ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರ ಇಚ್ಛೆ

ಹೆಲ್ಸಿಂಕಿ (ಫಿನ್ಲೆಂಡ್) – ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಜಗತ್ತಿನ ವಿವಿಧ ರಾಷ್ಟ್ರಗಳು ಪ್ರಯತ್ನಿಸುವುದು ಅಗತ್ಯ ಎಂಬ ನಿರೀಕ್ಷೆಯನ್ನು ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೆರಿಕಾ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಡಿಸಲು ಯುರೋಪ್ ಮತ್ತು ವಿಶೇಷವಾಗಿ ಭಾರತವು ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕೆಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ಇರಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಉಲ್ಲೇಖಿಸಿದ ಅವರು, ‘ಭಾರತವು ನಿಜವಾಗಿಯೂ ಈ ನಿಟ್ಟಿನಲ್ಲಿ ಮುಂದಾದರೆ ಅದು ಅತ್ಯಂತ ಉಪಯುಕ್ತವಾಗಲಿದೆ. ಭಾರತದ ಮೇಲೆ ಎರಡೂ ಕಡೆಯವರಿಗೆ ನಂಬಿಕೆ ಇರುವುದರಿಂದ ಇದು ಸಾಧ್ಯ ಎಂದು ನನಗನ್ನಿಸುತ್ತದೆ’, ಎಂದು ಅಲೆಕ್ಸಾಂಡರ್ ವಿಶ್ವಾಸ ವ್ಯಕ್ತಪಡಿಸಿದರು.
ಸ್ಟಬ್ ಅವರು ಇದೇ ತಿಂಗಳ ಮಾರ್ಚ್ ೪ ರಿಂದ ೭ ರ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಇತ್ತೀಚೆಗೆ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ಯುದ್ಧ ಪರಿಸ್ಥಿತಿಯನ್ನು ಶಾಂತಗೊಳಿಸಲು ಉಭಯ ದೇಶಗಳಿಗೆ ಕದನ ವಿರಾಮಕ್ಕೆ ಕರೆ ನೀಡಿದ್ದರು.
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ