತ್ತಿದ್ದಾರೆ. ಈ ಹಾಡಿನಲ್ಲಿ ಪ್ರಾಚೀನ ಪರ್ಷಿಯನ್ (ಇರಾನ್) ಮತ್ತು ಹಿಂದೂ ಸಂಸ್ಕೃತಿಯ ನಡುವಿನ ಐತಿಹಾಸಿಕ ಸಂಬಂಧವನ್ನು ತೋರಿಸಲಾಗಿದೆ. ಇಡೀ ಜಗತ್ತು ಯುದ್ಧ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಈ ಭಜನೆಯು ಜನರ ನಡುವೆ ಭರವಸೆ ಮತ್ತು ಶಾಂತಿಯ ಸಂದೇಶವನ್ನು ಹರಡಿದೆ. (ಆಧ್ಯಾತ್ಮದಲ್ಲಿ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಉತ್ತರವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border