ಗಂಗಾನದಿಯಲ್ಲಿ ವಿಹಾರ ದೋಣಿಯಲ್ಲೇ ಇಫ್ತಾರ್ ಔತಣಕೂಟ ನಡೆಸಿ ನದಿಗೆ ಮೂಳೆಗಳನ್ನು ಎಸೆದ ಮುಸಲ್ಮಾನರು

೧೪ ಮುಸಲ್ಮಾನರ ಬಂಧನ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿನ ಗಂಗಾನದಿಯಲ್ಲಿ ವಿಹಾರ ಮಾಡುತ್ತಿದ್ದ ದೋಣಿಯೊಂದರಲ್ಲಿ ಇಫ್ತಾರ್ ಔತಣಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಾಂಸಾಹಾರಿ ಪದಾರ್ಥಗಳನ್ನು ಸೇವಿಸಿ, ಮೂಳೆಗಳು ಸೇರಿದಂತೆ ಉಳಿದ ಆಹಾರದ ಭಾಗಗಳನ್ನು ನದಿಗೆ ಎಸೆಯಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗತೊಡಗಿತು. ಈ ಪ್ರಕರಣದಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಮಹಾನಗರ ಅಧ್ಯಕ್ಷ ರಜತ್ ಜೈಸ್ವಾಲ್ ಅವರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ. ಆ ನಂತರ ಪೊಲೀಸರು ತನಿಖೆ ನಡೆಸಿ ೧೪ ಮುಸಲ್ಮಾನ್ ಯುವಕರನ್ನು ಬಂಧಿಸಿದ್ದಾರೆ.

ಈ ಘಟನೆಯ ಕುರಿತು ವಾರಣಾಸಿ ಮಹಾನಗರ ಪಾಲಿಕೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಾನಗರ ಪಾಲಿಕೆಯ ಜನ ಸಂಪರ್ಕಾಧಿಕಾರಿಗಳು ಈ ಕೃತ್ಯವು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಹೇಳಿದ್ದಾರೆ. ‘ಗಂಗಾನದಿಯ ಶುದ್ಧತೆ ಮತ್ತು ಪವಿತ್ರತೆಯನ್ನು ಕಾಪಾಡಲು ಮಹಾನಗರ ಪಾಲಿಕೆಯ ನಿಯಮಗಳಲ್ಲಿ ಸ್ಪಷ್ಟ ಮಾರ್ಗಸೂಚಿಗಳಿವೆ. ಈ ನಿಯಮಗಳ ಪ್ರಕಾರ, ಘಾಟ್‌ಗಳಲ್ಲಿ ಅಥವಾ ನದಿಯ ಮಧ್ಯಭಾಗದಲ್ಲಿ ಯಾವುದೇ ಚಟುವಟಿಕೆ ನಡೆಸುವಾಗ ಧಾರ್ಮಿಕ ಭಾವನೆಗಳು ಮತ್ತು ಸ್ವಚ್ಛತೆಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ’ ಎಂದು ಹೇಳಿದ್ದಾರೆ. ‘ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕಣ್ಗಾವಲು ಮತ್ತು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು, ಇದರಿಂದಾಗಿ ಗಂಗಾನದಿಯ ಪವಿತ್ರತೆ ಮತ್ತು ಶ್ರದ್ಧೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗುವುದು’, ಎಂದು ಆಡಳಿತ ಮಂಡಳಿ ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ದುಸ್ಸಾಹಸ ನಡೆಯುತ್ತದೆ; ಏಕೆಂದರೆ ಅವರಿಗೆ ಹಿಂದೂಗಳ ಭಯವಾಗಲಿ ಅಥವಾ ಕಾನೂನಿನ ಭಯವಾಗಲಿ ಇಲ್ಲ! ಈ ಸ್ಥಿತಿಯನ್ನು ಬದಲಾಯಿಸಲಿಕ್ಕಾಗಿಯೇ ಹಿಂದೂ ರಾಷ್ಟ್ರ ಬೇಕು!