ಅಸ್ಸಾಂ, ಬಂಗಾಳ, ಕೇರಳ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಘೋಷಣೆ

ಮೇ ೪ ರಂದು ಫಲಿತಾಂಶ!

​ನವ ದೆಹಲಿ – ಕೇಂದ್ರ ಚುನಾವಣಾ ಆಯೋಗವು ಅಸ್ಸಾಂ, ಬಂಗಾಳ, ಕೇರಳ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಘೋಷಿಸಿದೆ. ​ಅಸ್ಸಾಂ, ಕೇರಳ ಮತ್ತು ಪುದುಚೇರಿ ಈ ಮೂರು ರಾಜ್ಯಗಳಲ್ಲಿ ಏಪ್ರಿಲ್ ೯ ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ​ಬಂಗಾಳದಲ್ಲಿ ಏಪ್ರಿಲ್ ೨೩ ಮತ್ತು ಏಪ್ರಿಲ್ ೨೯ ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ​ತಮಿಳುನಾಡಿನಲ್ಲಿ ಏಪ್ರಿಲ್ ೨೩ ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ​ಈ ಎಲ್ಲಾ ಚುನಾವಣೆಗಳ ಫಲಿತಾಂಶವು ಮೇ ೪ ರಂದು ಪ್ರಕಟವಾಗಲಿದೆ.